ಬೈಕ್‍ಗಳಿಗೆ ಲಾರಿ ಡಿಕ್ಕಿ: ನಾಲ್ವರು ಯುವಕರ ಸಾವು
ಮೈಸೂರು

ಬೈಕ್‍ಗಳಿಗೆ ಲಾರಿ ಡಿಕ್ಕಿ: ನಾಲ್ವರು ಯುವಕರ ಸಾವು

July 25, 2019

ತಿ.ನರಸೀಪುರ: ಸಕ್ಕರೆ ಸಾಗಿಸುತ್ತಿದ್ದ ಲಾರಿ, ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪಿರುವ ದಾರುಣ ಘಟನೆ ತಾಲೂಕಿನ ಇಂಡವಾಳು ಗ್ರಾಮದ ಬಳಿ ಮೈಸೂರು ಮುಖ್ಯ ರಸ್ತೆಯಲ್ಲಿ ಬುಧ ವಾರ ಮುಂಜಾನೆ ಸಂಭವಿಸಿದೆ.

ಹೆಚ್.ಡಿ.ಕೋಟೆ ತಾಲೂಕಿನ ಕಂಚ ಮಳ್ಳಿಯ ಮಹದೇವಸ್ವಾಮಿ ಪುತ್ರ ಮಧು ಕುಮಾರ್(20), ಸಿದ್ದೇಗೌಡನಹುಂಡಿಯ ಸಿದ್ದರಾಮಯ್ಯ ಪುತ್ರ ಮಧುಸೂದನ್(24), ಕಂದೇಗಾಲದ ಲೇಟ್ ಚಿಕ್ಕಣ್ಣ ಪುತ್ರ ರಾಘವೇಂದ್ರ(25), ಒರಿಸ್ಸಾದ ಸಾಜಿದ್ ಖಾನ್ ಪುತ್ರ ಅಹಮ್ಮದ್ ಖಾನ್(38) ಅಪಘಾತದಲ್ಲಿ ಮೃತಪಟ್ಟವರು.

ಹಬ್ಬಕ್ಕೆ ಬಂದು ಹೆಣವಾದರು: ತಾಲೂ ಕಿನ ಹುಣಸೂರು ಗ್ರಾಮದಲ್ಲಿ ನಿನ್ನೆ (ಮಂಗಳವಾರ) ಹಬ್ಬದ ಪ್ರಯುಕ್ತ ಸ್ನೇಹಿತ ರಾಚನಾಯಕ ಎಂಬುವರ ಮನೆಗೆ ಆಗ ಮಿಸಿ ಹಬ್ಬದ ಊಟ ಮುಗಿಸಿ ಮೂರು ಬೈಕ್‍ಗಳಲ್ಲಿ ಮೈಸೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಆರು ಮಂದಿ ಯುವಕರಿದ್ದ ಈ ತಂಡ ಬಜಾಜ್ ಪಲ್ಸರ್‍ಗಳು(ಕೆಎ 09, ಹೆಚ್ ಎಸ್ 9079),
ಮತ್ತು (ಕೆಎ 09, ಹೆಚ್ ಕ್ಯೂ 1618) ಮತ್ತೊಂದು ಬೈಕ್‍ನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಮೈಸೂರಿನಿಂದ ಸಕ್ಕರೆ ತುಂಬಿಕೊಂಡು ಬರುತ್ತಿದ್ದ ಲಾರಿ (ಟಿಎನ್ 30, ಯು 0456) ಬೈಕ್‍ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಘವೇಂದ್ರ, ಅಹಮ್ಮದ್ ಖಾನ್ ಹಾಗೂ ಮಧುಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಧುಸೂದನ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಅಸುನೀಗಿದರು. ಚಂದ್ರಶೇಖರ್ ಹಾಗೂ ಮತ್ತೊಬ್ಬ ಗಾಯಗೊಂಡು, ಸಾವಿನ ದವಡೆಯಿಂದ ಪಾರಾಗಿದ್ದಾರೆ. ತಿ.ನರಸೀ ಪುರ ಪೆÇಲೀಸ್ ವೃತ್ತ ನಿರೀಕ್ಷಕ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿ ಕೊಂಡ ಪಿಎಸ್‍ಐ ಅಜರುದ್ದೀನ್ ಮುಂದಿನ ತನಿಖೆ ಕೈಗೊಂಡಿದ್ದಾರೆ.

Translate »