ಜ.28ರಂದು ಸರ್ಕಾರದ ವತಿಯಿಂದ ಕೈವಾರ ತಾತಯ್ಯ ಜಯಂತಿ ಆಚರಿಸಲು ಬಲಿಜ ಬಳಗ ಮನವಿ
ಮೈಸೂರು

ಜ.28ರಂದು ಸರ್ಕಾರದ ವತಿಯಿಂದ ಕೈವಾರ ತಾತಯ್ಯ ಜಯಂತಿ ಆಚರಿಸಲು ಬಲಿಜ ಬಳಗ ಮನವಿ

December 9, 2020

ಮೈಸೂರು,ಡಿ.8(ಆರ್‍ಕೆಬಿ)-ಸರ್ಕಾರದ ವತಿಯಿಂದ ಯೋಗಿ ನಾರೇಯಣ ಯತಿ ಕೈವಾರ ತಾತಯ್ಯ ಅವರ ಜಯಂತಿ ಆಚರಿಸಲು ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಿ ಮೈಸೂರು ನಗರ ಮತ್ತು ಜಿಲ್ಲಾ ಬಲಿಜ ಯುವ ಬಳಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಅವರಲ್ಲಿ ಮನವಿ ಮಾಡಿದೆ.

ಮಂಗಳವಾರ ಚಾಮುಂಡಿಬೆಟ್ಟಕ್ಕೆ ವಿಶೇಷ ಪೂಜೆಗೆ ತೆರಳಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಕೈವಾರ ತಾತಯ್ಯ ಅವರ ಭಾವಚಿತ್ರ ನೀಡಿದ ಜಿಲ್ಲಾ ಬಲಿಜ ಬಳಗದ ಅಧ್ಯಕ್ಷ ಹರೀಶ್ ನಾಯ್ಡು, ಸರ್ಕಾರದ ವತಿಯಿಂದ ಪ್ರತೀ ವರ್ಷ ಜ.28ರಂದು ಕೈವಾರ ತಾತಯ್ಯ ಜಯಂತಿ ಆಚರಿಸಲು ಆದೇಶಿಸಬೇಕೆಂದು ಆಗ್ರಹಿಸಿದರು.

ಮಾಹಿತಿ ಕೊರತೆಯಿಂದ ಕೈವಾರ ತಾತಯ್ಯ ಜಯಂತಿ ದಿನಾಂಕ ಗೊಂದಲಮಯ ವಾಗಿತ್ತು. ಹೀಗಾಗಿ ಶ್ರೀಕೈವಾರ ಯೋಗಿ ನಾರೇಯಣ ಯತೀಂದ್ರ ಮಠದ ವಿದ್ವಾಂಸರು, ಪಂಡಿತರು, ಜ್ಞಾನಿಗಳು, ಸಂಶೋಧಕರ ಸಮಿತಿ ರಚಿಸಿ, ಅವರು ನೀಡಿರುವ ಅಭಿಪ್ರಾಯ ದಂತೆ ತಾತಯ್ಯ ಕ್ರಿ.ಶ.1726ರಲ್ಲಿ ಜನಿಸಿ, ಕ್ರಿ.ಶ.1836ರಲ್ಲಿ ತಮ್ಮ 110ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಸಮಿತಿಯ ಅಭಿಪ್ರಾಯದಂತೆ ತಾತಯ್ಯ ಜಯಂತಿಯನ್ನು ಪ್ರತಿ ವರ್ಷ ಪಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲು ತೀರ್ಮಾನಿಸಿ ಘೋಷಿಸ ಲಾಗಿದೆ. ಈ ಘೋಷಣೆಯ ಮೊಟ್ಟ ಮೊದಲ ಜಯಂತಿಯನ್ನು 28.3.2021ರಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಆದ್ದರಿಂದ ಸರ್ಕಾರ ಅದೇ ದಿನದಂದು ಜಯಂತಿ ಆಚರಿಸಲು ಆದೇಶಿಸಬೇಕು ಎಂದು ಒತ್ತಾಯಿಸಿ ದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಜಿ.ರಾಘವೇಂದ್ರ, ಎಸ್.ಎನ್.ರಾಜೇಶ್, ಯೋಗೇಶ್ ನಾಯ್ಡು, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಶ್ರೀನಿವಾಸ್, ಮಂಜುನಾಥ್ ಇನ್ನಿತರರು ಇದ್ದರು.

Translate »