ಭಾರತೀಯ ಸಂಗೀತಕ್ಕೆ ಪ್ರಪಂಚವನ್ನೇ ಮರೆಸುವ ಶಕ್ತಿಯಿದೆ: ಡಾ.ಮೈಸೂರು ಮಂಜುನಾಥ್
ಮೈಸೂರು

ಭಾರತೀಯ ಸಂಗೀತಕ್ಕೆ ಪ್ರಪಂಚವನ್ನೇ ಮರೆಸುವ ಶಕ್ತಿಯಿದೆ: ಡಾ.ಮೈಸೂರು ಮಂಜುನಾಥ್

January 28, 2021

ಮೈಸೂರು, ಜ. 27- ಭಾರತೀಯ ಸಂಗೀತಕ್ಕೆ ಪ್ರಪಂಚವನ್ನೇ ಮರೆಸುವ ಶಕ್ತಿಯಿದೆ ಎಂದು ಖ್ಯಾತ ಅಂತಾ ರಾಷ್ಟ್ರೀಯ ವಯೊಲಿನ್ ವಾದಕ ರಾದ ಡಾ. ಮೈಸೂರು ಎಂ. ಮಂಜುನಾಥ್ ಹೇಳಿದರು.

ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವ ರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-8’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತೀಯ ಸಂಗೀತದಲ್ಲಿ ವಯೊಲಿನ್’ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡುತ್ತಾ ಭಾರತೀಯ ಸಂಗೀತ ಉಳಿದ ಎಲ್ಲ ಸಂಗೀತದ ಬಗೆಗಳಿಗೆ ಅಡಿಪಾಯವಿದ್ದಂತೆ. ಸಂಗೀತಕ್ಕೆ ಸ್ವರಗಳು ತಾಯಿ ಸ್ವರೂಪವಾದರೆ ಲಯ ತಂದೆಯ ಸ್ವರೂಪ. ವಯೊಲಿನ್‍ಗೆ ಪ್ರಪಂಚದ ಸಂಗೀತದ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ ಎಂದರು. ಕಾರ್ಯಕ್ರಮ ದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಶ್ರೀಮತಿ ಸುಮಂಗಳಾ ಜಂಗಮಶೆಟ್ಟಿ ಪ್ರಾರ್ಥಿಸಿದರು. ಆರ್.ಎಸ್.ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

 

Translate »