ಬೆಂಗಳೂರು: ಬಹುಕೋಟಿ ಐಎಂಎ ಹಗರಣದ ಮುಖ ಆರೋಪಿ ಮನ್ಸೂರ್ ಖಾನ್‍ನನ್ನು ಜು.21ರಂದು ಎದೆ ನೋವು ಮತ್ತು ಹೃದಯ ಬಡಿತದ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ. ಮನ್ಸೂರ್ ಖಾನ್‍ನನ್ನು ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ವಾಸ್ಕುಲರ್ ಸೈನ್ಸಸ್‍ಗೆ ಕರೆದೊಯ್ಯಲಾಯಿತು. ಸಂಸ್ಥೆಯ ನಿರ್ದೇಶಕ ಸಿ.ಎನ್.ಮಂಜು ನಾಥ್ ಅವರ ಪ್ರಕಾರ, ಆತಂಕ ಮತ್ತು ಒತ್ತಡವು ಅವರ ಆರೋಗ್ಯದ ಏರುಪೇರಿಗೆ ಕಾರಣವಾಗಿದೆ. ಜು.20 ರಂದು ವಿಶೇಷ ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂ ಎಲ್‍ಎ) ಅಡಿಯಲ್ಲಿ ಖಾನ್‍ನನ್ನು ಜಾರಿ ನಿರ್ದೇಶನಾಲಯ…
ಚಂದ್ರಯಾನ-2 ಯಶಸ್ವಿ ಉಡಾವಣೆ
July 23, 2019ಶ್ರೀಹರಿಕೋಟ: ಭಾರತದ ಮಹಾತ್ವಕಾಂಕ್ಷೆಯ ಚಂದ್ರಯಾನ-2 ಗಗನ ನೌಕೆ ನಭಕ್ಕೆ ಜಿಗಿದಿದೆ. ಜು.15ರಂದು ಉಡಾಯನದ ವೇಳೆ ಕಂಡು ಬಂದಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಇಂದು (ಸೋಮವಾರ) ಮಧ್ಯಾಹ್ನ ಸರಿಯಾಗಿ 2.43ಕ್ಕೆ ವ್ಯೋಮ ನೌಕೆಯನ್ನು ಹೊತ್ತ `ಬಾಹುಬಲಿ’ ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾನಂಗಳಕ್ಕೆ ಜಿಗಿಯಿತು. ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದಂತೆ `ಚಂದ್ರಯಾನ-2′ ಕೋಟಿ ಕೋಟಿ ಕನಸುಗಳನ್ನು ಹೊತ್ತು ಚಂದ್ರನಲ್ಲಿಗೆ ಸಾಗುತ್ತಿದೆ. ಜು.15ರಂದು ಉಡಾಯನ ಗೊಳ್ಳಬೇಕಿದ್ದ ಬಾಹುಬಲಿ ತಾಂತ್ರಿಕ ದೋಷದಿಂದ ಜುಲೈ 22ಕ್ಕೆ ಮುಂದೂ…
ಅನರ್ಹತೆ ವಿಚಾರ: ಕಾಂಗ್ರೆಸ್ 10 ಮಂದಿ ಶಾಸಕರಿಗೆ ಸ್ಪೀಕರ್ ತುರ್ತು ನೋಟಿಸ್
July 23, 2019ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿ ರುವ ಸಂದರ್ಭದಲ್ಲೇ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್‍ನ 10 ಮಂದಿ ಶಾಸ ಕರ ಅನರ್ಹತೆ ವಿಚಾರ ಕುರಿತು ತುರ್ತು ನೋಟಿಸ್ ಜಾರಿ ಮಾಡಿದ್ದಾರೆ. ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಜು.11ರಂದು ಮತ್ತು ಜು.18 ರಂದು 2 ಹಂತದಲ್ಲಿ ಸ್ಪೀಕರ್ ಅವರಿಗೆ ದೂರು ನೀಡಿದ್ದು, ಪಕ್ಷದ ಶಿಸ್ತು ಉಲ್ಲಂ ಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪ್‍ಗೌಡ ಪಾಟೀಲ್, ಬಿ.ಸಿ….
ಶಾಸಕಾಂಗ ಪಕ್ಷದ ನಾಯಕ ಶಾಸಕರಿಗೆ ವಿಪ್ ನೀಡಬಹುದು
July 23, 2019ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರುಗಳು ತಮ್ಮ ಸದಸ್ಯರನ್ನು ಕಡ್ಡಾಯವಾಗಿ ಸದನದ ಕಲಾಪಗಳಲ್ಲಿ ಭಾಗವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಕ್ರಿಯಾಲೋಪದ ಪ್ರಸ್ತಾವಕ್ಕೆ ಇಂದು ತೀರ್ಪು ನೀಡಿದ ಅವರು, ಸುಪ್ರೀಂಕೋರ್ಟ್ ಯಾವ ಅರ್ಥದಲ್ಲಿ ರಾಜೀನಾಮೆ ನೀಡಿರುವ ಸದಸ್ಯರು ಸದನಕ್ಕೆ ಹೋಗುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿರುವುದು ತಿಳಿದಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ರಾಜೀನಾಮೆ ನೀಡಿರುವ ಎಲ್ಲಾ ಶಾಸಕರ ಹಕ್ಕು ಮತ್ತು ರಕ್ಷಣೆ…
ಅತೃಪ್ತ ಶಾಸಕರಿಗೆ ಅನರ್ಹತೆ ಎಚ್ಚರಿಕೆ
July 23, 2019ಬೆಂಗಳೂರು: ಅಧಿವೇಶನಕ್ಕೆ ಬಂದು ವಿಶ್ವಾಸಮತದ ಪರ ಮತ ಚಲಾಯಿಸದಿದ್ದರೆ ಶಾಸಕ ಸ್ಥಾನದಿಂದ ಅನರ್ಹರಾಗುತ್ತೀರಿ ಎಂದು ಜಲ ಸಂಪ ನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕರಿಗೆ ಕೊನೆ ಎಚ್ಚರಿಕೆ ನೀಡಿದ್ದಾರೆ. ಇಂದು ಮಾಧ್ಯಮಗಳ ಮೂಲಕ ಅತೃಪ್ತ ಶಾಸಕರನ್ನುದ್ದೇಶಿಸಿ ಮಾತ ನಾಡಿದ ಅವರು, ಸಿದ್ದರಾಮಯ್ಯ ಮಂಡಿ ಸಿದ್ದ ನಿಲುವಳಿ ಸೂಚನೆಗೆ ‘ನಿಮ್ಮ ಶಾಸಕರಿಗೆ ನೀವು ವಿಪ್ ನೀಡಲು ಯಾವುದೇ ತಡೆಯಾಜ್ಞೆ ಇಲ್ಲ’ ಎಂದು ಸ್ಪೀಕರ್ ರಮೇಶ್‍ಕುಮಾರ್ ರೂಲಿಂಗ್ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನೀವು ಮಂತ್ರಿಗಳಾಗಬೇ ಕೆಂದು ಇರುವವರು, ಬಿಜೆಪಿಯವರು…
ಪಕ್ಷೇತರ ಶಾಸಕರ ಅರ್ಜಿ ತಕ್ಷಣ ವಿಚಾರಣೆಗೆ ಸುಪ್ರೀಂ ನಕಾರ
July 23, 2019ನವದೆಹಲಿ: ಕರ್ನಾಟಕ ವಿಧಾನ ಸಭೆ ಅಧಿವೇಶನದಲ್ಲಿ ಸೋಮವಾರವೇ ವಿಶ್ವಾಸಮತ ಪ್ರಕ್ರಿಯೆ ಯನ್ನು ಪೂರ್ಣ ಗೊಳಿಸಬೇಕೆಂದು ಇಬ್ಬರು ಪಕ್ಷೇತರ ಶಾಸಕರು ಸಲ್ಲಿಸಿದ್ದ ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಅಸಾಧ್ಯ ಎಂದು ಹೇಳಿದೆ. ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ತುರ್ತು ವಿಚಾರಣೆ ಸಾಧ್ಯವಿಲ್ಲ. ನಾಳೆ ವಿಚಾರಣೆ ಕೈಗೆತ್ತಿ ಕೊಳ್ಳೋಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟಗಳಿಗೆ ಸದ್ಯಕ್ಕೆ ಜೀವದಾನ ಸಿಕ್ಕಿದೆ ಎಂದು ಹೇಳಬಹುದು. ಇಂದು ಸುಪ್ರೀಂಕೋರ್ಟ್‍ನಲ್ಲಿ ಬೇರೆ ಅರ್ಜಿಗಳ ವಿಚಾರಣೆಗಳು…
‘ಸುಧರ್ಮ’ ಸಂಪಾದಕ ಕೆ.ವಿ.ಸಂಪತ್‍ಕುಮಾರ್ ಅವರಿಗೆ `ಶಿವರಾತ್ರೀಶ್ವರ ಮಾಧ್ಯಮ’ ಪ್ರಶಸ್ತಿ ಪ್ರದಾನ
July 23, 2019ಮೈಸೂರು: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ರುವ ಮೈಸೂರಿನ ‘ಸುಧರ್ಮ’ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅವರಿಗೆ ಈ ಬಾರಿಯ ಜೆಎಸ್‍ಎಸ್ ಮಹಾವಿದ್ಯಾಪೀಠ ಕೊಡ ಮಾಡುವ ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಸೋಮವಾರ ಗೌರವಿಸಲಾಯಿತು. 1970ರಲ್ಲಿ ವರದರಾಜ ಅಯ್ಯಂಗಾರ್ ಅವರಿಂದ ಸ್ಥಾಪಿಸಲ್ಪಟ್ಟು ಅವರ ನಂತರ ಕಳೆದ 30 ವರ್ಷಗಳಿಂದ ಅವರ ಪುತ್ರ ಕೆ.ವಿ. ಸಂಪತ್‍ಕುಮಾರ್ ಅವರು ಮುನ್ನಡೆಸಿ ಕೊಂಡು ಬರುತ್ತಿರುವ ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ ಸುಧರ್ಮ. ಅನೇಕ ಎಡರು ತೊಡರುಗಳ ನಡುವೆಯೂ ಸಕಾಲಕ್ಕೆ ಪ್ರತಿ…
ಶಾಲಾ ದೆಸೆಯಲ್ಲಿಯೇ ಮಕ್ಕಳಿಗೆ ಗ್ರಾಹಕರ ಕಾಯ್ದೆ ಕುರಿತ ಅರಿವು
July 23, 2019ಮೈಸೂರು: ಗ್ರಾಹಕ ಎಂದರೆ ಯಾರು? ಆತ ಹೇಗೆ ಮೋಸ, ವಂಚನೆಗಳಿಗೆ ಒಳಗಾಗುತ್ತಾನೆ? ಅದಕ್ಕೆ ಕಾರಣ ಮತ್ತು ಪರಿಹಾರವೇನು? ಎಂಬ ಬಗ್ಗೆ ಮಕ್ಕಳಿಗೆ ಅವರ ಶಾಲಾ ಹಂತದಲ್ಲಿಯೇ ಗ್ರಾಹಕ ಕಾಯ್ದೆಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ `ಶಾಲಾ ಗ್ರಾಹಕರ ಕ್ಲಬ್’ಗಳನ್ನು ರಚಿಸಲಾಗುತ್ತಿದೆ. ಶಾಲಾ ಗ್ರಾಹಕರ ಕ್ಲಬ್‍ನಲ್ಲಿ ಆಯಾಯ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಮಕ್ಕಳು ಸದಸ್ಯರಾಗಿರುತ್ತಾರೆ. ಅವರಿಗೆ ಗ್ರಾಹಕ ಕಾಯ್ದೆಗಳ ಬಗ್ಗೆ ಶಿಕ್ಷಣ ನೀಡಿ, ಅವರು ತಮ್ಮ ಕುಟುಂಬ ಮತ್ತು ಊರಿನ ಇತರ ರಿಗೆ ಗ್ರಾಹಕ ಜಾಗೃತಿ…
ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಗಿಡ ನೆಡುವ ಕಾರ್ಯಕ್ರಮ
July 23, 2019ಮೈಸೂರು: ಹೆಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ವತಿಯಿಂದ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯ ಕ್ರಮಕ್ಕೆ ಮೇಯರ್ ಪುಷ್ಪಲತಾ ಜಗ ನ್ನಾಥ್ ಚಾಲನೆ ನೀಡಿದರು. ಮೈಸೂರಿನ ವಾಣಿವಿಲಾಸ ಮೊಹಲ್ಲಾ ದಲ್ಲಿರುವ ಸಂಸ್ಥೆಯ ಕಚೇರಿ `ಯಶೋ ವಿಲಾಸ್’ ಎದುರು ರಸ್ತೆ ಬದಿಯಲ್ಲಿ ಗಿಡ ನೆಡುವ ಮೂಲಕ ಮೇಯರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಯಶೋ ವಿಲಾಸ್ ಎದುರಿನ ರಸ್ತೆ ಯಲ್ಲಿ 20ಕ್ಕೂ ಹೆಚ್ಚು ಗಿಡಗಳನ್ನು ನೆಡ ಲಾಯಿತು. ಕಕ್ಕೆ, ಬಸವನ…
ಪ್ರತಿಭಟನೆಗೆ ಅವಕಾಶ ನೀಡಲು ಡಿಆರ್‍ಎಫ್‍ಓಗಳಿಂದ ಸಿಸಿಎಫ್‍ಗೆ ಮನವಿ
July 23, 2019ಮೈಸೂರು: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಪವಲಯ ಅರಣ್ಯಾಧಿಕಾರಿ (ಡಿಆರ್‍ಎಫ್), ಗಾರ್ಡ್, ವಾಚರ್, ಆನೆ ಮಾವುತರು, ಕಾವಾಡಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಗಳು ಎದುರಿಸುತ್ತಿರುವ ವೇತನ ತಾರತಮ್ಯ ಹೋಗಲಾಡಿಸುವಂತೆ ರಾಜ್ಯದಾದ್ಯಂತ ಜು.31ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಮೈಸೂರು ವೃತ್ತದ ಡಿಆರ್‍ಎಫ್ ಗಳು ಸೋಮವಾರ ಸಿಸಿಎಫ್ ಟಿ.ಹೀರಾ ಲಾಲ್ ಅವರಿಗೆ ಮನವಿ ಸಲ್ಲಿಸಿದರು. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಅವರ ಕಚೇ ರಿಗೆ ಉಪವಲಯ…










