ಇಂದು ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ
ಮೈಸೂರು

ಇಂದು ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ

January 28, 2021

ಮೈಸೂರು,ಜ.27-ಮೈಸೂರಿನ ಕೊಡವ ಸಮಾಜ ಹಾಗೂ ಕೊಡವ ಸಮಾಜ ಸಂಸ್ಕøತಿ ಮತ್ತು ಕೀಡಾ ಕ್ಲಬ್ ವತಿಯಿಂದ ನಾಳೆ (ಜ.28) ಸಂಜೆ 4 ಗಂಟೆಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 122ನೇ ಜನ್ಮದಿನ ಆಚರಿಸಲಾಗು ತ್ತಿದೆ. ಮೈಸೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ಸರ್ಕಲ್)ದಲ್ಲಿ ನಡೆಯ ಲಿರುವ ಈ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮಾಜಿ ಶಾಸಕ ವಾಸು, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಮಾಜಿ ಮೇಯರ್‍ಗಳಾದ ಎಂ.ಜೆ. ರವಿಕುಮಾರ್, ಶ್ರೀಕಂಠಯ್ಯ, ಕಾರ್ಪೋರೇಟರ್ ಪ್ರಮೀಳಾ ಭರತ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

.

Translate »