ಹೆಣ್ಣಿನ ಕೌಟುಂಬಿಕ, ಸಾಮಾಜಿಕ ಹೊಣೆಯೇ `ದೊಡ್ಡ ತಾಯಿ’ ಕೃತಿ
ಮೈಸೂರು

ಹೆಣ್ಣಿನ ಕೌಟುಂಬಿಕ, ಸಾಮಾಜಿಕ ಹೊಣೆಯೇ `ದೊಡ್ಡ ತಾಯಿ’ ಕೃತಿ

January 28, 2021

ಎರಡು ಕಾಲಘಟ್ಟಗಳ ನಡುವಿನ ಸಾಂಸ್ಕøತಿಕ ವಸಾಹತುಶಾಹಿಯ ಸಾಮಾಜಿಕ ಬದುಕಿನ ವಿವಿಧ ಸ್ತರಗಳ ದನಿಯೇ `ದೊಡ್ಡ ತಾಯಿ’ ಕಾದಂ ಬರಿಯ ಹೂರಣವಾಗಿದೆ. ಇದರ ಲೇಖಕರು ಖ್ಯಾತ ಕಾದಂಬರಿಕಾರರಾದ ಎಂ.ಎಸ್.ವೇದಾ ಅವರು. ದೊಡ್ಡ ತಾಯಿ ಇಲ್ಲಿ ಒಂದು ಹೆಣ್ಣನ್ನು ಪ್ರತಿನಿಧಿಸುತ್ತಿದ್ದು, ಭಾರ ತೀಯ ಕೆಳ, ಮಧ್ಯಮ ವರ್ಗದ ಸ್ವಾಭಿಮಾನಿಯಾದ ದೊಡ್ಡ ತಾಯಿಯ ಜೀವನವನ್ನು ಹೆಣೆಯುತ್ತಲೇ ಆಕೆಯ ಕೌಟುಂಬಿಕ ಜವಾಬ್ದಾರಿಯೊಂದಿಗೆ ಸಾಮಾಜಿಕ ಜೀವನದ ವೃತ್ತಾಂತವನ್ನು ಸಮರ್ಥವಾಗಿ ಲೇಖಕರು ಕಟ್ಟಿಕೊಟ್ಟಿ ದ್ದಾರೆ. ನಂಜನಗೂಡು ಸುತ್ತಮುತ್ತಲ ಹಳೆಯ ಮೈಸೂರಿನ ಪ್ರಾದೇಶಿಕತೆಯ ಸೊಗಡು ಈ ಕಾದಂಬರಿಯಲ್ಲಿ ಮಿಳಿತ ಗೊಂಡಿದೆ. ಬದುಕಿನ ಮೇಲಿನ ಅಗಾಧ ಪ್ರೀತಿ, ಕುಟುಂಬ ಪ್ರೇಮ, ಅಹಂ, ಆತ್ಮಾಭಿಮಾನ, ಬಂದಂತೆ ಬದುಕು ಸ್ವೀಕರಿಸುವ ನಿರ್ಲಿಪ್ತತೆ ಮತ್ತು ಗಟ್ಟಿತನ, ಬಡತನಕ್ಕೆ, ದೈಹಿಕ ಶ್ರಮಕ್ಕೆ ಅಂಜದೆ ಸಣ್ಣ ಸಂತೋಷವನ್ನು ಸಂಭ್ರಮಿಸುವ ಉತ್ಕಟ ಮನೋಭಾವ, ಸಂಯಮ, ಗಂಡ-ಮಕ್ಕಳನ್ನು ಪೊರೆಯುವ ವಾತ್ಸಲ್ಯಮಯಿ ಯಾಗಿ ಜೀವ ಚೈತನ್ಯದ ಬಿಂದುವಾಗಿರುವ `ದೊಡ್ಡ ತಾಯಿ’ ಒಂದು ಶಕ್ತಿಯುತ ಪಾತ್ರವಾಗಿದೆ. 600ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ `ದೊಡ್ಡ ತಾಯಿ’ ಕಾದಂಬರಿ ಸಂವಹನ ಪ್ರಕಾಶನದಿಂದ ಹೊರಬಂದಿದ್ದು, 625 ರೂ. ಬೆಲೆ ನಿಗದಿಯಾಗಿದೆ. ಒಟ್ಟಾರೆ ದೊಡ್ಡ ತಾಯಿ ಕಾದಂಬರಿ ಒಂದು ಹೆಣ್ಣಿನ ಹಲವು ಹೊಣೆಗಾರಿಕೆಗಳನ್ನು ನಿರ್ವಹಿಸುವ ರೀತಿಯನ್ನು ಲೇಖಕಿ ಎಂಎಸ್.ವೇದಾ ಅವರು ಸಮರ್ಥವಾಗಿ, ಸವಿವರವಾಗಿ ನಿರೂಪಿಸಿದ್ದಾರೆ.

 

Translate »