ಮೈಸೂರು, ಜು.24 (ಆರ್‍ಕೆ)- ಆಗಸ್ಟ್ 25ರಿಂದ 27ರವರೆಗೆ ಬೆಂಗಳೂ ರಿನ ದಿ ಲಲಿತ ಅಶೋಕ ಹೋಟೆಲಿನಲ್ಲಿ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-2019(ಏIಖಿಂ) ಏರ್ಪಡಿ ಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ತಿಳಿಸಿದ್ದಾರೆ. ಎಕ್ಸ್‍ಪೋ ಹಿನ್ನೆಲೆಯಲ್ಲಿ ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪೂರ್ವಭಾವಿ `ಕನೆಕ್ಟ್’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಏSಖಿಆಅ) ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ(ಏಖಿS) ಸಂಯುಕ್ತಾಶ್ರಯದಲ್ಲಿ 3…
ನಾಳೆಯಿಂದ ಮೈಸೂರಲ್ಲಿ ಪೇಜಾವರ ಶ್ರೀ ಚಾತುರ್ಮಾಸ್ಯ
July 25, 2019ಮೈಸೂರು,ಜು.24(ಪಿಎಂ)- ಉಡುಪಿಯ ಶ್ರೀ ಪೇಜಾ ವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ 81ನೇ ಚಾತುರ್ಮಾಸ್ಯ ವ್ರತ ಮೈಸೂರಿನ ಶ್ರೀಕೃಷ್ಣಧಾಮ ದಲ್ಲಿ ಜು.26ರಿಂದ 51 ದಿನಗಳ ಕಾಲ ನಡೆಯಲಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕೃಷ್ಣ ಟ್ರಸ್ಟ್ ಅಧ್ಯ ಕ್ಷರೂ ಆದ ಚಾತುರ್ಮಾಸ್ಯ ಆಡಳಿತ ಸಮಿತಿ ಅಧ್ಯಕ್ಷ ಆರ್. ವಾಸುದೇವ ಭಟ್, ಹಿರಿಯ ಸ್ವಾಮೀಜಿ ಅವರ ಜೊತೆ ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೂ ತಮ್ಮ…
ಮೈತ್ರಿ ಸರ್ಕಾರ ಪತನ
July 24, 2019ಬೆಂಗಳೂರು: ಕಾಂಗ್ರೆಸ್-ಜೆಡಿಎಸ್‍ನ 20 ಶಾಸಕರಲ್ಲಿ ಐವರ ಗೈರು ಹಾಗೂ 15 ಮಂದಿಯ ರಾಜೀನಾಮೆಯಿಂದ ಅಸ್ಥಿರಗೊಂಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊನೆಗೂ ಪತನವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತದ ನಿರ್ಣಯವನ್ನು ಇಂದು ರಾತ್ರಿ ಏಳು ಇಪ್ಪತ್ತಕ್ಕೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಮತಕ್ಕೆ ಹಾಕಿದಾಗ, ಅದರ ಪರವಾಗಿ 99 ಮತಗಳು ಬಿದ್ದರೆ, ಅದರ ವಿರುದ್ಧ 105 ಮತಗಳು ಬಿದ್ದವು. 6 ಮತಗಳಿಂದ 14 ತಿಂಗಳ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತು….
ಸರ್ಕಾರ ರಚನೆಗೆ ಬಿಜೆಪಿ ಭರದ ಸಿದ್ಧತೆ
July 24, 2019ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಒದಗಿ ಬಂದಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂ ರಪ್ಪ ತಮ್ಮ ಪಕ್ಷದ ಸದಸ್ಯರು ತಂಗಿರುವ ರಮಡ ರೆಸಾರ್ಟ್ ನಲ್ಲಿ ಶಾಸಕರ ಸಭೆ ನಡೆಸಿ, ಮುಂದಿನ ಉದ್ದೇಶಿತ ಬೆಳ ವಣಿಗೆಗಳ ಬಗ್ಗೆ ವಿವರ ನೀಡಿದ್ದಾರೆ. ಯಡಿಯೂರಪ್ಪ ಗುರು ವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ…
ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಗೆಲುವು: ಬಿಎಸ್‍ವೈ
July 24, 2019ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತಯಾಚನೆ ಯಲ್ಲಿ ಸೋಲುಂಟಾಗಿರುವುದು ಪ್ರಜಾಪ್ರಭುತ್ವದ ಗೆಲುವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ವಿಶ್ವಾಸಮತಯಾಚನೆ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಬಂದ ನಂತರ ವಿಧಾನಸೌಧದಲ್ಲಿ ಮೊದಲ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗ ಲಿದೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಸಿಕ್ಕ ಅತಿ ದೊಡ್ಡ ಗೆಲುವು, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಬಿಜೆಪಿ ಸರ್ಕಾರ ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಲಿದೆ, ರಾಜ್ಯಕ್ಕೆ ಸ್ಥಿರ ಸರ್ಕಾರ…
ಬೆಂಗಳೂರಲ್ಲಿ 2 ದಿನ ನಿಷೇಧಾಜ್ಞೆ ಜಾರಿ
July 24, 2019ಬೆಂಗಳೂರು: ನಗರದೆಲ್ಲೆಡೆ ಎರಡು ದಿನ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಗುರುವಾರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಗರದ ಎಲ್ಲ ಬಾರ್, ಪಬ್ ಬಂದ್ ಆಗಿರುತ್ತವೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿತೀಶ್ ಅಪಾರ್ಟ್‍ಮೆಂಟ್ ನಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಇಬ್ಬರಿಗಾಗಿ ನಡುರಸ್ತೆಯಲ್ಲಿ ಇಂದು ಸಂಜೆ ಹೈಡ್ರಾಮಾ ನಡೆದಿದೆ….
ಇಂದು ಸಂಜೆ 6ಕ್ಕೆ ಡೆಡ್‍ಲೈನ್ ಫಿಕ್ಸ್
July 23, 2019ಬೆಂಗಳೂರು: ಅನಗತ್ಯವಾದ ಭಾಷಣ… ಗದ್ದಲ… ವಿತಂಡವಾದಗಳಿಂದ ಇಡೀ ದಿನ ಕಾಲಹರಣ ಮಾಡಿ ವಿಶ್ವಾಸ ಮತ ಕಲಾಪವನ್ನು ನಾಳೆಗೆ ಮುಂದೂಡಿ ಸುವ ಮೂಲಕ ಒಂದು ದಿನ ಕಾಲಾವಕಾಶ ಪಡೆಯುವಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಯಶಸ್ವಿಯಾದರು. ನಾಳೆ ಸಂಜೆ 6 ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣ ಗೊಳಿಸುವುದಾಗಿ ಆಡಳಿತ ಪಕ್ಷಗಳ ಸದಸ್ಯರೇ ಸ್ವಯಂ ಡೆಡ್‍ಲೈನ್ ನಿಗದಿಪಡಿಸಿದ್ದಾರೆ. ಸೋಮವಾರದಂದು ವಿಶ್ವಾಸಮತ ಪ್ರಕ್ರಿಯೆ ಮುಕ್ತಾಯಗೊಳಿಸುತ್ತೇವೆ ಎಂದು ಸದನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ನೀಡಿದ್ದ…
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಜೊತೆ ಬಿರಿಯಾನಿ ತಿಂದಿಲ್ಲ, ಖರ್ಜೂರ ಮಾತ್ರ ತಿಂದೆ
July 23, 2019ಬೆಂಗಳೂರು: ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರ ಜತೆ ತಾವು ಬಿರಿಯಾನಿ ತಿಂದಿಲ್ಲ, ಖರ್ಜೂರವನ್ನಷ್ಟೇ ತಿಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಬಿರಿಯಾನಿ ಕಥೆ ಯನ್ನು ಬಿಚ್ಚಿಟ್ಟರು. ಆತನ ಜೊತೆ ಕುಳಿತು ತಾವು ಬಿರಿಯಾನಿ ತಿಂದಿದ್ದಾಗಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಸದನದಲ್ಲೂ ತಮ್ಮನ್ನೇ ಉದ್ದೇಶಿಸಿ ಬಿಜೆಪಿ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ. ಆತ ಐಎಂಎ ಮುಖ್ಯ ಸ್ಥರು ಎಂಬುದೇ ಗೊತ್ತಿರಲಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ತಮ್ಮನ್ನು ಬಲ ವಂತ ಮಾಡಿ ಶಾಸಕರೊಬ್ಬರು ಕರೆದೊಯ್ದಿದ್ದರು. ಹೃದಯ…
ಹಸಿವಾಗುತ್ತಿದೆ ಬಿಟ್ಟು ಬಿಡಿ…!
July 23, 2019ಬೆಂಗಳೂರು: ಮೈತ್ರಿ ಸರ್ಕಾರ ಸದನದಲ್ಲಿ ಮಂಡಿಸಿದ್ದ ವಿಶ್ವಾಸ ಮತಯಾಚನೆ ಹಲವು ಹೈಡ್ರಾಮಾಗಳ ನಡುವೆ ಮೈತ್ರಿ ಪಕ್ಷದ ಶಾಸಕರು ಸದನವನ್ನು ಮಂಗಳವಾರಕ್ಕೆ ಮುಂದೂಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಒಪ್ಪದ ಸಂದರ್ಭ ದಲ್ಲಿ ಸದನದಲ್ಲಿ ಗದ್ದಲ ಮೂಡಿಸುವ ಪ್ರಯತ್ನ ನಡೆಸಿದರು. ದೋಸ್ತಿ ನಾಯಕರು ಇಂದು ಕೂಡ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಮಾಡಲು ಅಸಮ್ಮತಿ ಸೂಚಿಸಿದರು. ಚರ್ಚೆ ನಡೆಸಬೇಕು ಎಂದು ಸಮಯಾವಕಾಶ ಪಡೆದ ನಾಯಕರೇ ಅಂತಿಮವಾಗಿ ಸ್ಪೀಕರ್ ಎಷ್ಟೇ ಮನವಿ ಮಾಡಿದರು ಚರ್ಚೆಗೆ ಸಹಕಾರ ನೀಡದೆ ಗದ್ದಲಕ್ಕೆ ಕಾರಣರಾದರು….
ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..?
July 23, 2019ಬೆಂಗಳೂರು: ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ 15 ಮಂದಿ ಅತೃಪ್ತ ಶಾಸಕರು ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀ ನಾಮೆ ಕೊಟ್ಟಿದ್ದೇವೆ ಎಂದಿದ್ದಾರೆ. ಆಗಾದರೇ ಸ್ವಾಭಿಮಾನ ವಿದ್ದಿದ್ದರೇ ಅವರು ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು. ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲಿನ ಚರ್ಚೆ ವೇಳೆ ಮಾತನಾಡಿದ ಶಾಸಕ ಎ.ಟಿ.ರಾಮಸ್ವಾಮಿ, ಈಗ ಎಲ್ಲಾ ಕಡೆ ಪ್ರಜಾಪ್ರಭುತ್ವ ಮೌಲ್ಯಗಳು ಇಲ್ಲ. ವಿರೋಧ ನೈತಿಕ ಮೌಲ್ಯ ಸಿದ್ಧಾಂತದ ಮೇಲೆ ನಿರ್ಣಯ…










