ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ದಾಳಿ: ದಂಡ ವಸೂಲಿ
ಮೈಸೂರು

ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ದಾಳಿ: ದಂಡ ವಸೂಲಿ

July 26, 2019

ಮೈಸೂರು, ಜು.25- ಸಾರ್ವಜನಿಕರ ದೂರಿನ ಅನ್ವಯ ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ)ಯಡಿ ಜುಲೈ 25 ರಂದು ಗುರುವಾರ ನಗರದ ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಾಜನ ಕಾಲೇಜು ಹಾಗೂ ಕೆ.ಡಿ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿ ದಂಡ ವಿಧಿಸಲಾಯಿತು.

ಈ ದಾಳಿಯಲ್ಲಿ 31 ಪ್ರಕರಣಗಳನ್ನು ದಾಖಲಿಸಿ ತಂಬಾಕು ಸೇವನೆ ಮಾಡುತ್ತಿ ದ್ದವರಿಂದ 4200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇ ಕ್ಷಣಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿ ಡಾ.ಶಿವಪ್ರಸಾದ್ ತಿಳಿಸಿದ್ದಾರೆ.

ಇದುವರೆಗೂ ಆರೋಗ್ಯ ಇಲಾಖೆಯಿಂದ ಒಟ್ಟು 2,781 ಪ್ರಕರಣಗಳನ್ನು ದಾಖಲಿಸಿ ಒಟ್ಟಾರೆಯಾಗಿ 4,24,200 ರೂ.ಗಳಷ್ಟು ದಂಡವನ್ನು ಸಂಗ್ರಹಿಸಲಾಗಿದ್ದು, ಇನ್ನು ಮುಂದೆಯೂ ಸಹ ಜಿಲ್ಲೆಯಾದ್ಯಂತ ಕೋಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ ನಿರಂತರ ವಾಗಿ ದಾಳಿಯನ್ನು ಮುಂದುವರಿಸಲಾಗುವುದು ಎಂದು ಧೂಮಪಾನಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಎಚ್ಚರಿಸಿದರು. ತನಿಖಾ ದಂಡದ ಸಮಯದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಶಿವಕುಮಾರ್, ಸಮಾಜ ಕಾರ್ಯಕರ್ತ ನವೀದುಲ್ಲಾ ಷರೀಫ್, ಜಿತಿನ್ ಚಂದ್ರನ್ ಮಾಯಾ, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯ ಸಿಬ್ಬಂದಿ ಹಾಜರಿದ್ದರು. ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಕಚೇರಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಕೋಟ್ಪಾ ಕಾಯಿದೆಯಡಿ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ.

Translate »