ಅಧ್ಯಯನ ಮಾಡದೇ ಕೃಷಿ ಕಾಯ್ದೆಗಳಿಗೆ ವಿರೋಧ
ಮೈಸೂರು

ಅಧ್ಯಯನ ಮಾಡದೇ ಕೃಷಿ ಕಾಯ್ದೆಗಳಿಗೆ ವಿರೋಧ

December 10, 2020

ಮೈಸೂರು, ಡಿ.9(ಎಂಕೆ)- ಕೃಷಿ ಕೇತ್ರದ ಸುಧಾರಣೆ ದೃಷ್ಟಿಯಿಂದ ಜಾರಿಗೆ ತಂದಿ ರುವ 3 ಕಾಯ್ದೆಗಳನ್ನು ಸರಿಯಾಗಿ ಅಧ್ಯಯನ ಮಾಡದ ವಿರೋಧ ಪಕ್ಷಗಳು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ನವೀನ್ ಟೀಕಿಸಿದರು.

ನಗರದ ಚಾಮರಾಜಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ರೈತ ಮೋರ್ಚಾ ಮೈಸೂರು ನಗರ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಪ್ರಗತಿಗಾಗಿ ತಂದಿರುವ 3 ಕೃಷಿ ಕ್ಷೇತ್ರದ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ಕೊರೊನಾ ಸಂದರ್ಭದಲ್ಲಿ ಸರ್ಕಾರ ರೈತ ಹಿತದೃಷ್ಟಿಯಿಂದ ಮಾರ್ಗಸೂಚಿಯಂ ತೆಯೇ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ‘ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ’ಯಿಂದ ರೈತರು ತಾವು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡುವುದಕ್ಕೆ ಅವಕಾಶ ನೀಡುತ್ತದೆ ಎಂದರು.

ಅದರಂತೆ ‘ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ (ಕಲ್ಯಾಣ ಮತ್ತು ರಕ್ಷಣೆ) ಮಸೂದೆ’ಯೂ ಬೆಳೆಗಳಿಗೆ ಬೆಂಬಲ ದೊರಕಿಸಿಕೊಡುವುದು ಹಾಗೂ ಖಾಸಗಿ ಕಂಪನಿಗಳ ಜೊತೆಗೆ ರೈತರು ಬೆಳೆದ ಪದಾರ್ಥಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿರುತ್ತದೆ. ‘ಅಗತ್ಯ ಸರಕುಗಳ(ತಿದ್ದುಪಡಿ) ಮಸೂದೆ’ಯೂ ರೈತರು ಬೆಳೆಯನ್ನು ತಾವೇ ಸಂಗ್ರಹಣೆ ಮಾಡಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದಾಗಿರುತ್ತದೆ ಎಂದು ವಿವರಿಸಿದರು.

ರೈತರ ಪರವಾಗಿರುವ ಕೃಷಿ ಕಾಯ್ದೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಅನಗತ್ಯ ವಾಗಿ ಬಂದ್ ಮತ್ತು ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಇದೇ ವೇಳೆ ರೈತ ಮೋರ್ಚಾ ನಗರ ಘಟ ಕದ ನೂತನ ಪದಾಧಿಕಾರಿಗಳಿಗೆ ನೇಮ ಕಾತಿ ಪತ್ರ ವಿತರಿಸಿದರು. ಬಿಜೆಪಿ ರೈತ ಮೋರ್ಚಾ ನಗರ ಘಟಕದ ಅಧ್ಯಕ್ಷ ಕೆ.ದೇವರಾಜು, ಪ್ರಭಾರಿ ಎಸ್.ಕೆ.ದಿನೇಶ್, ಬಿಜೆಪಿ ನಗರ ಘಟಕದ ಕಾರ್ಯದರ್ಶಿ ವಾಣೀಶ್, ಮುಖಂಡರಾದ ಮಂಜುನಾಥ್, ಕಾರ್ತಿಕ್ ಮತ್ತಿತರರಿದ್ದರು.

 

Translate »