ತಿ.ನರಸೀಪುರ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ: ದಸಂಸ ಪ್ರತಿಭಟನೆ
ಮೈಸೂರು

ತಿ.ನರಸೀಪುರ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ: ದಸಂಸ ಪ್ರತಿಭಟನೆ

December 10, 2020

ಮೈಸೂರು, ಡಿ.9(ಆರ್‍ಕೆಬಿ)- ತಿ.ನರಸೀ ಪುರ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಬುಧ ವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ತಿ.ನರಸೀಪುರ ಪುರಸಭೆ ಮುಖ್ಯಾಧಿ ಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸರ್ಕಾರಿ ಆಸ್ತಿ ಖಾಲಿ ನಿವೇಶನಗಳನ್ನು ಕಾನೂನು ಉಲ್ಲಂಘಿಸಿ ಮಾರಾಟ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗಿ ದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಖಾಸಗಿ ವ್ಯಕ್ತಿಗಳಿಂದ ಲಂಚ ಪಡೆದು ಸರ್ಕಾರಿ ಖಾಲಿ ನಿವೇಶನಗಳನ್ನು ಅಕ್ರಮ ಮಂಜೂರು ಮಾಡಿಕೊಟ್ಟಿದ್ದಾರೆ. ಸರ್ಕಾ ರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಆದಾಯ ವಂಚಿಸಿದ್ದಾರೆ. ಆ ನಿವೇಶನ ಗಳನ್ನು ಸರ್ಕಾರ ಕೂಡಲೇ ರದ್ದುಪಡಿಸಿ, ಆಸ್ತಿ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಡಾ.ಆಲಗೂಡು ಎಸ್.ಚಂದ್ರಶೇಖರ್, ಎಸ್.ನಾಗರಾಜು, ಎಸ್.ವಿ.ಗುರುದತ್ತಮೂರ್ತಿ, ಮೈಸೂರು ಮಹದೇವ, ಮಹೇಂದ್ರಕುಮಾರ್, ಕೆಂಪಯ್ಯನಹುಂಡಿ ಆರ್.ರಾಜು ಇನ್ನಿತರರು ಭಾಗವಹಿಸಿದ್ದರು.

 

 

Translate »