ಮೈಸೂರಿನ ಪ್ರಥಮ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಆರಂಭ
ಮೈಸೂರು

ಮೈಸೂರಿನ ಪ್ರಥಮ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಆರಂಭ

January 28, 2021

ಮೈಸೂರು, ಜ.27(ಎಂಟಿವೈ)- ಪರಿ ಸರ ಮಾಲಿನ್ಯ ತಡೆಗಟ್ಟುವುದರೊಂದಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ದರದಿಂದ ಕಂಗೆಟ್ಟಿರುವ ಜನರು ಈಗ `ಬ್ಯಾಟರಿ ಚಾಲಿತ ವಾಹನ’ಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂ ರಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಮೊದಲ ಚಾರ್ಜಿಂಗ್ ಕೇಂದ್ರವನ್ನು `ಚಾಮುಂಡೇ ಶ್ವರಿ ವಿದ್ಯುತ್ ಸರಬರಾಜು ನಿಗಮ’ (ಸೆಸ್ಕ್) ಆರಂಭಿಸಿದೆ. ನಗರದಲ್ಲಿ ಶೀಘ್ರದಲ್ಲೇ ಇನ್ನೂ 2 ಚಾರ್ಜಿಂಗ್ ಕೇಂದ್ರ ಆರಂಭಿಸಲಿದೆ.

ಮೈಸೂರು-ಹುಣಸೂರು ಮುಖ್ಯರಸ್ತೆ ಯಲ್ಲಿ ಹಿನಕಲ್ ಬಳಿ ವಿಜಯನಗರ ಬಡಾ ವಣೆಗೆ ಸೇರಿದಂತಿರುವ `ಸೆಸ್ಕ್’ ಕಚೇರಿ ಆವರಣದಲ್ಲಿ ನಿರ್ಮಿಸಿರುವ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮನೋ ಹರ್ ಎಂ.ಬೇವಿನಮರ ಉದ್ಘಾಟಿಸಿದರು.

ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ವಿಜಯನಗರದ ಸೆಸ್ಕ್ ಆವ ರಣದಲ್ಲಿ `ಎನರ್ಜಿ ಎಫಿಶಿಯೆನ್ಸಿ ಸರ್ವಿಸ್ ಲಿ.’ ಸಹಯೋಗದಲ್ಲಿ 8 ಲಕ್ಷ ರೂ. ವೆಚ್ಚ ದಲ್ಲಿ ಮೈಸೂರಿನ ಮೊದಲ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಕೇಂದ್ರದ ಇಂಧನ ಇಲಾಖೆ ನೀಡಿದ ಪ್ರೋತ್ಸಾಹ ದಿಂದ ಈ ಘಟಕ ನಿರ್ಮಿಸಲಾಗಿದೆ. ವಿದ್ಯುತ್ ಚಾಲಿತ ವಾಹನಗಳ ಮಾಲೀಕರಿಗೆ ಈ ಚಾರ್ಜಿಂಗ್ ಕೇಂದ್ರದ ಬಗ್ಗೆ ತಿಳಿಸಿ ಕೊಡುವ ಸಲುವಾಗಿ ಕೆಲವು ದಿನÀ ಉಚಿತ ಚಾರ್ಜಿಂಗ್ ಮಾಡಲಾಗುವುದು. ಬಳಿಕ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿ ಷನ್(ಕೆಇಆರ್‍ಸಿ) ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‍ಗೆ ದರ ನಿಗದಿ ಮಾಡಲಿದೆ ಎಂದರು.

ಕುವೆಂಪುನಗರ ಹಾಗೂ ರಾಜೇಂದ್ರ ನಗರದಲ್ಲಿನ ಸೆಸ್ಕ್ ಕಚೇರಿ ಆವರಣದಲ್ಲೂ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸ ಲಿದ್ದು, ಕಾಮಗಾರಿ ನಡೆದಿದೆ. ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ ಎಂದರು.

2 ವಿಧದ ಚಾರ್ಜ್: ಈ ಚಾರ್ಜಿಂಗ್ ಕೇಂದ್ರದಲ್ಲಿ ಎಸಿ ಹಾಗೂ ಡಿಸಿ ವಿಧಾನ ದಲ್ಲಿ ಚಾರ್ಜಿಂಗ್ ಮಾಡಲಾಗುತ್ತದೆ. ಎಸಿ ವಿಭಾಗದಲ್ಲಿ ಚಾರ್ಜ್ ಮಾಡುವಾಗ ಹೆಚ್ಚು ಸಮಯ ಹಿಡಿಯಲಿದೆ. ಹಲವು ವಾಹನ ಗಳಿಗೆ ಎಸಿ ವಿಧಾನದ ಚಾರ್ಜಿಂಗ್ ವ್ಯವಸ್ಥೆ ಅಳವಡಿಸಿರುತ್ತದೆ. ಕಾರ್‍ಗೆ 8ರಿಂದ 10 ಗಂಟೆವರೆಗೂ ಚಾರ್ಜ್ ಮಾಡಬೇಕು. ಈ ಹೊಸ ಕೇಂದ್ರದಲ್ಲಿ ಎಸಿ ವಿಧಾನದಲ್ಲಿ ದ್ವಿಚಕ್ರ ವಾಹನ, 3 ಹಾಗೂ 4 ಚಕ್ರದ ವಾಹನಗಳಿಗೆ ಚಾರ್ಜ್ ಮಾಡಬಹುದಾಗಿದೆ. ಒಂದೇ ಬಾರಿ 3 ವಾಹನಗಳಿಗೂ ಚಾರ್ಜ್ ಮಾಡಲು ಪ್ರತ್ಯೇಕ ಪ್ಲಗ್ ಇದೆ. ಡಿಸಿ ವಿಧಾನದಲ್ಲಿ ನೇರ ವಾಗಿ ಬ್ಯಾಟರಿಯನ್ನೇ ಚಾರ್ಜ್ ಮಾಡ ಲಾಗುತ್ತದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಹರಿಯುವ ಈ ವ್ಯವಸ್ಥೆಯಲ್ಲಿ 60ರಿಂದ 80 ನಿಮಿಷದೊಳಗೆ 1 ಕಾರು ಪೂರ್ಣ ಚಾರ್ಜ್ ಮಾಡಬಹುದು ಎಂದರು.

ಪೆಟ್ರೋಲ್ ತುಟ್ಟಿ: ಪೆಟ್ರೋಲ್ ಬೆಲೆ 100 ರೂ. ಗಡಿ ಸಮೀಪಿಸಿದೆ. ಡೀಸೆಲ್ ದರ 80 ರೂ. ಗಡಿದಾಟುವಂತೆ ಕಾಣುತ್ತಿದೆ. ಇಂಧನ ಬೆಲೆ ನಿತ್ಯ ಹೆಚ್ಚುತ್ತಿರುವುದರಿಂದ ಜನರು ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರಿಂದ ವಿದ್ಯುತ್ ಚಾಲಿತ ವಾಹನಗಳ ಮಾರಾಟ ಹೆಚ್ಚಲಿದೆ. ಹಾಗಾಗಿ ಪೆಟ್ರೋಲ್ ಬಂಕ್ ಮಾದರಿಯ ಚಾರ್ಜಿಂಗ್ ಘಟಕದÀ ಅವಶ್ಯ ಕತೆ ಇತ್ತು. ಸೆಸ್ಕ್ ಆವರಣದ ಚಾರ್ಜಿಂಗ್ ಕೇಂದ್ರ ಮುಂದೆ ಬಹುಬೇಡಿಕೆಯ ಕೇಂದ್ರವಾಗಲಿದೆ ಎಂದರು.

 

 

Translate »