ಮೈಸೂರು, ಡಿ.9(ಆರ್‍ಕೆಬಿ)- ತಿ.ನರಸೀ ಪುರ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಬುಧ ವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ತಿ.ನರಸೀಪುರ ಪುರಸಭೆ ಮುಖ್ಯಾಧಿ ಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸರ್ಕಾರಿ ಆಸ್ತಿ ಖಾಲಿ ನಿವೇಶನಗಳನ್ನು ಕಾನೂನು ಉಲ್ಲಂಘಿಸಿ ಮಾರಾಟ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗಿ ದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಖಾಸಗಿ ವ್ಯಕ್ತಿಗಳಿಂದ ಲಂಚ ಪಡೆದು…
ಅಧ್ಯಯನ ಮಾಡದೇ ಕೃಷಿ ಕಾಯ್ದೆಗಳಿಗೆ ವಿರೋಧ
December 10, 2020ಮೈಸೂರು, ಡಿ.9(ಎಂಕೆ)- ಕೃಷಿ ಕೇತ್ರದ ಸುಧಾರಣೆ ದೃಷ್ಟಿಯಿಂದ ಜಾರಿಗೆ ತಂದಿ ರುವ 3 ಕಾಯ್ದೆಗಳನ್ನು ಸರಿಯಾಗಿ ಅಧ್ಯಯನ ಮಾಡದ ವಿರೋಧ ಪಕ್ಷಗಳು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ನವೀನ್ ಟೀಕಿಸಿದರು. ನಗರದ ಚಾಮರಾಜಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ರೈತ ಮೋರ್ಚಾ ಮೈಸೂರು ನಗರ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಪ್ರಗತಿಗಾಗಿ ತಂದಿರುವ 3 ಕೃಷಿ ಕ್ಷೇತ್ರದ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸುವಂತೆ…
ಮೈಸೂರು ಮುಕ್ತ ವಿವಿಯಿಂದ ಮಾತ್ರ ದೂರಶಿಕ್ಷಣ
December 10, 2020ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ಮಸೂದೆ-2020ಕ್ಕೆ ವಿಧಾನಸಭೆ ಒಪ್ಪಿಗೆ ಬೆಂಗಳೂರು, ಡಿ.9-ದೂರಶಿಕ್ಷಣ ಪದ್ಧತಿಯನ್ನು ಮೈಸೂರಿ ನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತ ಗೊಳಿಸುವ, ಬೆಂಗಳೂರು ವಿವಿ ಹೆಸರನ್ನು ಬದಲಾಯಿಸುವ ಅಂಶವೂ ಸೇರಿದಂತೆ ಉನ್ನತ ಶಿಕ್ಷಣ ಸುಧಾರಣೆಗೆ ಸಂಬಂ ಧಿಸಿದ ಮಹತ್ವದ ಆಡಳಿತಾತ್ಮಕ, ಕಾನೂನಾತ್ಮಕ ಸುಧಾರಣೆ ಗಳುಳ್ಳ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಸದನದಲ್ಲಿ ಈ ಅಂಶಗಳನ್ನೊಳ ಗೊಂಡ ಕರ್ನಾಟಕ ರಾಜ್ಯ…
ಕೆಎಸ್‍ಆರ್‍ಟಿಸಿ ಸಿಬ್ಬಂದಿಯಿಂದ ಇಂದು `ವಿಧಾನಸೌಧ ಚಲೋ’
December 10, 2020ಮೈಸೂರು,ಡಿ.9(ಎಸ್‍ಪಿಎನ್)-ಸಾರಿಗೆ ಸಂಸ್ಥೆ ಸಿಬ್ಬಂದಿ ಯನ್ನು `ಸರ್ಕಾರಿ ನೌಕರರು’ ಎಂದು ಪರಿಗಣಿಸಬೇಕು ಮತ್ತಿತರೆ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಡಿ.10ರಂದು `ವಿಧಾನಸೌಧ ಚಲೋ’ಗೆ ಮುಂದಾಗಿರುವ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮಹಾಮಂಡಳಕ್ಕೆ ಮೈಸೂರು ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ. ಸಂಘಟನೆ ಕಾರ್ಯದರ್ಶಿ ಮಹಾಂತೇಶ್ ಮಾತ ನಾಡಿ, 1992ರಿಂದ ಈವರೆಗೂ ಯಾವುದೇ ಕೈಗಾರಿಕಾ ಒಪ್ಪಂದ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ವೇತನವನ್ನು ಏಕಪಕ್ಷೀಯವಾಗಿ ಪರಿಷ್ಕರಿಸ ಲಾಗಿದೆ. ಇದರಿಂದ ಸಿಬ್ಬಂದಿಗೆ ಅನ್ಯಾಯವಾಗಿದೆ ಎಂದು `ಮೈಸೂರು…
ಜನವರಿ ಅಂತ್ಯಕ್ಕೆ ಮೃಗಾಲಯದ ಸಬ್‍ವೇ ಸೇವೆಗೆ ಮುಕ್ತ
December 10, 2020ಮೈಸೂರು,ಡಿ.9(ಎಂಟಿವೈ)- ವಾಹನ ಗಳ ಪಾರ್ಕಿಂಗ್ ಸ್ಥಳದಿಂದ ಮೃಗಾ ಲಯಕ್ಕೆ ಸಂಪರ್ಕ ಕಲ್ಪಿಸಲು 1.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಬ್‍ವೇ ಮೊದಲ ಹಂತದ ಕಾಮಗಾರಿ 2021ರ ಜನವರಿ ಅಂತ್ಯದ ವೇಳೆಗೆ ಪೂರ್ಣ ಗೊಂಡು, ಪ್ರವಾಸಿಗರ ಬಳಕೆಗೆ ಮುಕ್ತ ವಾಗಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ. ಕೋವಿಡ್-19ನಿಂದಾಗಿ ಲಾಕ್‍ಡೌನ್ ಮಾಡಲಾಗಿದ್ದ ಅವಧಿಯಲ್ಲಿ ಸಬ್‍ವೇ ಕಾಮಗಾರಿ ಸ್ಥಗಿತಗೊಂಡಿತ್ತು. ಅನ್‍ಲಾಕ್ ನಿಯಮ ಜಾರಿಗೆ ಬಂದ ನಂತರ ಗುತ್ತಿಗೆ ದಾರರು ಕಾಮಗಾರಿ ಪುನರಾರಂಭಿಸಿ ದ್ದರು. ದಸರಾ ವೇಳೆ ಕಾರ್ಮಿಕರು…
ಮೈಸೂರು ಡಿಸಿ `ಸ್ಪಂದನ’ ವಿಭಾಗದಲ್ಲಿ 506 ಅರ್ಜಿ ಬಾಕಿ
December 10, 2020522 ಅರ್ಜಿ ಸಲ್ಲಿಕೆ; ಈವರೆಗೆ ಕೇವಲ 16 ದೂರು ಇತ್ಯರ್ಥ ಶೀಘ್ರ ಕ್ರಮ ಕೈಗೊಳ್ಳುವಂತೆ ಇಲಾಖೆಗಳಿಗೆ ಎಡಿಸಿ ಸೂಚನೆ ಮೈಸೂರು, ಡಿ.9(ಎಸ್‍ಪಿಎನ್)- ಮೈಸೂರು ಜಿಲ್ಲಾಧಿಕಾರಿಗಳ `ಸ್ಪಂದನ’ ವಿಭಾಗಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಾಲಮಿತಿ ಯೊಳಗೆ ವಿಲೇವಾರಿ ಮಾಡದ ಅಧಿಕಾರಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ವುದು ಎಂದು ಎಡಿಸಿ ಬಿ.ಎಸ್.ಮಂಜು ನಾಥಸ್ವಾಮಿ ತಿಳಿಸಿದರು. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿ ಗಳ ಸ್ಪಂದನ ವಿಭಾಗಕ್ಕೆ ಸಲ್ಲಿಕೆಯಾಗಿದ್ದ 522 ಅರ್ಜಿಗಳ ಪೈಕಿ 16 ಅರ್ಜಿಗಳು…
ವಧುವಿಗೆ ಕೈಕೊಟ್ಟು ಪ್ರೇಯಸಿ ಮದುವೆಯಾದ ಯುವಕ
December 10, 2020ಮೈಸೂರು,ಡಿ.9(ಆರ್‍ಕೆ)- ಮದುವೆ ನಿಶ್ಚಯವಾಗಿದ್ದ ಯುವತಿಗೆ ಕೈಕೊಟ್ಟು ಮದುವೆಗೆ ಎರಡು ದಿನ ಮುಂಚೆಯೇ ಯುವಕನೋರ್ವ ಪ್ರೇಯಸಿಯೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿರುವ ಪ್ರಸಂಗ ಮೈಸೂರಲ್ಲಿ ನಡೆದಿದೆ. ಮೈಸೂರಿನ ಸುಣ್ಣದಕೇರಿ 3ನೇ ಕ್ರಾಸ್ ನಿವಾಸಿ ತಾಂಡೇಶ ಅವರ ಮಗ ಉಮೇಶ (29) ತಾನು ಪ್ರೀತಿಸುತ್ತಿದ್ದ ಯುವತಿ ಯೊಂದಿಗೆ ಮದುವೆ ಮಾಡಿಕೊಂಡು, ಮದುವೆ ನಿಶ್ಚಯವಾಗಿದ್ದ ಯುವತಿಗೆ ಆಘಾತ ಉಂಟುಮಾಡಿದ ಯುವಕ. ಮೈಸೂರಿನ ಸುಣ್ಣದಕೇರಿಯ ಯುವತಿ ಯೊಂದಿಗೆ ಈ ಹಿಂದೆಯೇ ಗುರುಹಿರಿಯರೆಲ್ಲ ಸೇರಿ ನಿಶ್ಚಿತಾರ್ಥ ವನ್ನೂ ಮಾಡಿದ್ದರು. ಇಂದು (ಡಿ.9) ಮೈಸೂರಿನ ಕೆ.ಆರ್.ಮೊಹಲ್ಲಾದ ಶ್ರೀ ಮಹದೇಶ್ವರ…
ನಿರೀಕ್ಷಿತ ಮಟ್ಟದಲ್ಲಿ ಬಂದ್‍ಗಿಲ್ಲ ಬೆಂಬಲ
December 9, 2020ಬೆಂಗಳೂರು, ಡಿ.8(ಕೆಎಂಶಿ)-ಕೃಷಿಗೆ ಮಾರಕ ವಾಗುವ ಕಾನೂನುಗಳನ್ನು ಹಿಂದಕ್ಕೆ ಪಡೆ ಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾ ರದ ವಿರುದ್ಧ ಭಾರತ್ ಬಂದ್ ಬೆಂಬಲಿಸಿ ರಾಜ್ಯದಲ್ಲೂ ರೈತರು ಬೀದಿಗಿಳಿದರಾದರೂ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಅನ್ನ ಕೊಡುವ ರೈತನ ಕೂಗಿಗೆ ಸಾರ್ವ ಜನಿಕರು, ಸಂಘ ಸಂಸ್ಥೆಗಳು, ವಾಣಿಜ್ಯೋ ದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿ ಸಲಿಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರೈತರ ಹೋರಾಟಕ್ಕೆ ಬೆಂಬಲ ನೀಡಿದರೂ ರಾಜ್ಯದ ಕೆಲವು ವೃತ್ತಗಳಲ್ಲಿ ಮುಖಂಡರ, ನಾಯಕರ ಭಾಷಣಕ್ಕೆ ಸೀಮಿತಗೊಂಡಿತು. ವಿಧಾನಸಭೆಯಲ್ಲಿ ಪ್ರಶ್ನೋ ತ್ತರ…
ಮಧ್ಯಾಹ್ನದವರೆಗೆ ಮೈಸೂರು ಹೃದಯ ಭಾಗ ಭಾಗಶಃ ಬಂದ್
December 9, 2020ಮೈಸೂರು, ಡಿ.8(ಪಿಎಂ)- ಕೇಂದ್ರ ಸರ್ಕಾರ ಜಾರಿಗೊಳಿಸಿ ರುವ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ರೈತ ವಿರೋಧಿ ಯಾಗಿವೆ ಎಂದು ಆರೋಪಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಮಂಗಳವಾರದ ಭಾರತ ಬಂದ್‍ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೆ, ಮೈಸೂರು ನಗರದ ಹೃದಯ ಭಾಗದಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಬಂದ್ ಭಾಗಶಃ ಯಶಸ್ವಿಯಾಗಿದೆ. ನಗರದ ಕೇಂದ್ರ ಭಾಗವಾದ ಕೆಆರ್ ವೃತ್ತ, ಜಯಚಾಮ ರಾಜ ಒಡೆಯರ್ ವೃತ್ತ, ದೊಡ್ಡ ಗಡಿಯಾರ ಹಾಗೂ ಚಿಕ್ಕ ಗಡಿಯಾರದಲ್ಲಿ ಮಧ್ಯಾಹ್ನ 12ರವರೆಗೆ ಬಹುತೇಕ ಅಂಗಡಿ…
ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿರುವ ರೈತರು
December 9, 2020ಬೆಂಗಳೂರು, ಡಿ.8-ಇಂದು ಕೇಂದ್ರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಬೆಂಬಲ ವ್ಯಕ್ತವಾ ಯಿತು. ಬೆಂಗಳೂರಿನಲ್ಲಿ ರೈತ ಮತ್ತು ಕನ್ನಡಪರ ಸಂಘಟನೆ ಗಳು ಸೇರಿದಂತೆ ಇತರೆ ಸಂಘಟನೆಗಳು ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಿದವು. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ ಇನ್ನೂ ಮೊದಲಾದವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆದವು. ಬೆಳಗ್ಗೆಯಿಂದಶುರುವಾದ ಪ್ರತಿಭಟನೆ ಮಧ್ಯಾಹ್ನದ ವೇಳೆಗೆ ಮುಕ್ತಾಯವಾಯಿತು. ನಾಳೆ ವಿಧಾನ ಸೌಧಕ್ಕೆ ರೈತರು ಮುತ್ತಿಗೆ ಹಾಕಲಿದ್ದಾರೆ. ಈ ಕುರಿತು ಮಾತನಾಡಿರುವ ಕೋಡಿಹಳ್ಳಿ…










