ಭೂ ಸುಧಾರಣಾ ತಿದ್ದುಪಡಿ ವಿರುದ್ಧ   ನಿಂತ ಎಂಎಲ್‍ಸಿ ಮರಿತಿಬ್ಬೇಗೌಡ 
ಮೈಸೂರು

ಭೂ ಸುಧಾರಣಾ ತಿದ್ದುಪಡಿ ವಿರುದ್ಧ  ನಿಂತ ಎಂಎಲ್‍ಸಿ ಮರಿತಿಬ್ಬೇಗೌಡ 

December 10, 2020

ಜೆಡಿಎಸ್ ಪಕ್ಷದ ಉಳಿದ ಸದಸ್ಯರು ತಿದ್ದುಪಡಿಗೆ ಬೆಂಬಲ

ಇದು ಭೂಗಳ್ಳರ ಪರ ಕಾಯ್ದೆ; ಮರಿತಿಬ್ಬೇಗೌಡ ಆಕ್ರೋಶ

ಮೈಸೂರು, ಡಿ.9(ಪಿಎಂ)- ರಾಜ್ಯ ಸರ್ಕಾರ ವಿಧಾನ ಪರಿಷತ್‍ನಲ್ಲಿ ಮಂಗಳ ವಾರ ಮಂಡಿಸಿದ ಭೂ ಸುಧಾ ರಣಾ ತಿದ್ದುಪಡಿ ಮಸೂದೆ (ಎರಡನೇ ತಿದ್ದುಪಡಿ)-2020ಕ್ಕೆ ಮರಿತಿಬ್ಬೇಗೌಡರ ಬಿಟ್ಟು ಜೆಡಿ ಎಸ್ ಪಕ್ಷದ ಎಲ್ಲಾ ಸದಸ್ಯರು ಬೆಂಬಲ ಸೂಚಿಸಿದರು.

ಮಾಜಿ ಉಪ ಸಭಾಪತಿ ಗಳೂ ಆದ ಹಿರಿಯ ಪರಿ ಷತ್ ಸದಸ್ಯ ಮರಿತಿಬ್ಬೇಗೌಡ ಸದರಿ ಮಸೂದೆಯನ್ನು ಪ್ರಬಲವಾಗಿ ವಿರೋಧಿಸಿದರು. ಮಸೂದೆಯನ್ನು ಮತಕ್ಕೆ ಹಾಕಿದಾಗ ಅವರ ಪಕ್ಷದ ಎಲ್ಲಾ ಸದಸ್ಯರು ಪರವಾಗಿ ನಿಂತರೆ, ಮರಿತಿಬ್ಬೇಗೌಡರು ಮಾತ್ರ ವಿರೋ ಧಿಸಿದರು. ಮಸೂದೆ ಮೇಲೆ ನಡೆದ ಮತದಾನದಲ್ಲಿ ಮಸೂದೆ ಪರ 37 ಮತಗಳು ಹಾಗೂ ವಿರುದ್ಧ 21 ಮತಗಳು ಚಲಾವಣೆಗೊಂಡವು. ವಿರುದ್ಧವಾಗಿ ಚಲಾಯಿಸಿದ ಮತದಲ್ಲಿ ಮರಿತಿಬ್ಬೇಗೌಡರ ಮತವೂ ಸೇರಿತ್ತು. ಇದೇ ವೇಳೆ ಮಸೂದೆ ಬಗ್ಗೆ ಮಾತನಾಡಿದ ಮರಿತಿಬ್ಬೇಗೌಡ, ಇದು ಭೂ ಸುಧಾರಣೆ ಕಾಯ್ದೆಯಲ್ಲ. ಬದಲಿಗೆ ಇದು ಭೂಗಳ್ಳರ ಕಾಯ್ದೆ. ಈ ತಿದ್ದುಪಡಿ ಕಾಯ್ದೆಯಿಂದ ರೈತರ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಗಳು ಹೇಳಿಕೆ ನೀಡಿದ್ದಾರೆ. ಇದು ಅಕ್ಷರಶಃ ಸುಳ್ಳು ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ಖಂಡಿಸಿ ದೆಹಲಿಯಲ್ಲಿ ಕೊರೆಯುವ ಚಳಿಯಲ್ಲೂ ಹೋರಾಟ ಮಾಡುವ ರೈತರ ಮೇಲೆ ಜಲ ಪಿರಂಗಿ ಪ್ರಯೋಗಿಸಲಾಗಿದೆ. ದೆಹಲಿಯತ್ತ ರೈತರು ಹೋಗದಂತೆ ತಡೆಯಲು ರಸ್ತೆಗಳಲ್ಲಿ ಹೊಂಡ ತೆಗೆಯಲಾಗಿದೆ. ಅನ್ನದಾತನನ್ನು ಮರೆತರೆ ಖಂಡಿತ ವಾಗಿಯೂ ಯಾರೂ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಮಧ್ಯಂತರ ತೀರ್ಪಿನ ಮೇಲೆ ಅಪೀಲು ಹೋಗದೇ ಇರುವುದು ಸರ್ಕಾರದ ದೊಡ್ಡ ಷಡ್ಯಂತ್ರವಾಗಿದೆ. ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಈ ವಿಧೇಯಕ ತಂದಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಈ ಕಾಯ್ದೆ ರೈತರು, ಕೂಲಿ ಕಾರ್ಮಿಕರು, ಬಡವರು, ಅತೀ ಬಡವರು ಮತ್ತು ರೈತ ಮಹಿಳೆಯರ ಪರವಾಗಿಲ್ಲ. ನ್ಯಾಯಾಲಯದ ಆದೇಶ ತಿರುಚಿ ತೆಗೆದುಕೊಳ್ಳಬೇಕಾಗಿರುವ ಕ್ರಮ ತೆಗೆದುಕೊಳ್ಳದೇ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡದೇ ಸರ್ಕಾರ ಈ ತಿದ್ದುಪಡಿ ತಂದಿದೆ. ಇದನ್ನು ನಾನು ಸಂಪೂರ್ಣವಾಗಿ ವಿರೋಧಿಸು ತ್ತೇನೆ ಎಂದರು. ನಾನೊಬ್ಬ ರೈತನ ಮಗ. ರೈತನ ಕಷ್ಟವೇನೆಂದು ನನಗೆ ಗೊತ್ತಿದೆ. ಇದು ರೈತ ವಿರೋಧಿ ತಿದ್ದುಪಡಿಯಾಗಿದ್ದು, ರೈತರ ಮರಣ ಶಾಸನವಾಗಿದೆ. ನಾನು ಯಾವುದೇ ಕಾರಣಕ್ಕೂ ಈ ವಿಧೇಯಕ ಬೆಂಬಲಿಸುವುದಿಲ್ಲ ಎಂದು ಗೌಡರು ತಿಳಿಸಿದರು.

 

 

 

Translate »