ಬೆಂಗಳೂರು, ಡಿ.12- ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ರಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಾರಿಗೆ ನೌಕರರು ಅಧಿ ಕೃತವಾಗಿ ಆಯ್ಕೆ ಮಾಡಿದ್ದಾರೆ. ಒಮ್ಮತದ ಮೂಲಕ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪತ್ರ ರವಾನಿಸಲು ನೌಕರರು ಮುಂದಾಗಿದ್ದಾರೆ. ಏನೇ ಚರ್ಚೆ ನಡೆಸಿದರು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಾತುಕತೆ ನಡೆಸುವಂತೆ ಅಧಿಕೃತ ಘೋಷಣಾ ಪತ್ರದಲ್ಲಿ ನೌಕರರು ಉಲ್ಲೇಖಿಸಿದ್ದಾರೆ. ಇನ್ನು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು…
ಸಾರಿಗೆ ನೌಕರರ ಕೋಡಿಹಳ್ಳಿ ಎತ್ತಿಕಟ್ಟುತ್ತಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ
December 13, 2020ಬೆಂಗಳೂರು, ಡಿ.12-ಸಾರಿಗೆ ನೌಕರರನ್ನು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ದುರುದ್ದೇಶದಿಂದ ಸರ್ಕಾರದ ವಿರುದ್ಧ ಎತ್ತಿಕಟ್ಟು ತ್ತಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಬಿಎಸ್‍ವೈ, ‘ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸಮಸ್ಯೆ ಬಗೆಹರಿಸಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಸೂಚನೆ ನೀಡಲಾಗಿದೆ. ಆದರೆ, ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ದುರುದ್ದೇಶದಿಂದ ಕೆಲವು ನೌಕರರನ್ನು…
ಮೈಸೂರಲ್ಲೂ 2ನೇ ದಿನವೂ ಬಸ್ ಸಂಚಾರ ಸ್ಥಗಿತ
December 13, 2020ಮೈಸೂರು, ಡಿ.12(ಎಂಟಿವೈ)- ತಮ್ಮನ್ನೂ `ಸರ್ಕಾರಿ ನೌಕರರು’ ಎಂದು ಪರಿಗಣಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೆಎಸ್‍ಆರ್‍ಟಿಸಿ ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಮೈಸೂರಲ್ಲಿ ನಗರ ಹಾಗೂ ಗ್ರಾಮಾಂತರ ವಿಭಾಗದ ಸಿಬ್ಬಂದಿ ಪೂರ್ಣ ಬೆಂಬಲ ನೀಡಿದ ಪರಿಣಾಮ ಶನಿವಾರವೂ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಲ್ಲಿ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ನೌಕರರು 3 ದಿನಗಳಿಂದ ತೀವ್ರ ಪ್ರತಿಭಟನೆ ನಡೆಸು ತ್ತಿದ್ದಾರೆ. ನೌಕರರ ಸಂಘದ ರಾಜ್ಯ ನಾಯಕರ ಕರೆ ಮೇರೆಗೆ ಮೈಸೂ ರಲ್ಲಿಯೂ ನೌಕರರು ಬಸ್ ಚಾಲನೆಗೆ…
ಗ್ರಾಮಪಂಚಾಯಿತಿ ಚುನಾವಣೆಯಲ್ಲಿ `ರಾಜಕೀಯ’ ಮಾಡಿದರೆ ಶಿಸ್ತುಕ್ರಮ
December 13, 2020ಮೈಸೂರು, ಡಿ.12(ಎಸ್‍ಬಿಡಿ)- ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಹಸ್ತಕ್ಷೇಪವಾದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ. ಗ್ರಾಪಂ ಸಾರ್ವತ್ರಿಕ ಚುನಾವಣೆ ಪಕ್ಷ ರಹಿತವಾಗಿ ನಡೆಯ ಬೇಕು. ಆದರೂ ರಾಜಕೀಯ ಪಕ್ಷಗಳ ಹೆಸರು ಬಳಸಿಕೊಂಡು ಸಭೆ- ಸಮಾರಂಭ ನಡೆಸುವ, ರಾಜಕೀಯ ಮುಖಂಡರ ಭಾವಚಿತ್ರವನ್ನು ಕರಪತ್ರದಲ್ಲಿ ಮುದ್ರಿಸಿ, ಹಂಚುವ ಮೂಲಕ ಪ್ರಚಾರ ಮಾಡುವುದು, ಪಕ್ಷಗಳ ಬಾವುಟ, ಚಿಹ್ನೆಯನ್ನು ಬಳಕೆ ಮಾಡುವ ಸಂಭವವಿದೆ. ಈ ರೀತಿಯ ನಿಯಮ ಬಾಹಿರ ಚಟುವಟಿಕೆಗೆ ಅವಕಾಶವಾಗದಂತೆ ರಾಜ್ಯ…
ರಾಜ್ಯದಲ್ಲಿ ಮೇಲ್ವರ್ಗಕ್ಕೂ ಶೇ.10ರಷ್ಟು ಮೀಸಲಾತಿ ಅನುಷ್ಠಾನ
December 13, 2020ಮೈಸೂರು,ಡಿ.12(ಪಿಎಂ)-ಆರ್ಥಿಕವಾಗಿ ಹಿಂದುಳಿದ ಮೇಲ್ವ ರ್ಗದ ಸಮುದಾಯಗಳಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿ ರುವ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಸೌಲಭ್ಯ ಈಗಾಗಲೇ ಹಲವು ರಾಜ್ಯಗಳಲ್ಲಿ ಅನುಷ್ಠಾನಗೊಂಡಿದ್ದು, ನಮ್ಮ ರಾಜ್ಯದಲ್ಲೂ ಮುಂದಿನ ಅಧಿವೇಶನದ ವೇಳೆಗೆ ಅನು ಷ್ಠಾನಕ್ಕೆ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರಿನ ಸಿದ್ಧಾರ್ಥನಗರದ ಗೀತಾ ಶಿಶು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು…
ವೃತ್ತಿಪರ ಕೌಶಲ್ಯಾಧಾರಿತ ಕೋರ್ಸ್‍ಗಳ ಉದ್ಘಾಟನೆ
December 13, 2020ಮೈಸೂರು,ಡಿ.12-ಮೈಸೂರಿನ ಮಹಾ ಜನ ವಿದ್ಯಾ ಕೇಂದ್ರದಲ್ಲಿ ಬಿ.ಎಸ್ಸಿ. ಮತ್ತು ಬಿ.ಬಿ.ಎ. ವೃತ್ತಿಪರ ತರಬೇತಿ ಆಧಾರಿತ ಕೋರ್ಸ್‍ಗಳನ್ನು ಮೈಸೂರು ವಿಶ್ವವಿದ್ಯಾ ನಿಲಯದ ಉಪಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಾ ಜನ ವಿದ್ಯಾಸಂಸ್ಥೆ, ಮೈಸೂರಿನಲ್ಲೇ ಹಳೆಯ ದಾದ ಪ್ರತಿಷ್ಠಿತ ಸಂಸ್ಥೆ. ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯಜ್ಞಾನ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಾಜನ ಸಂಸ್ಥೆಯು ವೃತ್ತಿಪರ ಕೌಶಲ್ಯ ತರಬೇತಿ ಕೋರ್ಸ್‍ಗಳನ್ನು ಆರಂ ಭಿಸಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಭವಿಷ್ಯವನ್ನು…
ಅಪಘಾತದಲ್ಲಿ ಮೂವರ ಬಲಿ: ಕಾರು ಕಂಪನಿ ಸೇಲ್ಸ್ ಮ್ಯಾನೇಜರ್ ವಿರುದ್ಧ ಕೇಸ್ ದಾಖಲು
December 13, 2020ಮೈಸೂರು, ಡಿ.12-ಅಪ್ರಾಪ್ತನೋರ್ವ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ಎನ್.ಆರ್. ಸಂಚಾರ ಪೊಲೀಸರು ಮೈಸೂರಿನ ಹಿನಕಲ್‍ನಲ್ಲಿರುವ ಕಾರು ಕಂಪನಿಯೊಂದರ ಸೇಲ್ಸ್ ಮ್ಯಾನೇಜರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು. ವೋಲ್ಕ್ಸ್‍ವೊಗನ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ವಿರುದ್ಧ ಅಪ್ರಾಪ್ತನಿಗೆ ಚಾಲನೆ ಮಾಡಲು ಕಾರು ನೀಡಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಗ್ರಾಹಕರಿಗೆ ಟ್ರಯಲ್ ನೀಡಲು ತಂದಿದ್ದ ಕಾರನ್ನು ಇವರು…
ಜನಜಾಗೃತಿಗಾಗಿ ಅಶೋಕಪುರಂ ಠಾಣೆ ಪೊಲೀಸರ ಸೈಕಲ್ ರ್ಯಾಲಿ
December 13, 2020ಮೈಸೂರು, ಡಿ.12(ಎಸ್‍ಪಿಎನ್)- ಅಪ ರಾಧ ಮಾಸಾಚರಣೆ ಅಂಗವಾಗಿ ಮೈಸೂ ರಿನ ಅಶೋಕಪುರಂ ಠಾಣೆ ಪೊಲೀಸರು ಸೈಕಲ್ ರ್ಯಾಲಿ ಮೂಲಕ ಸಾರ್ವಜನಿಕರಲ್ಲಿ ಕಾನೂನು-ಸುವ್ಯವಸ್ಥೆ ಬಗ್ಗೆ ಅರಿವು ಮೂಡಿಸಿದರು. ಮೈಸೂರು ನಗರ ಪಾಲಿಕೆಯ ಜಯನಗರ ವಲಯ ಕಚೇರಿ-2ರ ಆವರಣದಲ್ಲಿ ಕೆ.ಆರ್.ವಿಭಾಗದ ಎಸಿಪಿ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಅವರು ಸೈಕಲ್ ರ್ಯಾಲಿಗೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು. ನಂತರ ಮಾಧ್ಯಮಗಳ ಜತೆ ಮಾತ ನಾಡಿ, ಸಾರ್ವಜನಿಕರು ತಮ್ಮ ಸುತ್ತ ನಡೆ ಯುವ ಅಪರಾಧ ಚಟುವಟಿಕೆಗಳ ಬಗ್ಗೆ ಬೀಟ್ ಪೊಲೀಸರಿಗೆ ತಿಳಿಸಬೇಕು. ಇದರಿಂದ…
ತಂಬಾಕು ಮುಕ್ತ ಕಾಲೇಜು, ತಂಬಾಕು ವರ್ಜನಾ ಕೇಂದ್ರ ಸೇವಾ ಸೌಲಭ್ಯಗಳ ಕುರಿತು ತರಬೇತಿ ಕಾರ್ಯಾಗಾರ
December 13, 2020ಮೈಸೂರು, ಡಿ.12-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗಾಗಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು, ಕೋಟ್ಪಾ-2003ರ ಕಾಯ್ದೆ, ತಂಬಾಕು ಮುಕ್ತ ಕಾಲೇಜು ಹಾಗೂ ತಂಬಾಕು ವರ್ಜನಾ ಕೇಂದ್ರ ಸೇವಾ ಸೌಲಭ್ಯಗಳ ಕುರಿತು ಜೆಎಲ್‍ಬಿ ರಸ್ತೆಯಲ್ಲಿರುವ ಗುರು ರೆಸಿಡೆನ್ಸಿ ಸಭಾಂ ಗಣದಲ್ಲಿ ತರಬೇತಿ ಕಾರ್ಯಾಗಾರ ನೆರವೇರಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ…
ಡಾ.ಶೋಬಿತ್‍ಗೌಡಗೆ ಎಆರ್‍ಪಿ ಪ್ರಶಸ್ತಿ
December 13, 2020ಮೈಸೂರು,ಡಿ.12-ಕರ್ನಾಟಕ ಸರ್ಕಾರದ ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಕೊಡ ಮಾಡುವ `ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇ ಷನ್’ (ಎಆರ್‍ಪಿ) ಪ್ರಶಸ್ತಿಯನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲ ಯದ ಡಾ.ಶೋಬಿತ್‍ಗೌಡ ಅವರಿಗೆ ನೀಡಿ ಗೌರವಿಸಿದೆ. ಕಳೆದ ವರ್ಷ ವೈಜ್ಞಾನಿಕ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ವಿಜ್ಞಾನ ಸಂಶೋ ಧನೆಯನ್ನು ಪೋಷಿಸಲು ಎಆರ್‍ಪಿಯನ್ನು ಕರ್ನಾಟಕ ಸರ್ಕಾರದ ವಿಜಿಎಸ್‍ಟಿ ಸ್ಥಾಪಿಸಿದೆ. ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಡಾ.ಶೋಬಿತ್‍ಗೌಡ ಜಪಾನ್ ಹೊಕೈಡೋ ವಿಶ್ವವಿದ್ಯಾನಿಲಯ…










