ಮೈಸೂರು, ಡಿ.8(ಆರ್‍ಕೆ)-ಇಡೀ ವಿಶ್ವ ವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಮಹಾಮಾರಿ ಸೋಂಕಿನಿಂದಾಗಿ ಕಳೆದ 10 ತಿಂಗಳಿಂದ ನೆಲಕಚ್ಚಿದ್ದ ಮೈಸೂರಿನ ಪ್ರವಾಸೋದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೋವಿಡ್-19 ನಿರ್ಬಂಧ ಸಡಿಲ ಮಾಡಿದ ನಂತರ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಜನ ಜೀವನ ಸಹಜ ಸ್ಥಿತಿಗೆ ಬಾರದ ಕಾರಣ ಪ್ರವಾಸೋದ್ಯಮ ಚೇತರಿಸಿಕೊಂಡಿರಲಿಲ್ಲ. ಇದೀಗ ಕಳೆದ 15 ದಿನಗಳಿಂದ ಮೈಸೂ ರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಈಗ ಮೈಸೂ ರಿನತ್ತ ಮುಖ ಮಾಡಿದ್ದಾರೆ. ಸಾಮಾನ್ಯವಾಗಿ…
ಹುಕ್ಕಾ ಬಾರ್, ರಿಕ್ರಿಯೇಷನ್ ಕ್ಲಬ್‍ಗಳ ಬಂದ್
December 9, 2020ಬೆಂಗಳೂರು, ಡಿ.8(ಕೆಎಂಶಿ)-ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿರುವ ಹುಕ್ಕಾ ಬಾರ್ ಸೇರಿದಂತೆ ಮನ ರಂಜನಾ ಕೇಂದ್ರಗಳನ್ನು ಮುಚ್ಚಿಸುವುದಾಗಿ ಗೃಹಸಚಿವ ಬಸವ ರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‍ನ ಈಶ್ವರ್ ಖಂಡ್ರೆ ಮಾಡಿದ ಪ್ರಸ್ತಾಪಕ್ಕೆ ಹಲವು ಸದಸ್ಯರು ಮಾದಕದ್ರವ್ಯಗಳ ಸೇವನೆ ತಡೆ ಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿ ಸಿದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತ ನಾಡಿದ ಗೃಹಸಚಿವರು, ಬೆಂಗಳೂರು ಮತ್ತು ಮೈಸೂರಿನಲ್ಲಿ ಹುಕ್ಕಾಬಾರ್‍ಗಳು ತಲೆ ಎತ್ತಿ ಯುವಕರು ಮಾದಕ ವ್ಯಸನಿ ಗಳಾಗಲು ಕಾರಣವಾಗುತ್ತಿವೆ. ಇಂಥ ಕೇಂದ್ರ…
ಮುಡಾದಿಂದ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ
December 9, 2020ಮೈಸೂರು, ಡಿ.8(ಆರ್‍ಕೆ)-ತಮ್ಮ ಆಸ್ತಿ ರಕ್ಷಣೆಗೆ ಮುಂದಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೈಸೂರಿನ ಟಿ.ಕೆ.ಬಡಾವಣೆಯ ಸಂಖ್ಯೆ 777ರ 40ಘಿ60 ಅಡಿ ಅಳತೆಯ ಸುಮಾರು 1.70 ಕೋಟಿ ರೂ. ಬೆಲೆಬಾಳುವ ನಿವೇ ಶನವನ್ನು ಒತ್ತುವರಿ ಮಾಡಿ ತಂತಿಬೇಲಿ ಅಳವಡಿಸಲಾಗಿತ್ತು. ಅದೇ ರೀತಿ 12 ಕೋಟಿ ರೂ. ಮೌಲ್ಯದ ದಟ್ಟಗಳ್ಳಿ ಸರ್ವೆ ನಂಬರ್ 114 ಮತ್ತು 115ರಲ್ಲಿ ಪ್ರಾಧಿಕಾರಕ್ಕೆ ಸೇರಿದ 50ಘಿ80 ಅಡಿ ಅಳತೆಯ 3 ನಿವೇ ಶನ ಹಾಗೂ ಟಿ.ಕೆ. ಲೇಔಟ್‍ನ…
ರೈತಸ್ನೇಹಿ ಕಾಯ್ದೆ: ಸಚಿವ ಸೋಮಶೇಖರ್ ಸ್ಪಷ್ಟನೆ
December 9, 2020ಎಪಿಎಂಸಿ ಮುಚ್ಚುವುದಿಲ್ಲ, ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ: ಸಚಿವರ ಭರವಸೆ ಮೈಸೂರು, ಡಿ.8(ವೈಡಿಎಸ್)- ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಪ್ರಯೋಜನಗಳು ಇವೆಯೇ ಹೊರತು ಯಾವುದೇ ತೊಂದರೆ ಇಲ್ಲ. ಇಂತಹ ಒಂದು ಐತಿಹಾಸಿಕ ಕೃಷಿ ಕಾಯಿದೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ. ಇದೊಂದು ರೈತಸ್ನೇಹಿ ಕಾಯ್ದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಈಗಲೂ ನಡೆದಿದ್ದು, ಹಾಗೇ…
ಇಂದಿನಿಂದ 6 ದಿನಗಳ ಮೈಬಿಲ್ಡ್-20 ವಚ್ರ್ಯುಯಲ್ ವಸ್ತು ಪ್ರದರ್ಶನ
December 9, 2020ಮೈಸೂರು, ಡಿ.8(ಆರ್‍ಕೆಬಿ)- ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕದ ಆಶ್ರಯ ದಲ್ಲಿ ಡಿ.9ರಿಂದ 14ರವರೆಗೆ 6 ದಿನಗಳ ಕಾಲ ಮೈಸೂರಿನಲ್ಲಿ ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದ ರ್ಶನ ಆಯೋಜಿಸಲಾಗಿದೆ ಎಂದು ಬಿಎಐ ಮೈಸೂರು ಘಟಕದ ಅಧ್ಯಕ್ಷ ಎಂ.ರತ್ನರಾಜ್ ಇಂದಿಲ್ಲಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಸ್ತು ಪ್ರದರ್ಶನದ ವಿವರಗಳನ್ನು ನೀಡಿದ ಅವರು, ಕಟ್ಟಡ ನಿರ್ಮಾಣ ತಂತ್ರಜ್ಞಾನ ಬಗ್ಗೆ ಮಾಹಿತಿ ನೀಡುವ ಉದ್ದೇಶದ ಈ ವಸ್ತು ಪ್ರದ ರ್ಶನ ವಿಶ್ವೇಶ್ವರನಗರ ಕೈಗಾರಿಕಾ ಸಬರ್ಬ್…
ಕರ್ನಾಟಕ ಜಾನಪದ ವಿವಿ ಪುನಶ್ಚೇತನಕ್ಕೆ ಜಾನಪದ ಅಭಿವೃದ್ಧಿ ಸಮಿತಿ ಮನವಿ
December 9, 2020ಮೈಸೂರು,ಡಿ.8(ಆರ್‍ಕೆಬಿ)-ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ಸೊರಗಿ ನಿಂತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಾನಪದ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಾನಪದ ಅಭಿವೃದ್ಧಿ ಸಮಿತಿ ಸಂಚಾಲಕಿ ಡಾ.ಎಂ.ಕನ್ನಿಕಾ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸಾಮಾಜಿಕ, ಆರ್ಥಿಕ, ಆಡಳಿತಾತ್ಮಕವಾಗಿ ಕರ್ನಾಟಕ ಜಾನಪದ ಅಕಾಡೆಮಿ ಕುಸಿದಿದೆ. ಇದರ ಪುನಶ್ಚೇತನಕ್ಕೆ, ಅಭಿವೃದ್ಧಿಗೆ 10 ಪ್ರಮುಖ ಅಂಶಗಳನ್ನು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದರು. ಎಲ್ಲ ಪಿಯುಸಿ ಮತ್ತು ಬಿಎ ಕಲಾ…
ಜ.28ರಂದು ಸರ್ಕಾರದ ವತಿಯಿಂದ ಕೈವಾರ ತಾತಯ್ಯ ಜಯಂತಿ ಆಚರಿಸಲು ಬಲಿಜ ಬಳಗ ಮನವಿ
December 9, 2020ಮೈಸೂರು,ಡಿ.8(ಆರ್‍ಕೆಬಿ)-ಸರ್ಕಾರದ ವತಿಯಿಂದ ಯೋಗಿ ನಾರೇಯಣ ಯತಿ ಕೈವಾರ ತಾತಯ್ಯ ಅವರ ಜಯಂತಿ ಆಚರಿಸಲು ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಿ ಮೈಸೂರು ನಗರ ಮತ್ತು ಜಿಲ್ಲಾ ಬಲಿಜ ಯುವ ಬಳಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಅವರಲ್ಲಿ ಮನವಿ ಮಾಡಿದೆ. ಮಂಗಳವಾರ ಚಾಮುಂಡಿಬೆಟ್ಟಕ್ಕೆ ವಿಶೇಷ ಪೂಜೆಗೆ ತೆರಳಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಕೈವಾರ ತಾತಯ್ಯ ಅವರ ಭಾವಚಿತ್ರ ನೀಡಿದ ಜಿಲ್ಲಾ ಬಲಿಜ ಬಳಗದ ಅಧ್ಯಕ್ಷ ಹರೀಶ್ ನಾಯ್ಡು, ಸರ್ಕಾರದ ವತಿಯಿಂದ ಪ್ರತೀ…
ಸುದೀರ್ಘ ಕಾಲ ಒಂದೇ ಕಡೆ ಸೇವೆ ಸಲ್ಲಿಸುವ ಶಿಕ್ಷಕರ ಸ್ವಯಂ ನಿವೃತ್ತಿ: ಶಿಕ್ಷಣ ಇಲಾಖೆಯಲ್ಲಿ ಆತಂಕ
December 9, 2020ಮೈಸೂರು, ಡಿ.8(ಎಸ್‍ಪಿಎನ್)- ಒಂದೇ ಸ್ಥಳದಲ್ಲಿ 10-15 ವರ್ಷ ಪೂರೈಸಿದರೂ ವರ್ಗಾವಣೆ ಭಾಗ್ಯವಿಲ್ಲದೆ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸುವ ಸರ್ಕಾರಿ ಶಾಲಾ ಶಿಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವಂತೆ ರಾಜ್ಯ ಸರ್ಕಾರವನ್ನು ಜನ ಸಂಗ್ರಾಮ ಪರಿಷತ್ ಒತ್ತಾಯಿಸಿದೆ. ಮೈಸೂರು ಜಿಲ್ಲೆಯ ಹಾಡಿ ಶಾಲೆಯೊಂದರಲ್ಲಿ ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯೊ ಬ್ಬರು ವರ್ಗಾವಣೆ ಸಿಗದಿರುವುದರಿಂದ ಆರೋಗ್ಯ ಸಮಸ್ಯೆಗೆ ಸಿಲುಕಿ ಸ್ವಯಂ ನಿವೃತ್ತಿ ಪಡೆದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ, ಇದೇ ಹಾದಿಯನ್ನು ಹಲವು…
ಆರೋಗ್ಯದ ಮುಂಜಾಗರೂಕತೆ ವಹಿಸಲು ವಿಶಿಷ್ಟ ರೀತಿಯ ಕ್ಯಾಲೆಂಡರ್
December 9, 2020ಮೈಸೂರು, ಡಿ.8(ಆರ್‍ಕೆಬಿ)- ಕೊರೊನಾ ಕಾರಣದಿಂದಾಗಿ ಆರೋಗ್ಯ ಸಮಸ್ಯೆಗೆ ಒಳಗಾಗುವ ಬದಲು ಮುಂಜಾಗರೂಕತೆ ವಹಿಸುವುದು ಸೂಕ್ತ ಎಂಬ ಜಾಗೃತಿ ಎಲ್ಲರಲ್ಲೂ ಬೆಳೆಯುತ್ತಿದೆ. ಹೀಗಾಗಿ ಈ ಅರಿವು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಾವು ವಿಶಿಷ್ಟ ರೀತಿಯ ಕ್ಯಾಲೆಂಡರ್ ಸಿದ್ಧಪಡಿಸಿರುವುದಾಗಿ ಜ್ಞಾನೋದಯ ಆರೋಗ್ಯ ಶಿಕ್ಷಣ ಪ್ರತಿಷ್ಠಾನದ ಡಾ. ವೆಂಕಟಸುಬ್ಬರಾವ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ವೃತ್ತಿಯಲ್ಲಿ ವೈದ್ಯರಾಗಿದ್ದು, ಹಣ ಮಾಡುವ ಆಸೆ ತಮಗಿಲ್ಲ. ಬದಲಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಈ ಕ್ಯಾಲೆಂಡರ್ ಸಿದ್ಧಪಡಿಸಿರುವುದಾಗಿ ವಿವರಿಸಿದರು. ಉದಾಹರಣೆಗೆ 2020…
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಮಾಲೋಚನೆ ಮೂಲಕ ಪತಿ-ಪತ್ನಿ ಕಲಹಕ್ಕೆ ಪರಿಹಾರ
December 8, 2020ಮೈಸೂರು, ಡಿ.7(ಆರ್‍ಕೆಬಿ)- ಕರ್ನಾ ಟಕ ರಾಜ್ಯ ಮಹಿಳಾ ಆಯೋಗಕ್ಕೆ ಕಳೆದ ಏಪ್ರಿಲ್‍ನಿಂದ ಡಿಸೆಂಬರ್‍ವರೆಗೆ ಒಟ್ಟು 1558 ದೂರುಗಳು ಬಂದಿದ್ದು, ಈ ಪೈಕಿ 506 ಪ್ರಕರಣಗಳನ್ನು ಇತ್ಯರ್ಥಪಡಿಸ ಲಾಗಿದೆ. ಒಟ್ಟಾರೆ 1052 ಪ್ರಕರಣಗಳನ್ನು ಬಗೆಹರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ತಿಳಿಸಿದರು. ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮ ವಾರ ನೊಂದ ಮಹಿಳೆಯರಿಂದ ದೂರು ಸ್ವೀಕರಿಸಿದ ಅವರು, ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ಆಯೋಗಕ್ಕೆ ಬಂದಿರುವ ದೂರುಗಳ ಪೈಕಿ 386 ಕೌಟುಂ ಬಿಕ ದೌರ್ಜನ್ಯ, 446…










