ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ಗುದ್ದು ಖಾಸಗಿ ಬಸ್ ಸೇವೆಗೆ ನಿರ್ಧಾರ
ಮೈಸೂರು

ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ಗುದ್ದು ಖಾಸಗಿ ಬಸ್ ಸೇವೆಗೆ ನಿರ್ಧಾರ

December 13, 2020

ಬೆಂಗಳೂರು, ಡಿ.12-ಸಾರಿಗೆ ನೌಕರರನ್ನು ಸರ್ಕಾರಿ ನೌಕರ ರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಕಠಿಣ ನಿಲುವು ತಳೆದಿ ರುವ ರಾಜ್ಯ ಸರ್ಕಾರ ನಾಳೆ (ಭಾನುವಾರ) ನೌಕರರು ಮಾತು ಕತೆಗೆ ಬಾರದಿದ್ದರೆ ಸರ್ಕಾರದ ವತಿಯಿಂದಲೇ ಖಾಸಗಿ ಬಸ್ ಸೇವೆ ಆರಂಭಿಸಲು ನಿರ್ಧರಿಸಿದೆ.

ಶನಿವಾರ ಸಂಜೆ ಅಧಿಕಾರಿ ಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತ ನಾಡಿದ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಾರಿಗೆ ನೌಕ ರರ ಮುಷ್ಕರದಿಂದ ಸಾರ್ವ ಜನಿಕರಿಗೆ ಸಮಸ್ಯೆಯಾಗ ದಂತೆ ಕ್ರಮ ಕೈಗೊಳ್ಳಲಾಗು ವುದು. ನೌಕರರು ನಾಳೆ ಮಾತುಕತೆಗೆ ಬರಬಹುದು ಎಂಬ ವಿಶ್ವಾಸವಿದೆ. ಒಂದು ವೇಳೆ ಬರದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದಲೇ ಖಾಸಗಿ ಬಸ್ ಸೇವೆ ವ್ಯವಸ್ಥೆ ಮಾಡಲಾಗುವುದು. ನಾಳೆ ಅಧಿ ಕಾರಿಗಳು ಖಾಸಗಿ ಬಸ್ ಬಳಕೆಯ ಬಗ್ಗೆ ಪಟ್ಟಿ ಮಾಡಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದ ಅವರು,  ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾತುಕತೆ ವಿಫಲವಾದರೆ ಖಾಸಗಿ ಬಸ್ ಚಾಲಕರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ 18 ಸಾವಿರ ರೂ.ಗಳಂತೆ ಸಂಬಳ ನಿಗದಿ ಮಾಡಿ 3 ತಿಂಗಳವರೆಗೆ ಒಟ್ಟು 54 ಸಾವಿರ ರೂ. ವೇತನ ನೀಡಲು ತೀರ್ಮಾನ ಮಾಡಲಾಗಿದೆ. 10 ದಿನಗಳಲ್ಲಿ ಸಾರಿಗೆ ನೌಕರರು ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಬೇಕು. ಒಂದು ವೇಳೆ 3 ತಿಂಗಳ ಬಳಿಕವೂ ಮುಷ್ಕರ ನಡೆಸಿದರೆ ಅಂತಹವರನ್ನು ಕೆಲಸದಿಂದ ವಜಾ ಮಾಡಿ ಖಾಸಗಿ ಚಾಲಕರನ್ನೇ ಸರ್ಕಾರಿ ಬಸ್‍ಗಳಿಗೆ ನೇಮಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಇಂದು ಮಧ್ಯಾಹ್ನ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಿಎಂಟಿಸಿ ಎಂಡಿ ಸಿ.ಶಿಖಾ ಅವರು, ಅಲ್ಲಿನ ಪರಿಸ್ಥಿತಿಯ ಬಗ್ಗೆ ಸಾರಿಗೆ ಸಚಿವರಿಗೆ ವರದಿ ಸಲ್ಲಿಸಿದ್ದಾರೆ. ಸಾರಿಗೆ ಸಚಿವರ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದ ಬಿಎಂಟಿಸಿ ಎಂಡಿ ಶಿಖಾ ಮತ್ತು ಕೆಎಸ್‍ಆರ್‍ಟಿಸಿ ಎಂಡಿ ಶಿವಯೋಗಿ ಕಳಸದ್ ಅವರು, ಒಂದು ವೇಳೆ ನೌಕರರು ಮುಷ್ಕರ ಹಿಂಪಡೆಯದಿದ್ದರೆ ಖಾಸಗಿ ಬಸ್‍ಗಳ ಸೇವೆ ಕಲ್ಪಿಸುವುದರ ಬಗ್ಗೆ ಚರ್ಚಿಸಿದ್ದಾರೆ. ಖಾಸಗಿ ಬಸ್‍ಗಳ ಓಡಾಟಕ್ಕೆ ಮಾಡಬೇಕಾದ ಸಿದ್ಧತೆ ಎಷ್ಟು ಖಾಸಗಿ ಬಸ್‍ಗಳನ್ನು ಯಾವ್ಯಾವ ಮಾರ್ಗದಲ್ಲಿ ಓಡಿಸಬೇಕು. ಸೇವೆಗೆ ಎಷ್ಟು ಖಾಸಗಿ ಬಸ್‍ಗಳು ಲಭ್ಯವಿದೆ ಎಂಬುದರ ಬಗ್ಗೆ ಈ ಮಹತ್ವದ ಸಭೆಯಲ್ಲಿ ಚರ್ಚಿಸಲಾಗಿದೆ. ಅದೇ ವೇಳೆ ಕೆಎಸ್ ಆರ್‍ಟಿಸಿ ಬಸ್‍ಗಳಿಗೆ ಖಾಸಗಿ ವಾಹನ ಚಾಲಕರ ಬಳಕೆ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಷ್ಕರದ ಹಿಂದೆ ರೈತ ಮುಖಂಡರು ಶಾಮೀ ಲಾಗಿರುವುದು ಹಾಗೂ ರಾಜಕೀಯ ಕೈವಾಡ ಇರುವುದರ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಲುವು ತಳೆದಿದ್ದು, ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿಗೊಳಿಸುವ ಎಚ್ಚರಿಕೆಯನ್ನೂ ನೀಡಿದರು. ಸರ್ಕಾರದ ಈ ಎಚ್ಚರಿಕೆಯಿಂದ ಇಂದೇ ಕೆಲವರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಹೇಳಲಾಗಿದ್ದು, ನಾಳೆ ಮತ್ತಷ್ಟು ನೌಕರರು ಹಾಜ ರಾಗಬಹುದು ಎಂಬ ಆಶಾ ಭಾವನೆ ಸಾರಿಗೆ ಇಲಾಖೆ ಅಧಿಕಾರಿಗಳದ್ದಾಗಿದೆ.

 

Translate »