ಎಐಬಿಕೆಎಂಎಸ್ ವತಿಯಿಂದ ಮೈಸೂರಿನ ಪತ್ರಕರ್ತ ರಾಜಕುಮಾರ್ ಭಾವಸಾರ್‍ಗೆ ರಾಜ್ಯಮಟ್ಟದ ಕೊರೊನಾ ವಾರಿಯರ್ಸ್ ಪ್ರಶಸ್ತಿ
ಮೈಸೂರು

ಎಐಬಿಕೆಎಂಎಸ್ ವತಿಯಿಂದ ಮೈಸೂರಿನ ಪತ್ರಕರ್ತ ರಾಜಕುಮಾರ್ ಭಾವಸಾರ್‍ಗೆ ರಾಜ್ಯಮಟ್ಟದ ಕೊರೊನಾ ವಾರಿಯರ್ಸ್ ಪ್ರಶಸ್ತಿ

January 28, 2021

ಮೈಸೂರು, ಜ.27- ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ (ಎಐಬಿಕೆ ಎಂಎಸ್) ರಾಜ್ಯ ಘಟಕ ನೀಡಿದ ಕೊರೊನಾ ವಾರಿಯರ್ಸ್ ರಾಜ್ಯ ಮಟ್ಟದ ಪ್ರಶಸ್ತಿಗೆ ಮೈಸೂರಿನ ಪತ್ರಕರ್ತ ರಾಜಕುಮಾರ್ ಭಾವಸಾರ್ ಭಾಜನರಾಗಿದ್ದಾರೆ.

ಎಐಬಿಕೆಎಂಎಸ್ ಪರವಾಗಿ ರಾಜ್ಯ ಹಿರಿಯ ಉಪಾಧ್ಯಕ್ಷ ಜಯರಾಮರಾವ್ ಲಾಳಿಗೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್‍ರಾವ್ ಅವರು ಮೈಸೂರಿನ ಕಬೀರ್ ರಸ್ತೆಯಲ್ಲಿ ರುವ ಶ್ರೀ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ರಾಜಕುಮಾರ್ ಭಾವಸಾರ್ ಅವರಿಗೆ ಶಾಲು ಹೊದಿಸಿ, ಪ್ರಶಸ್ತಿ ನೀಡಿ ಗೌರವಿಸಿದರು. ಜೊತೆಗೆ ಮೈಸೂರಿನ ವೈದ್ಯ ದಂಪತಿ ಡಾ.ರಾಕೇಶ್ ಬಾಂಬೋರೆ ಮತ್ತು ಡಾ.ಆರತಿ ಬಾಂಬೋರೆ ಅವರಿಗೂ ಅವರ ಮನೆಯಲ್ಲಿ ಕೊರೊನಾ ವಾರಿಯರ್ಸ್ ಪ್ರಶಸ್ತಿ ನೀಡಿ ಗೌರವಿಸಿದರು. ಎಐಬಿಕೆಎಂಎಸ್ ರಾಜ್ಯ ಘಟಕವು ಮೈಸೂರಿನ ಮೂವರು ಸೇರಿದಂತೆ ದೇಶದ 270 ಮಂದಿಗೆ ಈ ಪ್ರಶಸ್ತಿ ನೀಡಿದೆ. ಈ ಪೈಕಿ ರಾಜ್ಯದ 140 ಮಂದಿ ಕೊರೊನಾ ವಾರಿಯರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಅಶೋಕ್‍ರಾವ್ ನಾಜûರೆ, ಮುಖಂಡ ಪ್ರದೀಪ್ ಉಪಸ್ಥಿತರಿದ್ದರು.

 

 

Translate »