ಮೈಸೂರು

ಮೈಸೂರು ಗುರುವಾರ 53 ಮಂದಿಗೆ ಸೋಂಕು
ಮೈಸೂರು

ಮೈಸೂರು ಗುರುವಾರ 53 ಮಂದಿಗೆ ಸೋಂಕು

December 11, 2020

ಮೈಸೂರು, ಡಿ.10(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಗುರುವಾರ 53 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 27 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ ಇಂದು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 51,268ಕ್ಕೆ ಏರಿಕೆಯಾದರೆ, ಇದೂವರೆಗೆ 49,910 ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,003 ಮಂದಿ ಮೃತಪಟ್ಟಿದ್ದು, 355 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಗುರುವಾರ 1238 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,97,801ಕ್ಕೆ ಏರಿಕೆಯಾಗಿದೆ. ಇಂದು ಬಿಡು…

ರಾಜಧಾನಿ ಬೆಂಗಳೂರಲ್ಲಿ ಒಂದೆಡೆ ರೈತರ,   ಮತ್ತೊಂದೆಡೆ ಸಾರಿಗೆ ನೌಕರರ ಪ್ರತಿಭಟನೆ ಭರಾಟೆ
ಮೈಸೂರು

ರಾಜಧಾನಿ ಬೆಂಗಳೂರಲ್ಲಿ ಒಂದೆಡೆ ರೈತರ,  ಮತ್ತೊಂದೆಡೆ ಸಾರಿಗೆ ನೌಕರರ ಪ್ರತಿಭಟನೆ ಭರಾಟೆ

December 11, 2020

ಬೆಂಗಳೂರು, ಡಿ.10-ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ರೈತರು ಮತ್ತು ಸಾರಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು. ಕೃಷಿ ಕಾಯಿದೆಗಳ ತಿದ್ದುಪಡಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದರೆ, ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟಿಸಿದರು. ರೈತರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದರೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಫ್ರೀಡಂ ಪಾರ್ಕ್‍ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸು ತ್ತಿದ್ದ ವೇದಿಕೆಗೆ ತೆರಳಿ ಬೆಂಬಲ ಸೂಚಿಸುವುದರ ಜೊತೆಗೆ ಬೇಡಿಕೆಗಳು ಈಡೇರದಿದ್ದರೆ ನಾಳೆಯಿಂದ (ಶುಕ್ರವಾರ)…

ವಿದ್ಯಾರ್ಥಿಗಳ ಬೌದ್ಧಿಕ, ದೈಹಿಕ ಆರೋಗ್ಯಕ್ಕಾಗಿ ಶಿಕ್ಷಣ, ಕ್ರೀಡೆ ಪರಸ್ಪರ ಪೂರಕವಾಗಿ ಸಾಗಬೇಕು
ಮೈಸೂರು

ವಿದ್ಯಾರ್ಥಿಗಳ ಬೌದ್ಧಿಕ, ದೈಹಿಕ ಆರೋಗ್ಯಕ್ಕಾಗಿ ಶಿಕ್ಷಣ, ಕ್ರೀಡೆ ಪರಸ್ಪರ ಪೂರಕವಾಗಿ ಸಾಗಬೇಕು

December 11, 2020

ಮೈಸೂರು, ಡಿ.10(ಆರ್‍ಕೆಬಿ)- ಪಠ್ಯದ ಜೊತೆಗೆ ಕ್ರೀಡೆಯೂ ಒಂದು ಭಾಗವಾಗ ಬೇಕು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರುವುದು ಖಚಿತ. ಏಕೆಂದರೆ ಶಿಕ್ಷಣ ಹಾಗೂ ಕ್ರೀಡೆ ಪರಸ್ಪರ ಪೂರಕ ವಾಗಿ ಸಾಗಿದರೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಜೊತೆಗೆ ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಿಳಿಸಿದರು. ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ (ಕೆಎಸ್‍ಪಿಡಬ್ಲ್ಯೂ&ಇ ಟ್ರಸ್ಟ್)ನ ನೂತನ ಸಲಹಾ ಸಮಿತಿಯ ಉದ್ಘಾಟನಾ ಕಾರ್ಯ…

ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಕೆಎಂಪಿಕೆ ಟ್ರಸ್ಟ್ ಕಾರ್ಯಕ್ಕೆ ಮಾಜಿ ಶಾಸಕ ಎಂಕೆಎಸ್ ಶ್ಲಾಘನೆ
ಮೈಸೂರು

ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಕೆಎಂಪಿಕೆ ಟ್ರಸ್ಟ್ ಕಾರ್ಯಕ್ಕೆ ಮಾಜಿ ಶಾಸಕ ಎಂಕೆಎಸ್ ಶ್ಲಾಘನೆ

December 11, 2020

ಮೈಸೂರು, ಡಿ.10(ಆರ್‍ಕೆಬಿ)- ಚಳಿಗಾಲದಲ್ಲಿ ಬೀದಿ ಬದಿ ಯಲ್ಲಿ ನಡುಗುತ್ತಾ ದಿನದೂಡುವ ನಿರಾಶ್ರಿತರಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೊದಿಕೆಗಳನ್ನು ವಿತರಿಸುವ ಮೂಲಕ ನೆರವಾಗಿದ್ದಾರೆ. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘ ವೇಂದ್ರಸ್ವಾಮಿ ದೇವಸ್ಥಾನದ ಬಳಿ ನಿರಾಶ್ರಿತರಿಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊದಿಕೆ ವಿತರಣಾ ಕಾರ್ಯ ಕ್ರಮವಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಟ್ರಸ್ಟ್‍ನ ಹೊದಿಕೆ ನೀಡುವ ಅಭಿಯಾನಕ್ಕೆ ಕೈಜೋಡಿಸಿದರು. ಈ ಸಂದರ್ಭದಲ್ಲಿ…

ಡಿ.13ರಂದು ಕನಕದಾಸರ ಚಿಂತನೆ ಕುರಿತು ಸಾಗರೋತ್ತರ ಕನ್ನಡಿಗರೊಂದಿಗೆ ಕಾಗಿನೆಲೆ ಶ್ರೀಗಳಿಂದ ಸಂವಾದ
ಮೈಸೂರು

ಡಿ.13ರಂದು ಕನಕದಾಸರ ಚಿಂತನೆ ಕುರಿತು ಸಾಗರೋತ್ತರ ಕನ್ನಡಿಗರೊಂದಿಗೆ ಕಾಗಿನೆಲೆ ಶ್ರೀಗಳಿಂದ ಸಂವಾದ

December 11, 2020

ಮೈಸೂರು,ಡಿ.10(ಎಂಟಿವೈ)- ಸಂತ ಶ್ರೇಷ್ಠ ಭಕ್ತ ಕನಕ ದಾಸರ ಚಿಂತನೆ ಹಾಗೂ ಕೀರ್ತನೆ ಕುರಿತಂತೆ ಡಿ.13 ರಂದು ಸಂಜೆ 6ಕ್ಕೆ ಸಾಗರೋತ್ತರ ಕನ್ನ ಡಿಗರೊಂದಿಗೆ ಕಾಗಿ ನೆಲೆ ಶಾಖಾ ಮಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ ಸಂವಾದ ನಡೆಸಲಿದ್ದಾರೆ ಎಂದು ಸಾಗರೋತ್ತರ ಕನ್ನಡಿಗರು ಸಂಘಟನೆಯ (ಸೌದಿ ಅರೇ ಬಿಯಾ) ಜಂಟಿ ಕಾರ್ಯದರ್ಶಿ ರವಿ ಮಹಾದೇವ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತ ಕನಕದಾಸರ ಜಯಂತಿ ಅಂಗವಾಗಿ ಸಾಗರೋತ್ತರ ಕನ್ನಡಿ ಗರು…

ಗೋಪಾಲಗೌಡ ಶಾಂತವೇರಿ ಸ್ಮಾರಕ ಆರೋಗ್ಯ   ವಿಜ್ಞಾನಗಳ ಸಂಸ್ಥೆಯಲ್ಲಿ ಹೊಸ ಕೋರ್ಸ್
ಮೈಸೂರು

ಗೋಪಾಲಗೌಡ ಶಾಂತವೇರಿ ಸ್ಮಾರಕ ಆರೋಗ್ಯ  ವಿಜ್ಞಾನಗಳ ಸಂಸ್ಥೆಯಲ್ಲಿ ಹೊಸ ಕೋರ್ಸ್

December 11, 2020

ಮೈಸೂರು, ಡಿ.10- ಮೈಸೂರಿನ ನಜರಬಾದ್‍ನಲ್ಲಿ ತಿ.ನರಸೀಪುರ ರಸ್ತೆಯಲ್ಲಿರುವ ಗೋಪಾಲಗೌಡ ಶಾಂತವೇರಿ ಸ್ಮಾರಕ ಆರೋಗ್ಯ ವಿಜ್ಞಾನಗಳ ಸಂಸ್ಥೆಯು ಬಿಎಸ್‍ಸಿ-ಅನಸ್ತೇ ಸಿಯಾ ಅಂಡ್ ಅಪರೇಷನ್ ಥಿಯೇಟರ್ ಟೆಕ್ನಾ ಲಜಿ, ಬಿಎಸ್‍ಸಿ-ಇಮೇಜಿಂಗ್ ಟೆಕ್ನಾಲಜಿ, ಬಿಎಸ್‍ಸಿ-ರೆಸ್ಪಿರೇಟರಿ ಕೇರ್ ಟೆಕ್ನಾಲಜಿ ಮತ್ತು ಬಿಎಸ್‍ಸಿ- ರೇನಲ್ ಡಯಾಲಿಸಿಸ್ ಕೋರ್ಸ್ ಗಳನ್ನು ಆರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ಸಂಸ್ಥೆ ಯಿಂದ ಅನುಮತಿ ಪಡೆದಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಹೊಸ ಕೋರ್ಸ್‍ಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದೆ. ಅಲ್ಲದೇ, ಎಂಡಿ ಡಾಕ್ಟರ್ಸ್, ಜಿಎನ್‍ಎಂ ನರ್ಸಿಂಗ್, ಬಿಎಸ್‍ಸಿ ನರ್ಸಿಂಗ್, ಎಂಎಸ್‍ಸಿ…

ನಾಳೆ ಮೈವಿವಿ ಹಿರಿಯ ವಿದ್ಯಾರ್ಥಿಗಳ ಮೂರನೇ ಜಾಗತಿಕ ಸಮಾವೇಶ
ಮೈಸೂರು

ನಾಳೆ ಮೈವಿವಿ ಹಿರಿಯ ವಿದ್ಯಾರ್ಥಿಗಳ ಮೂರನೇ ಜಾಗತಿಕ ಸಮಾವೇಶ

December 11, 2020

ಮೈಸೂರು,ಡಿ.10(ಎಂಟಿವೈ)-ಮೈಸೂರು ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ 3ನೇ ಜಾಗತಿಕ ಸಮಾವೇಶ ಹಾಗೂ `ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ ಪ್ರದಾನ ಸಮಾರಂಭ ಡಿ.12ರ ಬೆಳಿಗ್ಗೆ 11ಕ್ಕೆ ಮಾನಸಗಂಗೋ ತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮೈವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯP್ಷÀ ವಸಂತಕುಮಾರ್ ತಿಮಕಾಪುರ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 3 ವರ್ಷದಿಂದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ನಡೆಸ ಲಾಗುತ್ತಿದೆ. ಈ ಬಾರಿ ಕೊರೊನಾ ಭೀತಿ ಇದ್ದರೂ ಅಗತ್ಯ ಮುನ್ನೆಚ್ಚ ರಿಕಾ ಕ್ರಮಗಳೊಂದಿಗೆ 3ನೇ ಜಾಗತಿಕ ಸಮಾವೇಶ ಹಮ್ಮಿಕೊಳ್ಳ…

ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆ ಶೇ.30ರಷ್ಟು ಹೆಚ್ಚಳ ಮುನ್ನೆಚ್ಚರಿಕೆ ವಹಿಸಲು ಹೃದ್ರೋಗ ತಜ್ಞ ಡಾ.ರಂಜನ್ ಶೆಟ್ಟಿ ಸಲಹೆ
ಮೈಸೂರು

ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆ ಶೇ.30ರಷ್ಟು ಹೆಚ್ಚಳ ಮುನ್ನೆಚ್ಚರಿಕೆ ವಹಿಸಲು ಹೃದ್ರೋಗ ತಜ್ಞ ಡಾ.ರಂಜನ್ ಶೆಟ್ಟಿ ಸಲಹೆ

December 11, 2020

ಮೈಸೂರು, ಡಿ.10(ಪಿಎಂ)-ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಶೇ.20 ರಿಂದ 30ರವರೆಗೆ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆಯಾಗಿ ಉತ್ತಮ ಆಹಾರ ಸೇವನೆ ಹಾಗೂ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಬೆಂಗಳೂರಿನ ಓಲ್ಡ್ ಏರ್‍ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಂಜನ್ ಶೆಟ್ಟಿ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆನ್ ಲೈನ್ ಮೂಲಕ ಮಾತನಾಡಿದ ಅವರು, ಭಾರತ ಸೇರಿದಂತೆ ಜಗತ್ತಿ ನಾದ್ಯಂತ ಸಾವಿನ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ ಹೃದ್ರೋಗ. ಕೋವಿಡ್-19 ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಸಮಸ್ಯೆ…

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ
ಮೈಸೂರು

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ

December 10, 2020

ಬೆಂಗಳೂರು,ಡಿ.9-ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆಯೇ ವಿಧಾನ ಸಭೆಯಲ್ಲಿ 2020ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ರಾಜ್ಯ ವಿಧಾನಸಭೆ ಅಂಗೀಕಾರ ನೀಡಿದೆ. ಪಶು ಸಂಗೋಪನೆ ಮತ್ತು ವಕ್ಪ್ ಸಚಿವ ಪ್ರಭು ಚೌವ್ಹಾಣ್ ವಿಧೇಯಕ ಮಂಡನೆಗೆ ಆರಂಭಿಸುತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಸದನ ಸಲಹಾ ಸಮಿತಿಯಲ್ಲಿ ಹೊಸ ವಿಧೇ ಯಕ ಮಂಡನೆ ಮಾಡಬಾರದು. ಈಗಾ ಗಲೇ ಸುಗ್ರೀವಾಜ್ಞೆ ಹೊರಡಿಸಿರುವ ವಿಧೇ ಯಕಗಳನ್ನು ಮಾತ್ರ ಮಂಡಿಸಬೇಕು ಎಂದು ತೀರ್ಮಾನಿಸಲಾಗಿದೆ. ಈಗ ಏಕಾಏಕಿ…

ಕೊರೊನಾ, ತುರ್ತು ಸೇವೆ ಹೊರತುಪಡಿಸಿ ನಾಳೆ ಉಳಿದೆಲ್ಲಾ ವೈದ್ಯಕೀಯ ಸೇವೆ ಸ್ಥಗಿತ
ಮೈಸೂರು

ಕೊರೊನಾ, ತುರ್ತು ಸೇವೆ ಹೊರತುಪಡಿಸಿ ನಾಳೆ ಉಳಿದೆಲ್ಲಾ ವೈದ್ಯಕೀಯ ಸೇವೆ ಸ್ಥಗಿತ

December 10, 2020

ಮೈಸೂರು, ಡಿ.9(ಪಿಎಂ)- ಹಲವು ರೀತಿ ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿರುವುದನ್ನು ಖಂಡಿಸಿ ಆಲೋಪತಿ ವೈದ್ಯರು ಡಿ.11ರಂದು ಮುಷ್ಕರ ನಡೆಸಲಿದ್ದು, ಅಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೊರೊನಾ ಹಾಗೂ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳಲಿವೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ವ್ಯವಸ್ಥೆಯ ಆಲೋಪತಿ ಸೇವೆಗೆ ಇದು ಅನ್ವಯಿಸಲಿದೆ. ಆಯುರ್ವೇದ ವೈದ್ಯ ಶಿಕ್ಷಣದ ಶಾಲ್ಯ ತಂತ್ರ ಮತ್ತು ಶಾಲಕ್ಯ ತಂತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆ ದವರು ತರಬೇತಿ…

1 350 351 352 353 354 1,611
Translate »