ಮೂಲಭೂತ ಹಕ್ಕುಗಳನ್ನೇ ಹತ್ತಿಕ್ಕುವ ಕೆಲಸ: ನಾ.ದಿವಾಕರ
ಮೈಸೂರು

ಮೂಲಭೂತ ಹಕ್ಕುಗಳನ್ನೇ ಹತ್ತಿಕ್ಕುವ ಕೆಲಸ: ನಾ.ದಿವಾಕರ

January 28, 2021

ಮೈಸೂರು, ಜ. 27- ಕಾನೂನುಗಳು ಮೂಲಭೂತ ಹಕ್ಕುಗಳಿಗೆ ಚ್ಯುತಿಬಾರದಂತೆ ನೋಡಿಕೊಳ್ಳಬೇಕು. ಆದರೆ ಇಂದಿನ ಆಡಳಿತ ಹಕ್ಕುಗಳನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿವೆ ಎಂದು ಪ್ರಗತಿಪರ ಚಿಂತಕ ನಾ.ದಿವಾಕರ ಹೇಳಿದರು.

ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ರುವ ಕರ್ನಾಟಕ ಬುದ್ಧಧಮ್ಮ ಸಮಿತಿ ವತಿಯಿಂದ ಆಯೋಜಿಸಿದ್ದ ಭಾರತ ಗಣತಂತ್ರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತ ನಾಡಿದರು. ಮಾತನಾಡುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿವೆ. ಕ್ರೌರ್ಯ ಹಾಗೂ ದಬ್ಬಾಳಿಕೆ ಆಡಳಿತ ನಿಲ್ಲಬೇಕು. ಸಾಂವಿಧಾನಿಕ ಚೌಕಟ್ಟಿನಲ್ಲಿ ಆಡಳಿತ ನಡೆದಾಗ ದೇಶದಲ್ಲಿ ಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ. ಸಾಮಾಜಿಕ ಸಂಬಂಧಗಳು ಪ್ರಜಾಪ್ರಭುತ್ವದ ಮೂಲ ಬೇರುಗಳಾಗಿವೆ. ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವಕ್ಕೆ ಸಂವಿಧಾನದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದರು.

ಕೊಳ್ಳೇಗಾಲ ತಾಲೂಕಿನ ಚೆನ್ನಾಲಿಂಗಾನಹಳ್ಳಿ ಜೇತವನದ ಮನೋರಕ್ಖಿತ ಭಂತೇಜಿ, ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಭಯಹುಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತಿದ್ದು, ಪ್ರಜ್ಞಾವಂತರಾದಾಗ ಮಾತ್ರ ಇವುಗಳನ್ನು ಧೈರ್ಯವಾಗಿ ಎದುರಿಸಬಹುದು. ಹೊಟ್ಟೆಪಾಡಿನ ಶಿಕ್ಷಣಕ್ಕಿಂತ ಜ್ಞಾನದ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ ಎಂದರು. ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಮಾಜ ಸೇವಕ ಡಾ.ಪುಟ್ಟಸಿದ್ದಯ್ಯ ಹಾಗೂ ರಾಜಮ್ಮ ದಂಪತಿಯನ್ನು ಸನ್ಮಾ ನಿಸಲಾಯಿತು. ಸಮಿತಿಯ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ, ವಕೀಲ ರಾಜು, ಬೋರಯ್ಯ, ಡಾ.ಜಗನ್ನಾಥ್, ಪ್ರ್ರಾಧ್ಯಾಪಕ ಕ್ರಾಂತಿರಾಜ್ ಒಡೆಯರ್, ಡಾ.ಕುಪ್ನಳ್ಳಿ ಎಂ.ಬೈರಪ್ಪ, ನಿಸರ್ಗ ಸಿದ್ದರಾಜು, ಸುರೇಶ್, ಶಿಕ್ಷಕ ಮಹದೇವಸ್ವಾಮಿ, ಯೋಗೇಶ್, ವಿಜಯ್, ವಿಶಾಲ್ ಇನ್ನಿತರರು ಹಾಜರಿದ್ದರು.

Translate »