ಕೊರೊನಾ ಸೋಂಕು ಬಹುತೇಕ ಇಳಿಮುಖ: ರಾಜ್ಯದಲ್ಲಿ 3 ಸಾವು
ಮೈಸೂರು

ಕೊರೊನಾ ಸೋಂಕು ಬಹುತೇಕ ಇಳಿಮುಖ: ರಾಜ್ಯದಲ್ಲಿ 3 ಸಾವು

January 28, 2021

ಮೈಸೂರು,ಜ.27(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಬುಧವಾರ ಜಿಲ್ಲೆಯಲ್ಲಿ ಒಂದೂ ಕೊರೊನಾ ಸಾವಿನ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಬುಧವಾರ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ 27 ಸೋಂಕಿತರು ಗುಣವಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,299ಕ್ಕೆ ಏರಿಕೆಯಾಗಿದೆ. 52,054 ಮಂದಿಗೆ ಗುಣವಾ ದಂತಾಗಿದೆ. ಈವರೆಗೆ 1,026 ಮಂದಿ ಸಾವನ್ನಪ್ಪಿದಂತಾಗಿದೆ. 219 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 67 ಮಂದಿ ಸೋಂಕಿತರು ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ 42, ಖಾಸಗಿ ಆಸ್ಪತ್ರೆಗಳು ಹಾಗೂ ನಿಗಾ ಕೇಂದ್ರಗಳಲ್ಲಿ 110 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆ ಮಾಡಿಸಿಕೊಂಡಿರುವ 59,754 ಮಂದಿ ಸೇರಿ, ಈವರೆಗೆ ಒಟ್ಟು 7,95,124 ಜನರಿಗೆ ಪರೀಕ್ಷೆ ನಡೆಸಿದಂತಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಬುಧವಾರ ಮೂವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ, ಕೊಪ್ಪಳ, ಹಾವೇರಿ, ರಾಮನಗರ ಜಿಲ್ಲೆಯಲ್ಲಿ ಸೋಂಕಿನ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಬಳ್ಳಾರಿ 4, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 227, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 6, ಚಿತ್ರದುರ್ಗ 13, ದಕ್ಷಿಣಕನ್ನಡ 14, ದಾವಣಗೆರೆ 14, ಧಾರವಾಡ 16, ಗದಗ್ 1, ಹಾಸನ 15, ಕಲಬುರಗಿ 12, ಕೊಡಗು 14, ಕೋಲಾರ 4, ಮಂಡ್ಯ 8, ಮೈಸೂರು 17, ರಾಯಚೂರು 1, ಶಿವಮೊಗ್ಗ 4, ತುಮಕೂರು 10, ಉಡುಪಿ 6, ಉತ್ತರಕನ್ನಡ 6, ವಿಜಯಪುರ 2, ಯಾದಗಿರಿ 2 ಮಂದಿ ಸೇರಿ ರಾಜ್ಯದಲ್ಲಿ ಬುಧವಾರ 428 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 760 ಸೋಂಕಿತರು ಗುಣ ಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 9,37,383ಕ್ಕೆ ಏರಿಕೆಯಾಗಿದೆ. 9,18,859 ಸೋಂಕಿತರಿಗೆ ಗುಣವಾಗಿದೆ. 6,298 ಸಕ್ರಿಯ ಪ್ರಕರಣಗಳಿವೆ. ಇಂದು ವರದಿಯಾದ 3 ಸಾವಿನ ಪ್ರಕರಣ ಸೇರಿ ಈವರೆಗೆ ರಾಜ್ಯದಲ್ಲಿ ಕೊರೊನಾದಿಂದ 12,207 ಮಂದಿ ಮೃತಪಟ್ಟಂತಾಗಿದೆ.

 

 

Translate »