ನವದೆಹಲಿ,ಡಿ.9-ಕರ್ನಾಟಕ ಸೇರಿ ದಂತೆ 9 ರಾಜ್ಯ ಗಳು `ಒಂದು ದೇಶ ಒಂದು ಪಡಿತರ ಕಾರ್ಡ್’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದು, ಈ ರಾಜ್ಯಗಳಿಗೆ ಒಟ್ಟು 23,523 ಕೋಟಿ ರೂ.ಗಳನ್ನು ಸಾಲವಾಗಿ ಪಡೆಯುವ ಅವಕಾಶವನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂ ಗಾಣ, ತ್ರಿಪುರ ಹಾಗೂ ಉತ್ತರ ಪ್ರದೇಶ ದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಸುಧಾರಣೆ ಪೂರ್ಣಗೊಂ ಡಿದೆ. ಉತ್ತರ ಪ್ರದೇಶವು ಇದರ ಅತೀ ದೊಡ್ಡ ಫಲಾನುಭವಿಯಾಗಿದ್ದು, 4,851…
ದೇವೇಗೌಡರೇ, ಒಳ್ಳೆ ಬೆಲೆ ಬಂದರೆ ಕುಮಾರಸ್ವಾಮಿ ನಿಮ್ಮನ್ನೂ ಮಾರ್ತಾರೆ!
December 10, 2020ಬೆಂಗಳೂರು, ಡಿ.9-`ದೇವೇಗೌಡರೇ, ಒಳ್ಳೇ ಬೆಲೆ ಬಂದರೆ ನಿಮ್ಮನ್ನೂ ಕೂಡ ಮಾರಾಟ ಮಾಡಿಬಿಡು ತ್ತಾರೆ. ನೀವು ಹಿರಿಯರಿದ್ದೀರಿ. ಹುಷಾ ರಾಗಿರಿ’… ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹರಿಹಾಯ್ದದ್ದು ಹೀಗೆ. ವಿಧಾನ ಪರಿಷತ್‍ನಲ್ಲಿ ಭೂ ಸುಧಾ ರಣೆ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ಬೆಂಬಲ ನೀಡಿದ ಹಿನ್ನೆಲೆ ಯಲ್ಲಿ ಕೆಂಡಾಮಂಡಲವಾದ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಾರುಕೋಲು ಚಳವಳಿಯಲ್ಲಿ ಭಾಗಿಯಾಗಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಕುಮಾರಸ್ವಾಮಿಯವರೇ, ಯಡಿಯೂರಪ್ಪ…
ನೀವೆಲ್ಲಾ ರೈತರಲ್ಲ ಡೋಂಗಿ ರೈತರು
December 10, 2020ಕೋಲಾರ, ಡಿ.9-ತಮ್ಮ ವಿರುದ್ಧ ರೈತ ಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್ ಹರಿಹಾಯುತ್ತಿದ್ದಂ ತೆಯೇ ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆರಳಿ ಕೆಂಡವಾದರು. ಪ್ರತಿಭಟನೆ ನಡೆಸುತ್ತಿರುವವರೆಲ್ಲಾ ನಿಜವಾದ ರೈತರಲ್ಲ. ಅವರು ಡೋಂಗಿ ರೈತರು. ಅವರು ಒಂದು ದಿನವೂ ಜಮೀನಿಗಿಳಿದು ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು. ಇವರಿಂದ ತಾನು ಪಾಠ ಕಲಿತುಕೊಳ್ಳಬೇಕಾಗಿಲ್ಲ. ರೈತರ ಹೆಸರಿನಲ್ಲಿ ಹೊಟ್ಟೆಪಾಡಿನ ರಾಜಕೀಯ ಅವರದು. ನಮ್ಮ ಪಕ್ಷಕ್ಕೆ ರೈತ ಮುಖಂಡರ ಬೆಂಬಲ ಬೇಕಾಗಿಲ್ಲ. ಜೆಡಿಎಸ್ ರೈತರಿಗಾಗಿಯೇ ಇದೆ. ಮುಂದೆಯೂ ರೈತ ಪರ ಇರುತ್ತೆ ಎಂದರು. ನಾನು…
ಮೈಸೂರಲ್ಲಿ 6 ದಿನಗಳ ‘ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದರ್ಶನ’ ಉದ್ಘಾಟನೆ
December 10, 2020ಮೈಸೂರು, ಡಿ.9(ಎಂಕೆ)- ಮೈಸೂರಿನ ವಿಶ್ವೇಶ್ವರ ನಗರದ ಕೈಗಾರಿಕಾ ಉಪ ನಗರ 2ನೇ ಹಂತದ ಅಕ್ಕಮಹಾದೇವಿ ರಸ್ತೆಯ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ 6 ದಿನಗಳ ‘ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದರ್ಶನ’ವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಡಿ.ಬಿ.ನಟೇಶ್ ಬುಧವಾರ ಉದ್ಘಾಟಿಸಿದರು. ಬಳಿಕ ಮಾತನಾಡಿ, `ಮೈಬಿಲ್ಡ್’ ಮೈಸೂರು ಘಟಕ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೊರೊನಾ ಸೋಂಕಿ ನಿಂದ ಬಿಲ್ಡರ್ಸ್‍ಗೆ ಸಮಸ್ಯೆಗಳ ಜತೆಗೆ ಸವಾಲುಗಳೂ ಎದುರಾ ಗಿವೆ. ಕಟ್ಟಡ ನಿರ್ಮಾಣ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಮುಂದಿನ…
ಮಂಡಿ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಇಬ್ಬರು ಬೈಕ್ ಕಳ್ಳರ ಸೆರೆ, 9 ದ್ವಿಚಕ್ರ ವಾಹನ ವಶ
December 10, 2020ಮೈಸೂರು, ಡಿ.9(ಎಸ್‍ಪಿಎನ್)- ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು, ಆರೋಪಿಗಳಿಂದ ಒಟ್ಟು 3.10 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ಕಲ್ಯಾಣಗಿರಿ ನಿವಾಸಿ ವಾಸಿಂಪಾಷ(22), ರಾಜೀವ್ ನಗರದ ಲಿಡ್‍ಕರ್ ಕಾಲೋನಿ ನಿವಾಸಿ ಸಂದೀಪ್ ಅಲಿಯಾಸ್ ದುರ್ಗ ಸಂದೀಪ್(20) ಬಂಧಿತರು. ಡಿ.8ರ ಸಂಜೆ 4ರಲ್ಲಿ ಪುಲಿಕೇಶಿ ರಸ್ತೆ ಖಬರ್‍ಸ್ಥಾನ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಸ್ಕೂಟರ್‍ನಲ್ಲಿ ಸಂಚರಿಸುತ್ತಿದ್ದ ಆರೋಪಿಗಳಿಬ್ಬ ರನ್ನೂ ಕರ್ತವ್ಯನಿರತ…
ಭೂ ಸುಧಾರಣಾ ತಿದ್ದುಪಡಿ ವಿರುದ್ಧ ನಿಂತ ಎಂಎಲ್‍ಸಿ ಮರಿತಿಬ್ಬೇಗೌಡ
December 10, 2020ಜೆಡಿಎಸ್ ಪಕ್ಷದ ಉಳಿದ ಸದಸ್ಯರು ತಿದ್ದುಪಡಿಗೆ ಬೆಂಬಲ ಇದು ಭೂಗಳ್ಳರ ಪರ ಕಾಯ್ದೆ; ಮರಿತಿಬ್ಬೇಗೌಡ ಆಕ್ರೋಶ ಮೈಸೂರು, ಡಿ.9(ಪಿಎಂ)- ರಾಜ್ಯ ಸರ್ಕಾರ ವಿಧಾನ ಪರಿಷತ್‍ನಲ್ಲಿ ಮಂಗಳ ವಾರ ಮಂಡಿಸಿದ ಭೂ ಸುಧಾ ರಣಾ ತಿದ್ದುಪಡಿ ಮಸೂದೆ (ಎರಡನೇ ತಿದ್ದುಪಡಿ)-2020ಕ್ಕೆ ಮರಿತಿಬ್ಬೇಗೌಡರ ಬಿಟ್ಟು ಜೆಡಿ ಎಸ್ ಪಕ್ಷದ ಎಲ್ಲಾ ಸದಸ್ಯರು ಬೆಂಬಲ ಸೂಚಿಸಿದರು. ಮಾಜಿ ಉಪ ಸಭಾಪತಿ ಗಳೂ ಆದ ಹಿರಿಯ ಪರಿ ಷತ್ ಸದಸ್ಯ ಮರಿತಿಬ್ಬೇಗೌಡ ಸದರಿ ಮಸೂದೆಯನ್ನು ಪ್ರಬಲವಾಗಿ ವಿರೋಧಿಸಿದರು. ಮಸೂದೆಯನ್ನು ಮತಕ್ಕೆ ಹಾಕಿದಾಗ ಅವರ…
ರಾಜ್ಯ ಸರ್ಕಾರದ ಆದೇಶದಂತೆ ಮೈಸೂರಲ್ಲಿ ಹುಕ್ಕಾ ಬಾರ್ ಬಂದ್
December 10, 2020ಮೈಸೂರು, ಡಿ. 9(ಆರ್‍ಕೆ)- ಸರ್ಕಾರದ ಆದೇಶದಂತೆ ಮೈಸೂರು ನಗರದ ಹುಕ್ಕಾ ಬಾರ್‍ಗಳನ್ನು ಬಂದ್ ಮಾಡಿಸಲಾಗುವುದು ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಾ.ಎ.ಎನ್.ಪ್ರಕಾಶ್‍ಗೌಡ ತಿಳಿಸಿದ್ದಾರೆ. ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿರುವ ಹುಕ್ಕಾ ಬಾರ್ ಮತ್ತು ರಿಕ್ರಿಯೇಷನ್ ಕ್ಲಬ್‍ಗಳನ್ನು ಮುಚ್ಚಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಆ ಕುರಿತು ನಮಗೆ ಸರ್ಕಾರದಿಂದ ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು. ಮೈಸೂರು ನಗರದಲ್ಲಿ 6 ಹುಕ್ಕಾ ಬಾರ್ ಗಳಿವೆ. ಯುವಕರ…
`ಕ್ರೀಡೆಯಲ್ಲಿನ ಸಾಧನೆಯ ಮಾನಸಿಕ ಆಯಾಮಗಳು’ ವಿಚಾರ ಸಂಕಿರಣಕ್ಕೆ ಚಾಲನೆ ಕ್ರೀಡಾಪಟುಗಳ ದೈಹಿಕ, ಮಾನಸಿಕ ಆರೋಗ್ಯ
December 10, 2020ಸಮತೋಲನಕ್ಕೆ ಕ್ರೀಡಾ ಮನೋವಿಜ್ಞಾನ ಸಹಕಾರಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮೈಸೂರು, ಡಿ.9(ಆರ್‍ಕೆಬಿ)- ಕ್ರೀಡಾ ಮನೋವಿಜ್ಞಾನವು ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನ ಪೋಷಿಸಲು ಸಹಕಾರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಮತ್ತು ವೀ ದಿ ಸೊಸೈಟಿ ಆಶ್ರಯದಲ್ಲಿ ದೈಹಿಕ ಶಿಕ್ಷಣ ವಿಭಾಗದ ಯೋಗ ಹಾಲ್‍ನಲ್ಲಿ ಬುಧವಾರ ಆಯೋಜಿಸಲಾಗಿದ್ದ `ಕ್ರೀಡೆ ಗಳಲ್ಲಿನ ಸಾಧನೆಯ ಮಾನಸಿಕ ಆಯಾಮ ಗಳು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು….
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ರೇಡಿಯೋಗಳ ಪ್ರಮುಖ ಪಾತ್ರ
December 10, 2020ಮೈಸೂರು, ಡಿ.9(ಆರ್‍ಕೆಬಿ)- ಶಿಕ್ಷಣ, ಮನರಂಜನೆ, ಮಾಹಿತಿ ಒದಗಿಸುವ ಜೊತೆಗೆ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸುವ ಏಕೈಕ ಮಾಧ್ಯಮ ರೇಡಿಯೋ ಎಂದು ಮೈಸೂರು ವಿಶ್ವ ವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಹೇಳಿದರು. ಮೈಸೂರು ವಿವಿ ಸಮುದಾಯ ರೇಡಿಯೋ ಕೇಂದ್ರದ ವತಿಯಿಂದ ಬುಧವಾರ ಆಯೋ ಜಿಸಿದ್ದ ಕೋವಿಡ್-19 ಸಮಯದಲ್ಲಿ ಸಮು ದಾಯ ರೇಡಿಯೋದ ಪಾತ್ರ’ ಕುರಿತ ವೆಬಿ ನಾರ್‍ಗೆ ಚಾಲನೆ ನೀಡಿ ಮಾತನಾಡಿದರು. ಜನಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿರುವ ರೇಡಿಯೋ, ತಂತ್ರಜ್ಞಾನದಲ್ಲಿ ಪ್ರತೀ ವರ್ಷ ಅನೇಕ…
ಸಸಿಗಳನ್ನು ನೆಡುವ ಮೂಲಕ ಡಾ.ಶಿವರಾಮ ಕಾರಂತರ ನೆನಪಿನೋತ್ಸವ
December 10, 2020ಮೈಸೂರು, ಡಿ.9(ಆರ್‍ಕೆಬಿ)- ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ.ಶಿವರಾಮ ಕಾರಂತರ ನೆನಪಿನೋತ್ಸವದ ಅಂಗವಾಗಿ ಮೈಸೂರಿನ ಬೇರು ಫೌಂಡೇಷನ್ ವತಿಯಿಂದ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನ ಬಳಿಯ ಉದ್ಯಾನವನದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸಸಿಗಳಿಗೆ ನೀರೆರೆದು ಮಾತನಾಡಿ, ನೂರಾರು ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರದ ಮಹಾನ್ ಸಾಹಿತಿಗಳಲ್ಲಿ ಒಬ್ಬರೆನಿಸಿದ ಶಿವರಾಮ ಕಾರಂತರು ರಾಜ್ಯಾದ್ಯಂತ ಸಂಚರಿಸಿ ಸಾಹಿತ್ಯ, ನಾಟಕ, ಯಕ್ಷಗಾನ ಕುರಿತು ತಿಳಿಸಿಕೊಡುವ ಕೆಲಸ ಮಾಡಿದರು. 400ಕ್ಕೂ ಹೆಚ್ಚು ಪುಸ್ತಕಗಳನ್ನು…










