ಬೆಂಗಳೂರು, ಡಿ.13-ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದು ಸಾರ್ವಜನಿಕರಿಗೆ ಒಂದು ತೊಟ್ಟು ರಕ್ತ ಬಂದರೂ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸುಮ್ಮನೆ ಬಿಡುವುದಿಲ್ಲ. ಪರ ಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು. ಸಂಧಾನ ವಿಫಲವಾಗಿದೆ ಎಂದು ಫ್ರೀಡಂ ಪಾರ್ಕ್‍ನಲ್ಲಿ ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಘೋಷಣೆ ಮಾಡಿದ ಬೆನ್ನಲ್ಲೇ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಭಾಗ ವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಇಂದು ಸಾರಿಗೆ ನೌಕರರ ಮುಖಂಡರು ಸಂಧಾನ ಸಭೆ ಯಲ್ಲಿ…
ಕರ್ತವ್ಯಕ್ಕೆ ಹಾಜರಾಗುವ ಆಶಾಭಾವನೆ ಇದೆ
December 14, 2020ಖಾಸಗಿ ವಾಹನಗಳ ಮುಕ್ತ ಸಂಚಾರಕ್ಕೂ ಅವಕಾಶ ಚಾಲಕ, ನಿರ್ವಾಹಕರಿಗೆ ಸೂಕ್ತ ಭದ್ರತೆ ಬೆಂಗಳೂರು, ಡಿ.13-ಕೋಡಿಹಳ್ಳಿ ಚಂದ್ರಶೇಖರ್ ಮುಖಂಡತ್ವದ ಸಾರಿಗೆ ನೌಕರರ ಒಕ್ಕೂಟ ಮುಷ್ಕರ ಮುಂದುವರೆಸು ವುದಾಗಿ ಹೇಳಿದ್ದರೂ, ಹಲವಾರು ನೌಕರರು ನಾಳೆ (ಡಿ.14) ಕರ್ತವ್ಯಕ್ಕೆ ಹಾಜರಾಗುವ ಆಶಾಭಾವನೆ ಇದೆ ಎಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಸೂಕ್ತ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಇಂದು ಬೆಳಿಗ್ಗೆಯಿಂದ ಸಂಜೆವರೆಗೆ ನೌಕರರ ಮುಖಂ ಡರ ಜೊತೆ ಸಭೆ ನಡೆಸಿದ್ದೇವೆ. ಸಭೆಯ ಮಧ್ಯೆಯೇ ಮುಖಂಡರು ಹೊರ…
ಅನಂತ ಸುಬ್ಬರಾವ್ ನೇತೃತ್ವದ ಎಐಟಿಯುಸಿಯಿಂದ ನೌಕರರಿಗೆ ಕರೆ
December 14, 2020ಬೆಂಗಳೂರು, ಡಿ.13-ಸರ್ಕಾರದ ಜೊತೆ ಸಂಧಾನ ವಿಫಲವಾಗಿದ್ದು, ಮುಷ್ಕರ ಮುಂದುವರೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಾರಿಗೆ ನೌಕರರ ಒಕ್ಕೂಟ ಘೋಷಿಸಿದ ಬೆನ್ನಲ್ಲೇ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗು ವಂತೆ ಅನಂತ ಸುಬ್ಬರಾವ್ ನೇತೃತ್ವದ ಎಐಟಿ ಯುಸಿ ಸಂಘಟನೆ ಕಾರ್ಯದರ್ಶಿ ವಿಜಯ ಭಾಸ್ಕರ್ ನೋಟಿಸ್ ರವಾನಿಸಿದ್ದಾರೆ. ಸರ್ಕಾರದ ಜೊತೆಗಿನ ಸಂಧಾನ ಮಾತುಕತೆ ಯಶಸ್ವಿ ಯಾಗಿದ್ದು, ನಮ್ಮ ಹಲವಾರು ಬೇಡಿಕೆಗಳನ್ನು ಈಡೇರಿ ಸುವ ಭರವಸೆ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು…
ಭಕ್ತರು, ಪ್ರವಾಸಿಗರಿಗೆ ಚಾಮುಂಡಿಬೆಟ್ಟವನ್ನೇರಲು ಶೀಘ್ರದಲ್ಲೇ ಮತ್ತೊಂದು ಮೆಟ್ಟಿಲು ಮಾರ್ಗ ಲಭ್ಯ
December 14, 2020ಮೈಸೂರು, ಡಿ.13- ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಭಕ್ತರು, ಪ್ರವಾಸಿಗರು ಕಾಲ್ನಡಿಗೆಯಲ್ಲಿ ತೆರಳಲು ಶೀಘ್ರವೇ ಮತ್ತೊಂದು ಮೆಟ್ಟಿಲು ಮಾರ್ಗ ಲಭ್ಯವಾಗಲಿದ್ದು, ಹಲವು ವರ್ಷ ಗಳಿಂದ ಪಾಳುಬಿದ್ದ ಸ್ಥಿತಿಗೆ ದೂಡಲ್ಪಟ್ಟಿದ್ದ ಉತ್ತನಹಳ್ಳಿ ಗ್ರಾಮದ ಕಡೆಯಿಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮೆಟ್ಟಿಲು ಮಾರ್ಗವನ್ನು 99.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲು ದೇವಾ ಲಯದ ಆಡಳಿತ ಮಂಡಲಿ ಕ್ರಮ ಕೈಗೊಂಡಿದೆ. ಪುರಾತನ ಪ್ರಸಿದ್ಧಿಯಾಗಿರುವ ಚಾಮುಂಡಿಬೆಟ್ಟಕ್ಕೆ ಶತಮಾನ ಗಳ ಹಿಂದೆಯೇ ಎರಡು ಮೆಟ್ಟಿಲು ಮಾರ್ಗ ನಿರ್ಮಿಸಲಾಗಿದ್ದು, ಎರಡು ಮಾರ್ಗದಲ್ಲೂ ಭಕ್ತರು ಬೆಟ್ಟಕ್ಕೆ…
ಮುಂಜಾನೆಯಿಂದಲೇ ಪಂಚಲಿಂಗ ದರ್ಶನ
December 14, 2020ತಲಕಾಡು, ಡಿ.13(ಎಂಟಿವೈ)-ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿ ರುವ ತಲಕಾಡಿನಲ್ಲಿ ನಾಳೆ (ಡಿ.14) ಮುಂಜಾನೆ 4.30ರಿಂದ 7.30ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಲಿದ್ದು, ಕ್ಷೇತ್ರ ದಲ್ಲಿರುವ ಪ್ರಮುಖ 5 ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕಾರ್ಯ ಪೂರ್ಣಗೊಳಿಸಿದೆ. ಒಂದೇ ವರ್ಷದಲ್ಲಿ 5 ಶ್ರಾವಣ ಶನಿವಾರ, 5 ಕಾರ್ತಿಕ ಸೋಮವಾರ ಬಂದರೆ ಆ ವರ್ಷ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆಚರಿಸುವ ಪರಂಪರೆ ಇದೆ. 1993ರಲ್ಲಿ 12…
ಮನೆ ಮನೆಗೆ ನರೇಂದ್ರ ಮೋದಿ ಸಾಧನೆ: ಬೂತ್ ಅಧ್ಯಕ್ಷರಿಗೆ ಮನದಟ್ಟು ಮಾಡಿಕೊಟ್ಟ ಕಾರ್ಯಾಗಾರ
December 14, 2020ಮೈಸೂರು, ಡಿ.13(ಆರ್‍ಕೆಬಿ)- ಮೈಸೂ ರಿನ ಹೊರ ವಲಯದ ಮಾನಂದವಾಡಿ ರಸ್ತೆಯಲ್ಲಿರುವ ಚಿತ್ರವನ ರೆಸಾರ್ಟ್‍ನಲ್ಲಿ ಭಾನುವಾರ ನಡೆದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಬೂತ್ ಅಧ್ಯಕ್ಷರ ಕಾರ್ಯಾಗಾರ ದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಮೆಲುಕು ಹಾಕ ಲಾಯಿತು. ಯೋಜನೆಗಳ ಬಗ್ಗೆ ಸವಿವರ ವಾಗಿ ಬೂತ್ ಅಧ್ಯಕ್ಷರಿಗೆ ಮನದಟ್ಟು ಮಾಡಿ ಕೊಟ್ಟು, ಮನೆ ಮನೆಗೂ ಮೋದಿ ಸಾಧನೆ ಗಳನ್ನು ತಲುಪಿಸುವಂತೆ ತಿಳಿಸಲಾಯಿತು. ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ನಡೆದ…
ಗೋ ಹತ್ಯೆ ನಿಷೇಧ ಕಾಯ್ದೆಗೆ ನ್ಯಾಯಾಲಯದಲ್ಲಿ ಹಿನ್ನಡೆ ಖಚಿತ: ಬಡಗಲಪುರ ನಾಗೇಂದ್ರ
December 14, 2020ಮೈಸೂರು, ಡಿ.13(ಎಂಟಿವೈ)- ಗಂಜಲದ ವಾಸನೆ, ಹಸು ಸಾಕುವುದರ ತಿಳಿಯದವರು ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ ಎಂದು ವಕೀಲರೂ ಆದ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ರೈತರು, ಗ್ರಾಮೀಣ ಜನರಿಗೆ ಗೋವು ಗಳ ಸಾಕಣೆ ಬಗ್ಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಹಸುಗಳ ಬಗ್ಗೆ ತಿಳಿಯದೇ ಇದ್ದವರು ಹಸು ಸಾಕಣೆ ಬಗ್ಗೆ ತಿಳಿಹೇಳುವಂತಹ ದುಸ್ಥಿತಿ ಎದುರಾಗಿದೆ. ಹಸುವಿನ…
ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
December 14, 2020ಉಡುಪಿ,ಡಿ.13-ನಾಡಿನ ಹಿರಿಯ ವಿದ್ವಾಂಸರು, ಪದ್ಮಶ್ರೀ ಪುರಸ್ಕೃತರೂ ಆದ ಡಾ.ಬನ್ನಂಜೆ ಗೋವಿಂದಾಚಾರ್ಯ (84) ಭಾನುವಾರ ಬೆಳಗ್ಗೆ 11.15ಕ್ಕೆ ಅಂಬಲಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರು ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು, ಶಿಷ್ಯರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. 12 ದಿನಗಳ ಹಿಂದೆ ಗೋವಿಂದಾಚಾರ್ಯರ ಪುತ್ರ ವಿಜಯಭೂಷಣ ಆಚಾರ್ಯ ನಿಧನರಾಗಿದ್ದರು. ಮಗನ ನಿಧನದ ಎರಡು ವಾರ ತುಂಬುವ ಮೊದಲೇ ತಂದೆಯೂ ನಿರ್ಗಮಿಸಿದ್ದಾರೆ. ಪಡುಮನ್ನೂರು ನಾರಾಯಣ ಆಚಾರ್ಯರ ಪುತ್ರರಾದ ಗೋವಿಂದಾಚಾರ್ಯರು ವೇದ, ಉಪನಿಷತ್, ಪುರಾಣ, ರಾಮಾಯಣ, ಮಹಾ ಭಾರತ ಕುರಿತು ದೇಶ-ವಿದೇಶ…
ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ಗುದ್ದು ಖಾಸಗಿ ಬಸ್ ಸೇವೆಗೆ ನಿರ್ಧಾರ
December 13, 2020ಬೆಂಗಳೂರು, ಡಿ.12-ಸಾರಿಗೆ ನೌಕರರನ್ನು ಸರ್ಕಾರಿ ನೌಕರ ರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಕಠಿಣ ನಿಲುವು ತಳೆದಿ ರುವ ರಾಜ್ಯ ಸರ್ಕಾರ ನಾಳೆ (ಭಾನುವಾರ) ನೌಕರರು ಮಾತು ಕತೆಗೆ ಬಾರದಿದ್ದರೆ ಸರ್ಕಾರದ ವತಿಯಿಂದಲೇ ಖಾಸಗಿ ಬಸ್ ಸೇವೆ ಆರಂಭಿಸಲು ನಿರ್ಧರಿಸಿದೆ. ಶನಿವಾರ ಸಂಜೆ ಅಧಿಕಾರಿ ಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತ ನಾಡಿದ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಾರಿಗೆ ನೌಕ ರರ ಮುಷ್ಕರದಿಂದ ಸಾರ್ವ ಜನಿಕರಿಗೆ ಸಮಸ್ಯೆಯಾಗ ದಂತೆ ಕ್ರಮ…
ಮಾತುಕತೆಗೆ ಸಾರಿಗೆ ಸಚಿವ ಸವದಿ ಮುಕ್ತ ಆಹ್ವಾನ
December 13, 2020ಬೆಂಗಳೂರು, ಡಿ.12-ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಮುಕ್ತ ಮಾತುಕತೆಗೆ ಬರುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಆಹ್ವಾನ ನೀಡಿದ್ದಾರೆ. ಯಾವುದೇ ಬೇಡಿಕೆ ಇದ್ದರೂ ಮುಕ್ತ ಮಾತು ಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿರುವ ಅವರು, ನಿನ್ನೆ ಮತ್ತು ಇಂದು ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಂಡಿ ರುವುದು ಹಾಗೂ ಬಸ್‍ಗಳಿಗೆ ಕಲ್ಲು ತೂರಾಟ ನಡೆಸುವುದು, ಅಹಿತಕರ ಘಟನೆಗಳು ನಡೆದಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿರುವ ಅವರು, 1.30 ಲಕ್ಷ ಸಾರಿಗೆ ನೌಕರರ ಹಿತಾಸಕ್ತಿ…









