ಗ್ರಾಮಪಂಚಾಯಿತಿ ಚುನಾವಣೆಯಲ್ಲಿ `ರಾಜಕೀಯ’ ಮಾಡಿದರೆ ಶಿಸ್ತುಕ್ರಮ
ಮೈಸೂರು

ಗ್ರಾಮಪಂಚಾಯಿತಿ ಚುನಾವಣೆಯಲ್ಲಿ `ರಾಜಕೀಯ’ ಮಾಡಿದರೆ ಶಿಸ್ತುಕ್ರಮ

December 13, 2020

ಮೈಸೂರು, ಡಿ.12(ಎಸ್‍ಬಿಡಿ)- ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಹಸ್ತಕ್ಷೇಪವಾದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ. ಗ್ರಾಪಂ ಸಾರ್ವತ್ರಿಕ ಚುನಾವಣೆ ಪಕ್ಷ ರಹಿತವಾಗಿ ನಡೆಯ ಬೇಕು. ಆದರೂ ರಾಜಕೀಯ ಪಕ್ಷಗಳ ಹೆಸರು ಬಳಸಿಕೊಂಡು ಸಭೆ- ಸಮಾರಂಭ ನಡೆಸುವ, ರಾಜಕೀಯ ಮುಖಂಡರ ಭಾವಚಿತ್ರವನ್ನು ಕರಪತ್ರದಲ್ಲಿ ಮುದ್ರಿಸಿ, ಹಂಚುವ ಮೂಲಕ ಪ್ರಚಾರ ಮಾಡುವುದು, ಪಕ್ಷಗಳ ಬಾವುಟ, ಚಿಹ್ನೆಯನ್ನು ಬಳಕೆ ಮಾಡುವ ಸಂಭವವಿದೆ. ಈ ರೀತಿಯ ನಿಯಮ ಬಾಹಿರ ಚಟುವಟಿಕೆಗೆ ಅವಕಾಶವಾಗದಂತೆ ರಾಜ್ಯ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಪ್ರಚಾರ ಮಾಡಬಾರದು. ತಮಗೆ ಹಂಚಿಕೆ ಮಾಡುವ ಮುಕ್ತ ಚಿಹ್ನೆಯಡಿ ಮಾತ್ರ ಮತ ಕೇಳಬೇಕು. ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ನ್ಯಾಯಸಮ್ಮತ ಮತದಾನಕ್ಕೆ ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಸೂಚನೆಗಳಿವು: ಯಾವುದೇ ರಾಜಕೀಯ ಪಕ್ಷಗಳು ಸಭೆ, ಸಮಾರಂಭ ನಡೆಸಿ, ವೇದಿಕೆಯಲ್ಲಿ ಪಕ್ಷದ ಬಾವುಟ, ಬ್ಯಾನರ್ ಅಳವಡಿಸಿ, ಗ್ರಾಪಂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವಂತಿಲ್ಲ. ಗ್ರಾಪಂ ಚುನಾವಣಾ ಅಭ್ಯರ್ಥಿಗಳು ತಾವು ಯಾವುದೇ ಪಕ್ಷದವರೆಂದು ಅಥವಾ ಬೆಂಬಲಿತರೆಂದು ಮತದಾರರಿಗೆ ಪರಿಚಯಿಸಿ ಕೊಳ್ಳುವಂತಿಲ್ಲ. ಹೀಗೆ ಹೇಳಿಕೊಂಡು ತಮ್ಮ ಪರವಾಗಿ ಬೇರೆಯವರೂ ಮತ ಕೇಳುವಂತಿಲ್ಲ. ಸ್ಪರ್ಧಾರ್ಥಿಗಳು ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷದ ಚಿಹ್ನೆ ಇರುವ ಕರಪತ್ರ ಮುದ್ರಿಸಿ, ಹಂಚುವಂತಿಲ್ಲ. ಇಂತಹ ಕಟೌಟ್‍ಗಳು, ಬ್ಯಾನರ್, ಬಂಟಿಂಗ್‍ಗಳನ್ನೂ ಅಳವಡಿಸು ವಂತಿಲ್ಲ. ಪತ್ರಿಕೆಗಳು ಇನ್ನಿತರ ಮಾಧ್ಯಮಗಳ ಮೂಲಕವೂ ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷದ ಚಿಹ್ನೆಗಳನ್ನು ಬಳಸಿ, ಜಾಹೀರಾತು ನೀಡುವಂತಿಲ್ಲ. ನಿಯಮ ಉಲ್ಲಂ ಘಿಸಿದ್ದಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ಪಡೆದು, ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

 

 

 

Translate »