ಇಂದಿನಿಂದ 6 ದಿನಗಳ ಮೈಬಿಲ್ಡ್-20 ವಚ್ರ್ಯುಯಲ್ ವಸ್ತು ಪ್ರದರ್ಶನ
ಮೈಸೂರು

ಇಂದಿನಿಂದ 6 ದಿನಗಳ ಮೈಬಿಲ್ಡ್-20 ವಚ್ರ್ಯುಯಲ್ ವಸ್ತು ಪ್ರದರ್ಶನ

December 9, 2020

ಮೈಸೂರು, ಡಿ.8(ಆರ್‍ಕೆಬಿ)- ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕದ ಆಶ್ರಯ ದಲ್ಲಿ ಡಿ.9ರಿಂದ 14ರವರೆಗೆ 6 ದಿನಗಳ ಕಾಲ ಮೈಸೂರಿನಲ್ಲಿ ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದ ರ್ಶನ ಆಯೋಜಿಸಲಾಗಿದೆ ಎಂದು ಬಿಎಐ ಮೈಸೂರು ಘಟಕದ ಅಧ್ಯಕ್ಷ ಎಂ.ರತ್ನರಾಜ್ ಇಂದಿಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಸ್ತು ಪ್ರದರ್ಶನದ ವಿವರಗಳನ್ನು ನೀಡಿದ ಅವರು, ಕಟ್ಟಡ ನಿರ್ಮಾಣ ತಂತ್ರಜ್ಞಾನ ಬಗ್ಗೆ ಮಾಹಿತಿ ನೀಡುವ ಉದ್ದೇಶದ ಈ ವಸ್ತು ಪ್ರದ ರ್ಶನ ವಿಶ್ವೇಶ್ವರನಗರ ಕೈಗಾರಿಕಾ ಸಬರ್ಬ್ 2ನೇ ಹಂತದ ಅಕ್ಕ ಮಹಾದೇವಿ ರಸ್ತೆಯ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ನಡೆಯಲಿದೆ. ಬುಧ ವಾರ (ಡಿ.9) ಸಂಜೆ 5 ಗಂಟೆಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ಚಾಲನೆ ನೀಡಲಿದ್ದಾರೆ. ಕರ್ನಾಟಕ ಹೈವೆ ಇಂಪ್ರೂ ವ್‍ಮೆಂಟ್ ಪ್ರಾಜೆಕ್ಟ್‍ನ ಯೋಜನಾ ನಿರ್ದೇ ಶಕ ಸುರೇಶ್‍ಬಾಬು ಆನ್‍ಲೈನ್ ಮೂಲಕ ಚಾಲನೆ ನೀಡಲಿದ್ದಾರೆ. ಡಿ.14ರಂದು ಸಂಜೆ 5 ಗಂಟೆಗೆ ವಸ್ತು ಪ್ರದರ್ಶನದ ಸಮಾ ರೋಪ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ ಎಂದರು.

ಮೈಬಿಲ್ಡ್-20 ಸಮಿತಿ ಅಧ್ಯಕ್ಷ ಪಿ.ಪುಟ್ಟ ಸ್ವಾಮಿ ಮಾತನಾಡಿ, ಈ ಬಾರಿಯ ವಸ್ತು ಪ್ರದರ್ಶನದಲ್ಲಿ 100 ಮಳಿಗೆಗಳ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಏರ್ಪಡಿ ಸಿದ್ದು, ಕಟ್ಟಡ ನಿರ್ಮಾಣದಲ್ಲಿ ಇತ್ತೀಚೆಗೆ ಆವಿಷ್ಕಾರಗೊಂಡಿರುವ ಕಟ್ಟಡ ಸಾಮಗ್ರಿ ಗಳ ಸಮಗ್ರ ಪರಿಚಯ ಮಾಡಲಾಗು ವುದು. 6 ದಿನಗಳ ವಸ್ತು ಪ್ರದರ್ಶನಕ್ಕೆ ಮೈಸೂರು ಹಾಗೂ ಸುತ್ತಮುತ್ತಲಿನ ಜನತೆ ಭೇಟಿ ನೀಡಿ ಕಟ್ಟಡ ಸಾಮಗ್ರಿಗಳ ಮಾಹಿತಿ ಪಡೆಯಲಿದ್ದಾರೆ. ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಸಾಧ್ಯತೆ ಇದೆ ಎಂದರು.

ಸೌರಶಕ್ತಿ ಯೋಜನೆ, ವಿದ್ಯುತ್ ಉಪ ಕರಣಗಳು, ಕಟ್ಟಡ ನಿರ್ಮಾಣದ ವಿವಿಧ ನವೀನ ಯಂತ್ರಗಳು, ಜಲಸಂರಕ್ಷಣಾ ವಿಧಾನ ಗಳು, ನವೀನ ಮಾದರಿಯ ನೆಲಹಾಸು ಗಳು, ಅಡುಗೆ ಮನೆ ಮತ್ತು ಸ್ನಾನದ ಮನೆಯ ಅಲಂಕಾರಿಕ ಸಾಮಗ್ರಿಗಳು, ವಿಶೇಷ ರೀತಿಯ ಛಾವಣಿ ಸಾಮಗ್ರಿಗಳು, ಹೊರಾಂ ಗಣ ನೆಲಹಾಸುಗಳು, ನವೀನ ರೀತಿಯ ಬಣ್ಣ ಮತ್ತು ಸಾಮಗ್ರಿಗಳು, ಉತ್ಪಾದನೆ ಗೊಂಡ ಮರಳು ಇನ್ನಿತರೆ ಸಾಮಗ್ರಿಗಳು ಪ್ರದರ್ಶನದಲ್ಲಿ ಇರಲಿವೆ ಎಂದರು.

ವಸ್ತು ಪ್ರದರ್ಶನಕ್ಕೆ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ, ಡಿಕೆ ಗ್ರೂಪ್ ಆಫ್ ಕಂಪನೀಸ್, ನಮ್ಮನೆ ಕನ್‍ಸ್ಟ್ರಕ್ಷನ್ಸ್ ಜೊತೆಗೆ ತಾಲ್‍ರಾಕ್ ಕನ್ಸ್‍ಟ್ರಕ್ಷನ್ ಕೆಮಿಕಲ್ಸ್, ವೈಶಾಖ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆ, ಆರ್‍ಕೆಬಿ ಬ್ಲಾಕ್ಸ್, ಹಿನಕಲ್ ಟೈಲ್ಸ್, ಮೆಗಾ ಬ್ಲಾಕ್ಸ್, ಬಾಲಾಜಿ ಬ್ಲೂ ಸ್ಯಾಂಡ್ ಇಂಡಸ್ಟ್ರೀಸ್, ದಿ ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್, ಸುರಭಿ ಸ್ಟೀಲ್ಸ್ ಪ್ರಾಯೋ ಜಕರಾಗಿ ಭಾಗವಹಿಸಲಿದ್ದಾರೆ ಎಂದರು.

ಪ್ರತೀ ವರ್ಷ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಬಿಲ್ಡ್ ವಸ್ತು ಪ್ರದರ್ಶನ ನಡೆಸಲಾಗುತ್ತಿತ್ತು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ವಚ್ರ್ಯುಯಲ್ ಆಗಿ ಪರಿ ವರ್ತಿಸಿ, ವಿಶ್ವೇಶ್ವರನಗರ ಇಂಡಸ್ಟ್ರಿಯಲ್ ಸಬರ್ಬ್ 2ನೇ ಹಂತದಲ್ಲಿ ಅಕ್ಕಮಹಾದೇವಿ ರಸ್ತೆಯಲ್ಲಿರುವ ಮೈಸೂರು ಬಿಲ್ಡರ್ಸ್ ಚಾರಿ ಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಏರ್ಪ ಡಿಸಲಾಗಿದೆ. ದೇಶದ ಎಲ್ಲಾ ಜನರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಲ್ಲಿ ಲಿಂಕ್ ಮೂಲಕ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಆಸ ಕ್ತರು ಕ್ಯುಆರ್ ಕೋಡ್ ಮೂಲಕ, 079 49130435 ವಾಟ್ಸಾಪ್ ಸಂಖ್ಯೆಗೆ ಮಿಸ್ ಕಾಲ್ ನೀಡಿ ವೆಬ್‍ಲಿಂಕ್ ಪಡೆಯ ಬಹುದು ಅಥವಾ ನೇರವಾಗಿ www.mybuildvirtual.com ಇಲ್ಲಿ ಲಾಗಿನ್ ಆಗಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೈಬಿಲ್ಡ್-20 ವಚ್ರ್ಯುಯಲ್ ವಸ್ತು ಪ್ರದರ್ಶನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಬಿಎಐ ಗೌರವ ಕಾರ್ಯದರ್ಶಿ ನಾಗರಾಜ ಬೈರಿ, ಮೈಬಿಲ್ಡ್-20 ಸಮಿತಿ ಗೌರವ ಕಾರ್ಯದರ್ಶಿ ಮಹಾಬಲೇಶ್ವರ ಬೈರಿ, ಖಜಾಂಚಿ ಲೋಕೇಶ್ ಇದ್ದರು.

Translate »