ಮೈಸೂರು

ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ದಾಳಿ: ದಂಡ ವಸೂಲಿ
ಮೈಸೂರು

ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ದಾಳಿ: ದಂಡ ವಸೂಲಿ

July 26, 2019

ಮೈಸೂರು, ಜು.25- ಸಾರ್ವಜನಿಕರ ದೂರಿನ ಅನ್ವಯ ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ)ಯಡಿ ಜುಲೈ 25 ರಂದು ಗುರುವಾರ ನಗರದ ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಾಜನ ಕಾಲೇಜು ಹಾಗೂ ಕೆ.ಡಿ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿ ದಂಡ ವಿಧಿಸಲಾಯಿತು. ಈ ದಾಳಿಯಲ್ಲಿ 31 ಪ್ರಕರಣಗಳನ್ನು ದಾಖಲಿಸಿ ತಂಬಾಕು ಸೇವನೆ ಮಾಡುತ್ತಿ ದ್ದವರಿಂದ 4200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇ ಕ್ಷಣಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿ ಡಾ.ಶಿವಪ್ರಸಾದ್ ತಿಳಿಸಿದ್ದಾರೆ. ಇದುವರೆಗೂ ಆರೋಗ್ಯ ಇಲಾಖೆಯಿಂದ ಒಟ್ಟು…

ಮೂರು ದಿನ ಜ್ವರ ಕಾಣಿಸಿಕೊಂಡರೆ ಕಡ್ಡಾಯ ತಪಾಸಣೆಗೆ ಸೂಚನೆ
ಮೈಸೂರು

ಮೂರು ದಿನ ಜ್ವರ ಕಾಣಿಸಿಕೊಂಡರೆ ಕಡ್ಡಾಯ ತಪಾಸಣೆಗೆ ಸೂಚನೆ

July 26, 2019

ಮೈಸೂರು,ಜು.25(ಎಂಟಿವೈ)-ಸತತ ವಾಗಿ ಮೂರು ದಿನ ಜ್ವರ ಕಾಣಿಸಿ ಕೊಂಡರೆ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯ ವಾಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಜಿಲ್ಲಾ ಆಶ್ರಿತ ರೋಗಗಳ ರೋಗ ವಾಹಕ ನಿಯಂತ್ರಣಾಧಿಕಾರಿ  ಡಾ.ಎಸ್.ಚಿದಂಬರಂ ಮನವಿ ಮಾಡಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡೆಂಗ್ಯೂ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆ ಯಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಮೈಸೂರಿನ ಜನರು ಡೆಂಗ್ಯೂ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಜನವರಿ ತಿಂಗಳಿಂದ ಜೂನ್‍ವರೆಗೆ 22 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. ಅವರೆಲ್ಲ ರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು,…

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ
ಮೈಸೂರು

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

July 26, 2019

ಮೈಸೂರು, ಜು.25(ಆರ್‍ಕೆಬಿ)- ಯಾವುದೇ ವಸ್ತು ಖರೀದಿಸುವ ಮುನ್ನ ಗ್ರಾಹಕರು ಆ ವಸ್ತುವಿನ ನಿರ್ದಿಷ್ಟತೆ, ಗುಣಮಟ್ಟ ಮತ್ತು ವಸ್ತುವಿನ ಆಯಸ್ಸಿನ (ಎಕ್ಸ್‍ಪೈರಿ) ದಿನಾಂಕ ಪರಿಶೀಲಿಸಬೇಕು. ಅಲ್ಲಿ ನಿಮಗೆ ಅನುಮಾನ ಬಂದರೆ ಅದನ್ನು ಪ್ರಶ್ನಿಸುವ ಹಕ್ಕು ನಿಮ್ಮದಾಗಿರುತ್ತದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆ ಇಂಜಿನಿ ಯರುಗಳ ಸಂಸ್ಥೆ ಸಭಾಂಗಣದಲ್ಲಿ ನವ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆಯ ಮೈಸೂರು ಜಿಲ್ಲಾ ಘಟಕವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಹೋಟೆಲ್ ಗಳಲ್ಲಿ ಜಿಎಸ್‍ಟಿ…

ಆಲನಹಳ್ಳಿ ಪೊಲೀಸ್ ಠಾಣೆ ವಶಕ್ಕೆ 2.11 ಎಕರೆ ಸರ್ಕಾರಿ ಭೂಮಿ
ಮೈಸೂರು

ಆಲನಹಳ್ಳಿ ಪೊಲೀಸ್ ಠಾಣೆ ವಶಕ್ಕೆ 2.11 ಎಕರೆ ಸರ್ಕಾರಿ ಭೂಮಿ

July 26, 2019

ಮೈಸೂರು, ಜು.25(ಆರ್‍ಕೆ)- ಮೈಸೂರು ತಾಲೂಕು, ಕಸಬಾ ಹೋಬಳಿ ಆಲನಹಳ್ಳಿ ಗ್ರಾಮದ ಸರ್ವೆ ನಂಬರ್ 158ರಲ್ಲಿ 2.11 ಎಕರೆ ಸರ್ಕಾರಿ ಜಮೀನನ್ನು ತಹಸೀಲ್ದಾರ್ ಟಿ.ರಮೇಶ್ ಬಾಬು, ಆಲನಹಳ್ಳಿ ಪೊಲೀಸ್ ಠಾಣಾ ವಶಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಜು.11ರಂದು ಆಲನಹಳ್ಳಿ ಠಾಣೆ ಇನ್‍ಸ್ಪೆಕ್ಟರ್‍ಗೆ ಪತ್ರ ಬರೆದಿರುವ ಅವರು, ಸದರಿ ಜಮೀನು ಬಸವೇಶ್ವರ ದೇವರ ಹೆಸರಿ ನಲ್ಲಿದ್ದು, ಅದು ಇನಾಂ ರದ್ಧತಿ ಕಾಯ್ದೆ ಪ್ರಕಾರ ಯಾರಿಗೂ ಮಂಜೂ ರಾಗಿಲ್ಲ. ಸದರಿ ಜಮೀನು ಸಂಬಂಧ ಆಲನಹಳ್ಳಿ ಗ್ರಾಮದ ಶಿವರಾಜು, ಚಿನ್ನಮ್ಮ ವಿರುದ್ಧ ಜಿಲ್ಲಾಧಿಕಾರಿಗಳು…

ಬಿಜೆಪಿ ಸರ್ಕಾರ ರಚನೆ ಕಗ್ಗಂಟು
ಮೈಸೂರು

ಬಿಜೆಪಿ ಸರ್ಕಾರ ರಚನೆ ಕಗ್ಗಂಟು

July 25, 2019

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಇಲ್ಲವೇ ಅನರ್ಹತೆ ವಿಚಾರ ಇತ್ಯರ್ಥವಾಗುವವರೆಗೂ ಅತಂತ್ರ ಸ್ಥಿತಿ, ತಪ್ಪಿದರೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸ ಮತದಲ್ಲಿ ಸೋತು ಪತನಗೊಂಡರೂ, ಈಗ ಬಿಜೆಪಿ ಸರ್ಕಾರ ರಚಿಸಲು ಕಾನೂನಿನ ಕಗ್ಗಂಟು ಎದುರಾಗಿದೆ. ರಾಜೀನಾಮೆ ನೀಡಿರುವ ಶಾಸಕರ ರಾಜೀ ನಾಮೆ ಅಂಗೀಕಾರ ಅಥವಾ ಅನರ್ಹತೆ ವಿಚಾರ ಇತ್ಯರ್ಥವಾಗುವವರೆಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಬೋಧಿಸಬೇಕಾದರೆ…

ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲದಿಂದ ಬಡವರು ಋಣಮುಕ್ತ
ಮೈಸೂರು

ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲದಿಂದ ಬಡವರು ಋಣಮುಕ್ತ

July 25, 2019

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿನ ಕುಟುಂಬದವರು ಪಾನ್ ಬ್ರೋಕರ್ ಇಲ್ಲವೆ ಲೇವಾದೇವಿದಾರರಿಂದ ಕೈಸಾಲ ಪಡೆದಿದ್ದರೆ, ಅಂತಹವರನ್ನು ಸಾಲ ದಿಂದ ಪಾರು ಮಾಡುವ ಋಣಮುಕ್ತ ಕಾಯ್ದೆಯನ್ನು ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಾರಿಗೊಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿಯವರು, ಮೈತ್ರಿ ಸರ್ಕಾರ ತಂದಿದ್ದ ಈ ಮಹತ್ವದ ಕಾಯ್ದೆಗೆ ರಾಷ್ಟ್ರಪತಿ ಗಳಿಂದ ಅಂಗೀಕಾರ ದೊರೆತಿದ್ದು, ನಿನ್ನೆ ನಾನು ಸರ್ಕಾರದ ಈ ಕೊನೆಯ ಆದೇಶಕ್ಕೆ ಸಹಿ ಹಾಕಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದೇನೆ. ವಾರ್ಷಿಕ 1.20 ಲಕ್ಷ ರೂ ಆದಾಯ…

ಯಡಿಯೂರಪ್ಪ ಬೆಂಗಳೂರು `ಧವಳಗಿರಿ’ ನಿವಾಸದಲ್ಲಿ ಸಂಭ್ರಮದ ವಾತಾವರಣ
ಮೈಸೂರು

ಯಡಿಯೂರಪ್ಪ ಬೆಂಗಳೂರು `ಧವಳಗಿರಿ’ ನಿವಾಸದಲ್ಲಿ ಸಂಭ್ರಮದ ವಾತಾವರಣ

July 25, 2019

ಜೊತೆ ಜೊತೆಗೆ ಬಿರುಸಿನ ರಾಜಕೀಯ ಚಟುವಟಿಕೆಗಳು ಮೈಸೂರು: ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ತುದಿ ಗಾಲಲ್ಲಿ ನಿಂತಿರುವ ಮಾಜಿ ಮುಖ್ಯ ಮಂತ್ರಿಗಳೂ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ದಲ್ಲಿ ಈಗ ಸಂತಸ ಮನೆ ಮಾಡಿದೆ. ಕಿಕ್ಕಿರಿದ ಜನವೋ ಜನ. ಜೊತೆ ಜೊತೆಗೆ ಬಿರುಸಿನ ರಾಜಕೀಯ ಚಟುವಟಿಕೆ ಗಳು ನಡೆದಿವೆ. ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸ ದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಬೆಳಿಗ್ಗೆಯಿಂದಲೇ ಬಿಜೆಪಿ ಶಾಸಕರು, ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಪದಾಧಿಕಾರಿಗಳು…

ಹಾಸನದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕರ ಪ್ರತಿಭಟನೆ
ಮೈಸೂರು, ಹಾಸನ

ಹಾಸನದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕರ ಪ್ರತಿಭಟನೆ

July 25, 2019

ಹಾಸನ: ನಗರದ ಹೊರ ವಲಯ ಹನುಮಂತಪುರದ ಬಳಿ ಇರುವ ಹಿಮ್ಮತ್ ಸಿಂಗ್ ಗಾರ್ಮೆಂಟ್ಸ್ ಕಾರ್ಖಾನೆ ಯಲ್ಲಿ ತಮ್ಮ ಮೇಲೆ ದೌರ್ಜನ್ಯ, ಶೋಷಣೆ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ಹೊರ ರಾಜ್ಯಗಳ 1500ಕ್ಕೂ ಅಧಿಕ ಕಾರ್ಮಿ ಕರು ಬುಧವಾರ ಆರಂಭಿಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಸೇರಿದಂತೆ ಹಲವರು ಗಾಯ ಗೊಂಡರು. ಪೊಲೀಸ್ ವಾಹನಗಳು ಸೇರಿದಂತೆ 20ಕ್ಕೂ ಅಧಿಕ ವಾಹನಗಳು ಕಲ್ಲು ತೂರಾಟದಲ್ಲಿ ಜಖಂಗೊಂಡಿವೆ. ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಿವಮೂರ್ತಿ, ಕೃಷ್ಣೇಗೌಡ, ದೇವರಾಜ್, ಸೋಮಶೇಖರಪ್ಪ, ಜಗದೀಶ್, ಲೋಕೇಶ್,…

ಬೈಕ್‍ಗಳಿಗೆ ಲಾರಿ ಡಿಕ್ಕಿ: ನಾಲ್ವರು ಯುವಕರ ಸಾವು
ಮೈಸೂರು

ಬೈಕ್‍ಗಳಿಗೆ ಲಾರಿ ಡಿಕ್ಕಿ: ನಾಲ್ವರು ಯುವಕರ ಸಾವು

July 25, 2019

ತಿ.ನರಸೀಪುರ: ಸಕ್ಕರೆ ಸಾಗಿಸುತ್ತಿದ್ದ ಲಾರಿ, ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪಿರುವ ದಾರುಣ ಘಟನೆ ತಾಲೂಕಿನ ಇಂಡವಾಳು ಗ್ರಾಮದ ಬಳಿ ಮೈಸೂರು ಮುಖ್ಯ ರಸ್ತೆಯಲ್ಲಿ ಬುಧ ವಾರ ಮುಂಜಾನೆ ಸಂಭವಿಸಿದೆ. ಹೆಚ್.ಡಿ.ಕೋಟೆ ತಾಲೂಕಿನ ಕಂಚ ಮಳ್ಳಿಯ ಮಹದೇವಸ್ವಾಮಿ ಪುತ್ರ ಮಧು ಕುಮಾರ್(20), ಸಿದ್ದೇಗೌಡನಹುಂಡಿಯ ಸಿದ್ದರಾಮಯ್ಯ ಪುತ್ರ ಮಧುಸೂದನ್(24), ಕಂದೇಗಾಲದ ಲೇಟ್ ಚಿಕ್ಕಣ್ಣ ಪುತ್ರ ರಾಘವೇಂದ್ರ(25), ಒರಿಸ್ಸಾದ ಸಾಜಿದ್ ಖಾನ್ ಪುತ್ರ ಅಹಮ್ಮದ್ ಖಾನ್(38) ಅಪಘಾತದಲ್ಲಿ ಮೃತಪಟ್ಟವರು. ಹಬ್ಬಕ್ಕೆ ಬಂದು ಹೆಣವಾದರು: ತಾಲೂ…

ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ
ಮೈಸೂರು

ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

July 25, 2019

ಮೈಸೂರು,ಜು.24(ಎಂಟಿವೈ)- ಅಪಾರ ಸಂಖ್ಯೆಯ ಭಕ್ತರ ಮುಗಿಲು ಮುಟ್ಟಿದ ಜಯಘೋಷ, ಮಂಗಳವಾದ್ಯದ ನಿನಾದ, ಪೊಲೀಸ್ ಬ್ಯಾಂಡ್ ಹಿಮ್ಮೇಳ ದೊಂದಿಗೆ ಬುಧವಾರ ಚಾಮುಂಡಿಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ವೈಭವದಿಂದ ಜರುಗಿತು. ಆಷಾಢ ಮಾಸದ ಕೃಷ್ಣ ಪಕ್ಷದ ಸಪ್ತಮಿ ರೇವತಿ ನಕ್ಷತ್ರದ ದಿನ ಚಾಮುಂಡಿಬೆಟ್ಟ ಸೇರಿದಂತೆ ಎಲ್ಲೆಡೆ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಆಚರಿಸುವ ಪದ್ಧತಿ ಆಚರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದು ಚಾಮುಂಡಿಬೆಟ್ಟದ ದೇವಾಲಯ ದಲ್ಲಿ ಮುಂಜಾನೆ 5.30ರಿಂದ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್, ಅರ್ಚಕ ದೇವಿ ಪ್ರಸಾದ್ ನೇತೃತ್ವದಲ್ಲಿ…

1 880 881 882 883 884 1,611
Translate »