ನೀವೆಲ್ಲಾ ರೈತರಲ್ಲ ಡೋಂಗಿ ರೈತರು
ಮೈಸೂರು

ನೀವೆಲ್ಲಾ ರೈತರಲ್ಲ ಡೋಂಗಿ ರೈತರು

December 10, 2020

ಕೋಲಾರ, ಡಿ.9-ತಮ್ಮ ವಿರುದ್ಧ ರೈತ ಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್ ಹರಿಹಾಯುತ್ತಿದ್ದಂ ತೆಯೇ ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆರಳಿ ಕೆಂಡವಾದರು. ಪ್ರತಿಭಟನೆ ನಡೆಸುತ್ತಿರುವವರೆಲ್ಲಾ ನಿಜವಾದ ರೈತರಲ್ಲ. ಅವರು ಡೋಂಗಿ ರೈತರು. ಅವರು ಒಂದು ದಿನವೂ ಜಮೀನಿಗಿಳಿದು ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು. ಇವರಿಂದ ತಾನು ಪಾಠ ಕಲಿತುಕೊಳ್ಳಬೇಕಾಗಿಲ್ಲ. ರೈತರ ಹೆಸರಿನಲ್ಲಿ ಹೊಟ್ಟೆಪಾಡಿನ ರಾಜಕೀಯ ಅವರದು. ನಮ್ಮ ಪಕ್ಷಕ್ಕೆ ರೈತ ಮುಖಂಡರ ಬೆಂಬಲ ಬೇಕಾಗಿಲ್ಲ. ಜೆಡಿಎಸ್ ರೈತರಿಗಾಗಿಯೇ ಇದೆ. ಮುಂದೆಯೂ ರೈತ ಪರ ಇರುತ್ತೆ ಎಂದರು. ನಾನು
ಸ್ವಾಭಿಮಾನದಿಂದ ಬದುಕುತ್ತಿರುವವನು. ಆದರೆ ನೀವು (ಕೋಡಿಹಳ್ಳಿ ಚಂದ್ರಶೇಖರ್) ಡೋಂಗಿ ರೈತರ ಹೆಸರಿನಲ್ಲಿ ಕೆಲಸ ಮಾಡುತ್ತಿರುವವರು. ಮೊದಲು ನಿಮ್ಮಲ್ಲಿನ ಹುಳುಕು ಗಳನ್ನು ಮುಚ್ಚಿಟ್ಟುಕೊಳ್ಳಿ. ನನ್ನ ಬಳಿ ನಿಮ್ಮ ಆಟ ನಡೆಯುವುದಿಲ್ಲ. ಬೆಳಿಗ್ಗೆ ನೀರು ಕೊಟ್ಟು ಆಮೇಲೆ ವಿಷ ಕೊಡುವ ಕೆಲಸ ಮಾಡುತ್ತಿರುವವರು ನೀವು ಎಂದು ಹರಿಹಾಯ್ದರು.

ದೇವೇಗೌಡರಿಗೆ ವಿಷ ಹಾಕಿದವರ್ಯಾರು? ದೇವೇಗೌಡರು ರೈತರಿಗೆ ಏನನ್ಯಾಯ ಮಾಡಿದ್ರು? 30 ಟಿಎಂಸಿ ಹೆಚ್ಚಾಗಿ ಕಾವೇರಿ ನೀರು ತಂದಿದ್ದು ದೇವೇಗೌಡರ ಹೋರಾಟದ ಫಲ. ಹೀಗಾಗಿ ದಾರಿಯಲ್ಲಿ ಹೋಗುವ ಚಿಲ್ಲರೆಗಳಿಗೆಲ್ಲಾ ನಾವು ಉತ್ತರ ಕೊಡಬೇಕಾ? ಎಂದು ಪ್ರಶ್ನಿಸಿದರು. ರೈತರ ಸಾಲ ಮನ್ನಾ ಮಾಡಿದಾಗ ಈ ಯಾವ ರೈತ ಮುಖಂಡನೂ ಒಂದು ಮಾತನ್ನೂ ಆಡಲಿಲ್ಲ. ಆದರೆ ನಾನು ಅಡ್ಜೆಸ್ಟ್‍ಮೆಂಟ್ ರಾಜಕೀಯ ಮಾಡುತ್ತಾ ಇದ್ದೀನಿ ಅನ್ನುವ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ನಿನ್ನೆಯಿಂದ ಜೆಡಿಎಸ್‍ಗೆ ರೈತ ದ್ರೋಹಿ ಎನ್ನುವ ಪಟ್ಟ ಕಟ್ಟಲು ಹೊರಟಿದ್ದಾರೆ. ಹೀಗೆ ಹೇಳುವವರು ಈ ಮಸೂದೆ ಯಲ್ಲಿರುವ ದೋಷಗಳೇನು ಎಂಬುದನ್ನು ಹೇಳಲಿ. ವಿಧಾನಸಭೆಯಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆ ತಂದಾಗ ಅದನ್ನು ವಿರೋಧಿಸಿದ್ದು ನಿಜ. ಆಗ ಅಧಿವೇಶನ ದಲ್ಲಿ ನಾನು ನೀಡಿದ್ದ ಸಲಹೆಯಂತೆ ಕೆಲವು ಬದಲಾವಣೆಗಳನ್ನು ಮಸೂದೆಯಲ್ಲಿ ಮಾಡಿದ್ದರಿಂದಲೇ ವಿಧಾನ ಪರಿಷತ್‍ನಲ್ಲಿ ಬೆಂಬಲ ನೀಡಿದ್ದೇವೆ. ಈ ಮಸೂದೆಯಲ್ಲಿ ರೈತರಿಗೆ ಮಾರಕ ವಾಗುವ ಯಾವುದೇ ಅಂಶವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Translate »