ಮೈಸೂರಲ್ಲಿ 6 ದಿನಗಳ ‘ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದರ್ಶನ’ ಉದ್ಘಾಟನೆ
ಮೈಸೂರು

ಮೈಸೂರಲ್ಲಿ 6 ದಿನಗಳ ‘ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದರ್ಶನ’ ಉದ್ಘಾಟನೆ

December 10, 2020

ಮೈಸೂರು, ಡಿ.9(ಎಂಕೆ)- ಮೈಸೂರಿನ ವಿಶ್ವೇಶ್ವರ ನಗರದ ಕೈಗಾರಿಕಾ ಉಪ ನಗರ 2ನೇ ಹಂತದ ಅಕ್ಕಮಹಾದೇವಿ ರಸ್ತೆಯ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ 6 ದಿನಗಳ ‘ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದರ್ಶನ’ವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಡಿ.ಬಿ.ನಟೇಶ್ ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿ, `ಮೈಬಿಲ್ಡ್’ ಮೈಸೂರು ಘಟಕ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೊರೊನಾ ಸೋಂಕಿ ನಿಂದ ಬಿಲ್ಡರ್ಸ್‍ಗೆ ಸಮಸ್ಯೆಗಳ ಜತೆಗೆ ಸವಾಲುಗಳೂ ಎದುರಾ ಗಿವೆ. ಕಟ್ಟಡ ನಿರ್ಮಾಣ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮುಡಾ ಮತ್ತು ಮೈಬಿಲ್ಡ್ ಮೈಸೂರು ಘಟಕ ಜಂಟಿಯಾಗಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತರಬೇತಿ ನೀಡುವ ಕುರಿತು ಚಿಂತಿಸಿವೆ ಎಂದರು.ಮೈಸೂರು ನಗರದ ಉದ್ಯಾನಗಳ ಅಭಿವೃದ್ಧಿಗೆ ಮೈಬಿಲ್ಡ್ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಹೈವೆ ಇಂಪ್ರೂವ್‍ಮೆಂಟ್ ಪ್ರಾಜೆಕ್ಟ್‍ನ ಯೋಜನಾ ನಿರ್ದೇಶಕ ಸುರೇಶ್ ಬಾಬು ವೀಡಿಯೊ ಕರೆ ಮೂಲಕ ಮಾತನಾಡಿ, ಮೈಬಿಲ್ಡ್ ಮೈಸೂರು ಘಟಕ ಕಳೆದ 20 ವರ್ಷಗಳಿಂದ ವಸ್ತು ಪ್ರದರ್ಶನ ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಪ್ರದರ್ಶನ ಕ್ಕಿಟ್ಟು ಜನತೆಗೆ ಅನುಕೂಲವಾಗುವ ಕಾರ್ಯದಲ್ಲಿ ಮೈಬಿಲ್ಡ್ ತೊಡಗಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಕಲಾವಿದೆ ಗೌರಿ ಪ್ರಿಯಾ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ರಂಜಿಸಿದರು.

ಬಿಎಐ ರಾಜ್ಯಾಧ್ಯಕ್ಷ ಯು.ಎಂ.ಗುರುಶಾಂತಪ್ಪ, ಮೈಸೂರು ಘಟಕ ಅಧ್ಯಕ್ಷ ಎಂ.ರತ್ನರಾಜ್, ಗೌರವ ಕಾರ್ಯದರ್ಶಿ ನಾಗರಾಜು ವಿ.ಬೈರಿ, ಮೈಬಿಲ್ಡ್-20 ಸಮಿತಿ ಅಧ್ಯಕ್ಷ ಪಿ.ಪುಟ್ಟಸ್ವಾಮಿ, ಗೌರವ ಕಾರ್ಯದರ್ಶಿ ಮಹಾಬಲೇಶ್ವರ ಬೈರಿ, ಖಜಾಂಚಿ ಲೋಕೇಶ್ ಮತ್ತಿತರರಿದ್ದರು.

 

Translate »