ಮನೆ ಮನೆಗೆ ನರೇಂದ್ರ ಮೋದಿ ಸಾಧನೆ: ಬೂತ್ ಅಧ್ಯಕ್ಷರಿಗೆ ಮನದಟ್ಟು ಮಾಡಿಕೊಟ್ಟ ಕಾರ್ಯಾಗಾರ
ಮೈಸೂರು

ಮನೆ ಮನೆಗೆ ನರೇಂದ್ರ ಮೋದಿ ಸಾಧನೆ: ಬೂತ್ ಅಧ್ಯಕ್ಷರಿಗೆ ಮನದಟ್ಟು ಮಾಡಿಕೊಟ್ಟ ಕಾರ್ಯಾಗಾರ

December 14, 2020

ಮೈಸೂರು, ಡಿ.13(ಆರ್‍ಕೆಬಿ)- ಮೈಸೂ ರಿನ ಹೊರ ವಲಯದ ಮಾನಂದವಾಡಿ ರಸ್ತೆಯಲ್ಲಿರುವ ಚಿತ್ರವನ ರೆಸಾರ್ಟ್‍ನಲ್ಲಿ ಭಾನುವಾರ ನಡೆದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಬೂತ್ ಅಧ್ಯಕ್ಷರ ಕಾರ್ಯಾಗಾರ ದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಮೆಲುಕು ಹಾಕ ಲಾಯಿತು. ಯೋಜನೆಗಳ ಬಗ್ಗೆ ಸವಿವರ ವಾಗಿ ಬೂತ್ ಅಧ್ಯಕ್ಷರಿಗೆ ಮನದಟ್ಟು ಮಾಡಿ ಕೊಟ್ಟು, ಮನೆ ಮನೆಗೂ ಮೋದಿ ಸಾಧನೆ ಗಳನ್ನು ತಲುಪಿಸುವಂತೆ ತಿಳಿಸಲಾಯಿತು.

ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕ್ಷೇತ್ರದ 270 ಬೂತ್ ಅಧ್ಯಕ್ಷರು, ಅಪೇಕ್ಷಿತ ಕಾರ್ಯಕರ್ತರು ಹಾಗೂ ಪಕ್ಷದ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿ, ಬಳೀಕ ಮೋದಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವುದಾಗಿ ಬೂತ್ ಅಧ್ಯ ಕ್ಷರು ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯಲ್ಲಿ ಪ್ರತಿ ಕ್ಷೇತ್ರಕ್ಕೆ ಕನಿಷ್ಠ 10 ಅಭ್ಯರ್ಥಿ ಸಿಗುತ್ತಾರೆ: ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಳಿಕ ಬಿಜೆಪಿ ಇತಿಹಾಸ ಮತ್ತು ನನ್ನ ಜವಾಬ್ದಾರಿ ಕುರಿತು ಮಾತ ನಾಡಿದ ಮೈಸೂರು ನಗರ (ಜಿಲ್ಲಾ) ಪ್ರಭಾರಿ ಹಿರೇಂದ್ರ ಶಾ, ಮೇರಾ ಬೂತ್ ಸಬ್‍ಸೆ ಮಜಬೂತ್ ಎಂದು ಕರೆನೀಡಿದ್ದ ನರೇಂದ್ರ ಮೋದಿಯವರು, ಪಕ್ಷವನ್ನು ಬೂತ್ ಮಟ್ಟ ದಿಂದ ಕಟ್ಟುವ ಕಾರ್ಯಕ್ಕೆ ಪ್ರೇರಣೆ ನೀಡಿ ದ್ದಾರೆ. ಬಿಜೆಪಿ ಸ್ಥಾಪನೆಯಾದ ವರ್ಷಗಳಲ್ಲಿ ಪೋಲಿಂಗ್ ಬೂತ್‍ಗಳಲ್ಲಿ ಕೂರಿಸಲು ಕಾರ್ಯಕರ್ತರೇ ಸಿಗುತ್ತಿರಲಿಲ್ಲ. ಆದರೆ ಇಂದು ಪ್ರತಿ ಕ್ಷೇತ್ರಕ್ಕೂ ಕನಿಷ್ಠ 10 ಅಭ್ಯರ್ಥಿಗಳು ಸಿಕ್ಕುವಷ್ಟು ಬೆಳೆದಿದೆ. ಇದಕ್ಕೆ ಕಾರ್ಯಕರ್ತರೇ ಮುಖ್ಯ ಕಾರಣ.

ಹಿಂದೆ 25 ಸಾವಿರಕ್ಕೂ ಹೆಚ್ಚು ಅಧಿಕ ಮತಗಳ ಅಂತರದಿಂದ ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲಿ ಇದು ಎರಡರಷ್ಟು, ಮೂರರಷ್ಟು ಹೆಚ್ಚ ಬೇಕು. ಆ ನಿಟ್ಟಿನಲ್ಲಿ ಬೂತ್ ಅಧ್ಯಕ್ಷರು ಜವಾಬ್ದಾರಿಯಿಂದ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಬಳಿಕ ನಡೆದ ಎರಡನೇ ಅಧಿವೇಶನ ದಲ್ಲಿ ರೈಸ್ ಸಂಸ್ಥೆಯ ಮುಖ್ಯಸ್ಥ ಡಾ.ಅಚ್ಯುತ ರಾವ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಮತ್ತು ನಮ್ಮ ಹೊಣೆ ಕುರಿತು ಪ್ರಾತ್ಯಕ್ಷಿಕೆ ನೀಡಿ, ಜನರ ಬಳಿ ಹೋಗಿ ಸರ್ಕಾರದ ಯೋಜನೆ ಗಳನ್ನು ತಪುಪಿಸುವಲ್ಲಿ ಬೂತ್ ಅಧ್ಯಕ್ಷರ ಪಾತ್ರ ಮಹತ್ವದ್ದಾಗಿದೆ. ಜನರ ಜೊತೆಯೇ ಕೆಲಸ ಮಾಡಬೇಕು ಎಂಬ ಮೋದಿ ಆಶಯ ದಂತೆ ವೈಯಕ್ತಿಕ, ಗುಂಪು, ಸಮುದಾಯ ಹೀಗೆ ಎಲ್ಲರಿಗೂ ತಲುಪಿಸುವ ಕೆಲಸ ಆಗ ಬೇಕು. ಮನ್‍ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿಯವರು ಜನರಿಂದಲೇ ನೇರವಾಗಿ ಮಾಹಿತಿ ಕಲೆಹಾಕಿಕೊಂಡು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ವೈಯಕ್ತಿಕ ಅಭಿವೃದ್ಧಿ, ಮಾನವ ಸಂಪ ನ್ಮೂಲ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಪರಿಸರ ಅಭಿವೃದ್ಧಿ, ಇಷ್ಟೆಲ್ಲಾ ಆಗಬೇಕಾದರೆ ಪಾರದರ್ಶಕ ಆಡಳಿತ ವ್ಯವಸ್ಥೆ ಕೊಡಬೇಕು ಎಂಬುದು ಮೋದಿಯವರ ಪ್ರಯತ್ನವಾಗಿದೆ ಎಂದು ರಾಮದಾಸ್ ಹೇಳಿದರು.

ಶೇ.15ರಷ್ಟು ಜನರಿಗೆ ಆಧಾರ್ ಇಲ್ಲ: ಇನ್ನು ಶೇ.15ರಷ್ಟು ಜನರಿಗೆ ಆಧಾರ್ ಗುರು ತಿನ ಚೀಟಿ ಇಲ್ಲ. ಇದ್ದವರಲ್ಲಿ ಅನೇಕರಿಗೆ ಹೆಸರು, ಹುಟ್ಟೂರು, ಜನ್ಮ ದಿನಾಂಕ, ಫೋನ್ ನಂಬರ್ ಹೀಗೆ ದೋಷಗಳಿರು ತ್ತವೆ. ಹೀಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಲ್ಲಿ ಆಧಾರ್ ಬಗ್ಗೆ ಅಸಮಾ ಧಾನವಿದೆ. ಆ ದೋಷಗಳನ್ನು ಮುಂದೆ ನಿಂತು ಸರಿಪಡಿಸುವ ಕೆಲಸ ಬೂತ್ ಅಧ್ಯ ಕ್ಷರು ಮಾಡುವ ಮೂಲಕ ಸೇವೆ ಸಲ್ಲಿಸ ಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಜನ ರಲ್ಲಿ ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಬಗ್ಗೆ ಅರಿವು ಮೂಡಿಸ ಬೇಕು. ಯಾರಿಗೆ ಮಾಸ್ಕ್ ಕೊಳ್ಳಲು ಶಕ್ತಿ ಇಲ್ಲವೋ ಅಂಥವರಿಗೆ ಉತ್ತಮ ದರ್ಜೆಯ ಮಾಸ್ಕ್‍ಗಳನ್ನು ನೀಡುವ ಕೆಲಸ ಮಾಡು ವಂತೆ ಸಲಹೆ ನೀಡಿದರು.

ಮೋದಿ ಕಾರ್ಯಕ್ರಮಗಳ ಬಗ್ಗೆ ಒಂದೊಂ ದಾಗಿ ವಿಶ್ಲೇಶಿಸಿದ ಅವರು, ಆತ್ಮನಿರ್ಭರ್, ಭೇಟಿ ಬಚಾವೋ ಭೇಟಿ ಪಡಾವೋ, ಫಿಟ್ ಇಂಡಿಯಾ ಮೂವ್‍ಮೆಂಟ್, ಜನ್ ಧನ್ ವಿಮೆ, ಒನ್ ನೇಷನ್ ಒನ್ ರೇಷನ್ ನಂತರ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಪರಿಚಯ ಮಾಡಿಕೊಡಬೇಕು. ಒನ್‍ನೇಷನ್ ಒನ್ ರೇಷನ್ ಯೋಜನೆ ಯಡಿ ಆಯ್ಕೆ ಆಗಿರುವ 7 ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ. ರಾಜ್ಯದಲ್ಲಿ ಈ ಯೋಜನೆಯ ಯಶಸ್ಸಿನಲ್ಲಿ ಬೂತ್ ಅಧ್ಯಕ್ಷರ ಹೊಣೆ ಹೆಚ್ಚಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಶೇ.42 ರಷ್ಟು ಮಂದಿ ಅನರ್ಹರಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಬಳಿಕ ಬೂತ್ ಅಧ್ಯಕ್ಷರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ಶ್ರಮಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೆ.ಆರ್.ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು ಅಧ್ಯಕ್ಷತೆ ವಹಿಸಿ ದ್ದರು. ನಗರಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪಕ್ಷದ ನಗರಾಧ್ಯಕ್ಷ ಶ್ರೀವತ್ಸ, ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ವಾಣೀಶ್‍ಕುಮಾರ್, ಕಾರ್ಯದರ್ಶಿ ಜೆ.ನಾಗೇಂದ್ರಕುಮಾರ್, ಮಂಡ್ಯ ಜಿಲ್ಲಾ ಬಿಎಪಿ ಅಧ್ಯಕ್ಷ ವಿಜಯ ಕುಮಾರ್, ನಗರಪಾಲಿಕೆ ಸದಸ್ಯರು ಇನ್ನಿ ತರರು ಉಪಸ್ಥಿತರಿದ್ದರು.

Translate »