ಲಾಲ್ ಝಂಡಾದವರು ಹೆಜ್ಜೆ ಇಟ್ಟ ಕಡೆ ಗರಿಕೆ ಹುಲ್ಲೂ ಬೆಳೆಯುವುದಿಲ್ಲ
ಮೈಸೂರು

ಲಾಲ್ ಝಂಡಾದವರು ಹೆಜ್ಜೆ ಇಟ್ಟ ಕಡೆ ಗರಿಕೆ ಹುಲ್ಲೂ ಬೆಳೆಯುವುದಿಲ್ಲ

January 28, 2021

ಮೈಸೂರು, ಜ.27- ಲಾಲ್ ಝಂಡಾದವರು ಹೋದ ಕಡೆಯಲ್ಲಿ ಒಂದು ಗರಿಕೆ ಹುಲ್ಲೂ ಕೂಡ ಬೆಳೆಯುವುದಿಲ್ಲ. ಅವರು ಎಲ್ಲಿಯಾದರೂ ಇದ್ದು, ಉದ್ಧಾರ ಮಾಡಿರುವ ಯಾವುದಾದರೂ ಉದಾ ಹರಣೆ ಇದ್ದರೆ ಬಹಿರಂಗಪಡಿಸಲಿ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಸವಾಲು ಹಾಕಿದರು.

ಜೆ.ಕೆ.ಟೈರ್ಸ್ ಬದಲಿ ಮತ್ತು ದಿನಗೂಲಿ ಕಾರ್ಮಿ ಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗಾನ ಭಾರತಿ ಸಭಾಂಗಣದಲ್ಲಿ ಕಾರ್ಮಿಕ ನಾಯಕ ದತ್ತೋಪಂತ್ ಠೇಂಗಡಿಯವರ ಜನ್ಮ ಶತಾಬ್ಧಿ ಅಂಗ ವಾಗಿ ಆಯೋಜಿಸಲಾಗಿದ್ದ ಕಾರ್ಮಿಕ ಸಮಾ ವೇಶ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಲಾಲ್ ಝಂಡಾ ಹಿಡಿದವರು ಉತ್ಪಾದನಾ ಕ್ಷೇತ್ರಗಳನ್ನು ಮುಚ್ಚಿಸುವ ಮೂಲಕ ಕಾರ್ಮಿಕರನ್ನು ಬೀದಿಗೆ ತಂದು ಅವರ ಭವಿಷ್ಯವನ್ನು ಕೊಂದಿ ದ್ದಾರೆ. ಅದರ ಮುಂದುವರೆದ ಭಾಗವೇ ಜೆ.ಕೆ. ಟೈರ್ಸ್ ಕಾರ್ಮಿಕರ ಬವಣೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ದೇಶದಲ್ಲಿ ಇಂದು ಸಮಾನ ಕೆಲಸಕ್ಕೆ ಸಮಾನ ಕೂಲಿಯನ್ನು ಎಲ್ಲಿಯಾದರೂ ಕೊಡದಿ ರುವುದಕ್ಕೆ ಕಾರ್ಮಿಕರ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರುವ ಲಾಲ್ ಝಂಡಾವೇ ಕಾರಣ ಎಂದು ಆರೋಪಿಸಿದರು.

ಠೇಂಗಡಿಯವರು ತಮ್ಮ ಇಡೀ ಜೀವನವನ್ನು ಭಾರತೀಯ ಮಜ್ಧೂರ್ ಸಂಘಕ್ಕೆ ಧಾರೆಯೆರೆ ಯುವ ಮೂಲಕ ಅಸ್ತಿತ್ವಕ್ಕೆ ತಂದಿದ್ದರಿಂದಲೇ ಈ ಸಂಘ ಇಂದು ಇಷ್ಟೊಂದು ಬಲಿಷ್ಠವಾಗಿದೆ. ಜೆ.ಕೆ. ಟೈರ್ಸ್ ಸಂಸ್ಥೆಯ ಬದಲಿ ಮತ್ತು ದಿನಗೂಲಿ ಕಾರ್ಮಿ ಕರ ಕ್ಷೇಮಾಭಿವೃದ್ಧಿ ಸಂಘದ ಉದಯಕ್ಕೆ ಅದುವೇ ಕಾರಣ ಎಂದರೆ ತಪ್ಪಾಗಲಾರದು ಎಂದರು.

ಪ್ರಧಾನಿ ನರೇಂದ್ರಮೋದಿಯವರ ಸಂಕಲ್ಪವೇ ಚೈನಾದಂತಹ ಕೆಂಪುರಾಷ್ಟ್ರದ ಉತ್ಪನ್ನವನ್ನು ಹಿಮ್ಮೆ ಟ್ಟಿಸುವ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ ಮಾಡುವುದಾಗಿದೆ. ಜೆ.ಕೆ.ಟೈರ್ಸ್‍ನಂತಹ ಉತ್ಪನ್ನ ಕ್ಷೇತ್ರ ಎಲ್ಲಿಯೂ ಸೊರಗದಂತೆ ನೋಡಿಕೊಳ್ಳುವ ಬದ್ಧತೆ ಭಾರತೀಯ ಜನತಾ ಪಕ್ಷ ಹಾಗೂ ಭಾರ ತೀಯ ಜನತಾ ಮಜ್ದೂರ್ ಸಂಘ ಮತ್ತು ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಸರ್ಕಾರಕ್ಕೂ ಇದೆ ಎಂದರು. ವೇದಿಕೆಯಲ್ಲಿ ಶಾಸಕ ಎಲ್.ನಾಗೇಂದ್ರ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜೆ.ಕೆ.ಟೈರ್ಸ್ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರ್, ಹಿರಿಯ ಕಾರ್ಮಿಕ ಮುಖಂಡ ಟಿ.ಕೆ.ಸದಾಶಿವ, ಬಿಎಂಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ಪದಾಧಿಕಾರಿಗಳಾದ ಶಂಕರ್ ಸುಲೇಗಾಂ, ಪ್ರಕಾಶ್, ಇಂದ್ರೇಶ್, ಎಚ್.ಎನ್.ಸದಾಶಿವ, ಬಾಲ ಕೃಷ್ಣ, ಶಾಂತಕುಮಾರ್ ಮತ್ತಿತರರು ಇದ್ದರು.

 

 

 

Translate »