ವೃತ್ತಿಪರ ಕೌಶಲ್ಯಾಧಾರಿತ ಕೋರ್ಸ್‍ಗಳ ಉದ್ಘಾಟನೆ
ಮೈಸೂರು

ವೃತ್ತಿಪರ ಕೌಶಲ್ಯಾಧಾರಿತ ಕೋರ್ಸ್‍ಗಳ ಉದ್ಘಾಟನೆ

December 13, 2020

ಮೈಸೂರು,ಡಿ.12-ಮೈಸೂರಿನ ಮಹಾ ಜನ ವಿದ್ಯಾ ಕೇಂದ್ರದಲ್ಲಿ ಬಿ.ಎಸ್ಸಿ. ಮತ್ತು ಬಿ.ಬಿ.ಎ. ವೃತ್ತಿಪರ ತರಬೇತಿ ಆಧಾರಿತ ಕೋರ್ಸ್‍ಗಳನ್ನು ಮೈಸೂರು ವಿಶ್ವವಿದ್ಯಾ ನಿಲಯದ ಉಪಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಹಾ ಜನ ವಿದ್ಯಾಸಂಸ್ಥೆ, ಮೈಸೂರಿನಲ್ಲೇ ಹಳೆಯ ದಾದ ಪ್ರತಿಷ್ಠಿತ ಸಂಸ್ಥೆ. ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯಜ್ಞಾನ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಾಜನ ಸಂಸ್ಥೆಯು ವೃತ್ತಿಪರ ಕೌಶಲ್ಯ ತರಬೇತಿ ಕೋರ್ಸ್‍ಗಳನ್ನು ಆರಂ ಭಿಸಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಕೌಶಲ್ಯ ತರಬೇತಿ ಮುಖ್ಯವಾಗುತ್ತದೆ. ಇದು ನಮಗೆ ಸೃಜನಶೀಲಶಕ್ತಿ, ಮಾನವೀಯ ಮೌಲ್ಯ ಮತ್ತು ಬದುಕನ್ನು ಹೇಗೆ ರೂಪಿಸಿ ಕೊಳ್ಳಬೇಕೆಂದು ಕಲಿಸುತ್ತದೆ. ಇದರಿಂದ ನಾವು ನಮ್ಮ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು. ಪ್ರತಿಭೆ ಎಲ್ಲರಲ್ಲೂ ಇದೆ, ಆದರೆ ಅದನ್ನು ಹೇಗೆ ಉಪಯೋಗಿಸಿ ಕೊಳ್ಳಬೇಕೆಂಬ ದಾರಿಯ ಕೊರತೆ ಇದೆ. ಮನುಷ್ಯನ ಕುತೂಹಲ ಕೆರಳಿಸಿ, ತನ್ಮೂ ಲಕ ಉತ್ತರ ಪಡೆಯುವುದೇ ಶಿಕ್ಷಣ. ಅನು ಭವದ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚಿನ ಪ್ರಾಧಾ ನ್ಯತೆ ಕೊಡಬೇಕು. ಇದರಿಂದ ಕೌಶಲ್ಯ ಅಭಿವೃದ್ಧಿಯಾಗುತ್ತದೆ. ಭಾರತರತ್ನ ಪ್ರಶಸ್ತಿ ಪುರಸ್ಕøತ ಹೆಸರಾಂತ ಶಿಕ್ಷಕರೂ, ಮಾಜಿ ರಾಷ್ಟ್ರಪತಿಗಳೂ ಆದ ಡಾ. ರಾಧಾಕೃಷ್ಣನ್ ಅವರ “ಸಮಯ ಬದಲಾದಂತೆ ಶಿಕ್ಷಣವೂ ಬದಲಾಗಬೇಕು, ಇದರಿಂದ ಸಮಾಜವೂ ಬದಲಾಗುತ್ತದೆ“ ಎಂಬ ನುಡಿಗಟ್ಟನ್ನು ನೆನೆಪಿ ಸಿಕೊಂಡು, ಇದನ್ನು ಇಂದಿನ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಸಲಹೆ ನೀಡಿ ಇಂತಹ ವೃತ್ತಿಪರ ಕೌಶಲ್ಯಾಧಾರಿತ ಕೋರ್ಸ್‍ಗಳು ವಿದ್ಯಾರ್ಥಿ ಗಳ ಸ್ವಾವಲಂಬಿ ಜೀವನಕ್ಕೆ ಅಡಿಪಾಯ ವಿದ್ದಂತೆ. ಇದರಿಂದ ಅವಕಾಶಗಳು ಹೆಚ್ಚು ತ್ತವೆ. ಇಂತಹ ವಿಷಯಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಲಹೆ, ತಿಳುವಳಿಕೆ ನೀಡುವ ಜವಾಬ್ದಾರಿಯನ್ನು ನಿರ್ವಹಿಸ ಬೇಕಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ವೃತ್ತಿಪರ ಶಿಕ್ಷಣವನ್ನು ಒದಗಿಸುವಲ್ಲಿ ಮಹಾಜನ ಶಿಕ್ಷಣ ಸಂಸ್ಥೆ ಮೈಸೂರಿನಲ್ಲೇ ಪ್ರಪ್ರಥಮವಾಗಿದ್ದು, ಈ ಕೋರ್ಸುಗಳ ಪಠ್ಯಕ್ರಮಗಳನ್ನು ನುರಿತ ವಿದ್ವಾಂಸರು ಹಾಗೂ ಶಿಕ್ಷಣ ತಜ್ಞರಿಂದ ವಿನ್ಯಾಸಗೊಳಿಸಲಾಗಿದೆ. ಮಾಜಿ ಸೈನಿಕರ ಮಕ್ಕಳಿಗೆ ಹಾಗೂ ವಿಶೇಷ ಅಂಗವಿಕಲ ಮಕ್ಕ ಳಿಗೆ ಶಿಕ್ಷಣ ಶುಲ್ಕದಲ್ಲಿ ಶೇಕಡ 25ರಷ್ಟು ರಿಯಾಯಿತಿಯನ್ನು ನಮ್ಮ ಸಂಸ್ಥೆಯು ನೀಡುತ್ತಿದೆ. ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹಾಜನ ವಿದ್ಯಾ ಸಂಸ್ಥೆ ವತಿಯಿಂದ ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪೂಜಾ ಭಾಗವತ್ ಸ್ಮಾರಕ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಡಿ.ಕೆ.ರೇಣುಕಾಚಾರ್ಯ, ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಹಾಗೂ ಪ್ರಧಾನ ವಿಜ್ಞಾನಿ ಡಾ. ಎಸ್.ಆರ್.ರಮೇಶ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಸ್.ಜಯಕುಮಾರಿ, ಟೂರಿಸಂ ಮತ್ತು ಎವಿಯೇಷನ್ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಜಿ.ಚೆಟ್ಟಿ, ಮತ್ತು ಪ್ರವಾಸೋ ದ್ಯಮ ಹಾಗೂ ಆತಿಥ್ಯ ವಿಭಾಗದ ಮುಖ್ಯಸ್ಥ ರಾದ ಕಮಾಂಡರ್ ಹೆಚ್.ಎನ್. ಸತೀಶ್ (ನಿವೃತ್ತ) ಉಪಸ್ಥಿತರಿದ್ದರು.

Translate »