ಮೈಸೂರು: ಜಯ ಚಾಮರಾಜೇಂದ್ರ ಒಡೆಯರ್ ಕರ್ನಾ ಟಕದ ಏಕೀಕರಣಕ್ಕೆ ಕೊಡುಗೆ ನೀಡಿದ ವರು. ಅವರ ಜನ್ಮ ಶತಾಬ್ಧಿಯನ್ನು ರಾಜ್ಯ ಸರ್ಕಾರದಿಂದ ಆಚರಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಒತ್ತಾಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿ ಯಿಂದ ಮೈಸೂರಿನ ಜಗನ್ಮೋಹನ ಅರ ಮನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಜನ್ಮ ಶತಾಬ್ಧಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕದ ಏಕೀಕರಣಕ್ಕೆ ಜಯ ಚಾಮ ರಾಜೇಂದ್ರ ಒಡೆಯರ್ ಅವರ…
`ನಮ್ಮ ಮೈಸೂರು ಫೌಂಡೇಷನ್’ನಿಂದ ಸ್ವಚ್ಛತಾ ಅಭಿಯಾನ
June 23, 2019ಮೈಸೂರು, ಜೂ.22(ಎಂಟಿವೈ)- ಬಂಬೂಬಜಾóರ್‍ನಲ್ಲಿರುವ ಅಂಧ, ಮೂಕ ಮತ್ತು ಶ್ರವಣ ದೋಷವುಳ್ಳ ಸರ್ಕಾರಿ ಶಾಲೆ ಆವರಣದಲ್ಲಿ ಶನಿವಾರ `ನಮ್ಮ ಮೈಸೂರು ಫೌಂಡೇಷನ್’ ಸದಸ್ಯರು ಸ್ವಚ್ಛತಾ ಅಭಿಯಾನ ನಡೆಸಿ, ನಿರುಪಯುಕ್ತ ವಸ್ತು ಹಾಗೂ ದಟ್ಟವಾಗಿ ಬೆಳೆದಿದ್ದ ಗಿಡಗಂಟಿ ಗಳನ್ನು ತೆರವುಗೊಳಿಸಿದರು. ಸರ್ಕಾರಿ ಸ್ವಾಮ್ಯದ ವಿಶೇಷ ಮಕ್ಕಳ ಏಕೈಕ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿ ರುವ ಬಂಬೂಬಜಾóರ್‍ನಲ್ಲಿರುವ ಶಾಲೆಯ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿ ದ್ದವು. ಪಾದಚಾರಿ ಮಾರ್ಗದಲ್ಲಿಯೂ ಗಿಡ ಬೆಳೆದಿದ್ದರಿಂದ ಅಂಧ ವಿದ್ಯಾರ್ಥಿ ಗಳ ಸುಗಮ ಸಂಚಾರಕ್ಕೆ ತೊಡಕಾಗು ತ್ತಿತ್ತು….
ಮೈಸೂರಲ್ಲಿ ಯೋಗ ಭವನ ಉದ್ಘಾಟನೆ
June 23, 2019ಮೈಸೂರು, ಜೂ. 22- ಮೈಸೂರು ನಗರಪಾಲಿಕೆ ಇದೇ ಮೊದಲನೇ ಬಾರಿಗೆ ಸಾರ್ವಜನಿಕರ ಯೋಗಾಭ್ಯಾಸಕ್ಕೆ ಅನು ಕೂಲವಾಗಲೆಂದು ಮೈಸೂರಿನ ರಾಮಾನುಜ ಮುಖ್ಯರಸ್ತೆಯಲ್ಲಿ ಯೋಗಭವನವನ್ನು ನಿರ್ಮಿಸಿ ಅಂತರ್‍ರಾಷ್ಟ್ರೀಯ ಯೋಗ ದಿನದಂದು ಲೋಕಾರ್ಪಣೆಗೊಳಿಸಿದೆ. ನಗರ ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ 25 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಯೋಗಭವನವನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಈ ಯೋಗಭವನವನ್ನು ಸುತ್ತಮುತ್ತಲಿನ ನಿವಾಸಿಗಳು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್,…
30 ವರ್ಷದ ಹಿಂದೆ ಮೈಸೂರಿಗಿಂತ ಕೆಳ ದರ್ಜೆಯ ಪುಣೆ ಈಗ ಹತ್ತು ಪಟ್ಟು ಅಭಿವೃದ್ಧಿ
June 23, 2019ಮೈಸೂರು,ಜೂ.22(ಎಸ್‍ಪಿಎನ್)-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಿಂದ ಮರು ಆಯ್ಕೆಯಾಗಿರುವ ಸಂಸದ ಪ್ರತಾಪಸಿಂಹ ಅವರನ್ನು ಪತ್ನಿ ಸಮೇತ ವಿಷನ್ ಟೀಂ ಆಫ್ ಮೈಸೂರು ತಂಡದ ಸದಸ್ಯರು ಶನಿವಾರ ಆತ್ಮೀಯವಾಗಿ ಅಭಿನಂದಿಸಿದರು. ಮೈಸೂರು ವಿವಿ ಮಾನಸಗಂಗೋತ್ರಿ ಆವರಣದ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ವಿಷನ್ ಟೀಂ ಆಫ್ ಮೈಸೂರು ವತಿ ಯಿಂದ ಸಿಂಹ ದಂಪತಿಯನ್ನು ಮೈಸೂರುಪೇಟ ತೊಡಿಸಿ, ಗುಲಾಬಿ ಹಾರ ಹಾಕಿ, ಬೋನ್ಸಾಯ್ ಸಸಿ ನೀಡಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರತಾಪ ಸಿಂಹ, 2019ರ ಲೋಕಸಭಾ ಚುನಾವಣೆ ಜನಸಾಮಾನ್ಯರು ವರ್ಸಸ್…
ರಂಜಾನ್ ಉಪವಾಸದಿಂದ ಮನಸ್ಸಿಗೆ ಶಾಂತಿ, ಆರೋಗ್ಯ ವೃದ್ಧಿ
June 23, 2019ಮೈಸೂರು: ಪವಿತ್ರ ರಂಜಾನ್ ಹಬ್ಬದ ಒಂದು ತಿಂಗಳ ಉಪ ವಾಸದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದರ ಜತೆಗೆ ಆರೋಗ್ಯ ವೃದ್ಧಿ ಯಾಗುತ್ತದೆ ಎಂದು ಮೈಸೂರು ವಿವಿ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಅಧ್ಯ ಯನ ವಿಭಾಗದ ನಿರ್ದೇಶಕಿ ಪ್ರೊ.ಅಸ್ನ ಉರೂಜ್ ಹೇಳಿದರು. ಮಾನಸಗಂಗೋತ್ರಿಯ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಅಧ್ಯಯನ ವಿಭಾ ಗದ ವತಿಯಿಂದ ಆಯೋಜಿಸಿದ್ದ ‘ರಂಜಾನ್ ಸಮಯದಲ್ಲಿ ಉಪವಾಸದ ಸಂಶೋ ಧನಾ ಅಧ್ಯಯನ’ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ದಿನದ 4 ರಿಂದ 14 ಗಂಟೆ…
ಬಡವರ ಕಣ್ಣೀರೊರೆಸುವುದೇ ವಕೀಲಿಕೆಯ ಮುಖ್ಯ ಗುರಿಯಾಗಬೇಕು
June 23, 2019ಮೈಸೂರು,ಜೂ.22(ವೈಡಿಎಸ್)-ಪುರಾತನ ಕಾಲ ಅಥವಾ ಸ್ವತಂತ್ರ ಭಾರತದಲ್ಲೇ ಗಮನಿಸಿದರೂ ವಕೀಲರ ಪಾತ್ರ ಮುಖ್ಯವಾಗಿದ್ದು, ತಮ್ಮ ಬಳಿ ಬರುವ ಬಡವರ ಕಣ್ಣೀರೊರೆಸುವುದೇ ವಕೀಲಿಕೆಯ ಮುಖ್ಯ ಗುರಿಯಾಗಬೇಕು ಎಂದು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಕ್ರಯ್ಯ ಬಿ.ವಸ್ತ್ರದ್‍ಮಠ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕುವೆಂಪುನಗರದ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 12ನೇ ಪದವೀಧರರ ದಿನಾಚರಣೆಯಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ವಕೀಲರಾದವರು ತಮ್ಮದೇಯಾದ ಇತಿ-ಮಿತಿಯಲ್ಲಿ ಕೆಲಸ ಮಾಡಬೇಕಾಗು ತ್ತದೆ. ವಕೀಲರೆಂದು ಏನನ್ನಾದರೂ ಮಾಡಲು ಹೋದರೆ ಸಮಾಜ ನಿಮ್ಮನ್ನು ಅನುಮಾನ ದಿಂದ…
ಪಕ್ಷವೊಂದರ ಮುಖಂಡನೆಂದು ಹೇಳಿಕೊಂಡು ಮಹಿಳೆಯ ಸುಲಿಗೆ ಮಾಡಿದ್ದವನ ಬಂಧನ
June 23, 2019ಮೈಸೂರು, ಜೂ.22(ಎಸ್‍ಬಿಡಿ)-ಪರಿ ಚಯಸ್ಥ ಮಹಿಳೆಯನ್ನು ಲಾಡ್ಜ್‍ಗೆ ಕರೆಸಿ ಕೊಂಡು ಚಿನ್ನಾಭರಣ ಕಿತ್ತುಕೊಂಡಿದ್ದ ಆರೋಪದಡಿ ಪೊಲೀಸರು ಬಂಧಿಸಿ ರುವ ಶಿರಸಿ ಮೂಲದ ಕೀರ್ತಿ ಹೆಗಡೆ ಪಕ್ಷ ವೊಂದರ ಮುಖಂಡನೆಂದು ಹೇಳಿಕೊಂಡು ವಂಚಿಸಿದ್ದಾನೆಂದು ಹೇಳಲಾಗುತ್ತಿದೆ. ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಮಹಿಳೆಯೊಬ್ಬರನ್ನು ಮೈಸೂರಿನ ಕೆ.ಟಿ.ಸ್ಟ್ರೀಟ್‍ನಲ್ಲಿರುವ ಲಾಡ್ಜ್‍ಗೆ ಕರೆಸಿಕೊಂಡಿದ್ದ ಕೀರ್ತಿ ಹೆಗಡೆ, ಸುಮಾರು 1.30 ಲಕ್ಷ ಮೌಲ್ಯದ ಚಿನ್ನಾ ಭರಣವನ್ನು ಹೆದರಿಸಿ ಸುಲಿಗೆ ಮಾಡಿದ್ದ. ಈ ಸಂಬಂಧ ವಂಚನೆಗೊಳಗಾದ ಮಹಿಳೆ ದೂರು ನೀಡಿದ 24 ಗಂಟೆಯಲ್ಲೇ ಲಷ್ಕರ್ ಠಾಣೆ ಪೊಲೀಸರು…
ಶಾಸಕ ನಾಗೇಂದ್ರರಿಂದ ನಿವಾಸಿಗಳ ಅಹವಾಲು ಸ್ವೀಕಾರ
June 23, 2019ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಶನಿವಾರ ಬಿ.ಬಿ.ಕೇರಿಯಲ್ಲಿ ಜನಸ್ಪಂಧನಾ ಕಾರ್ಯಕ್ರಮ ನಡೆಸಿ, ನಿವಾಸಿಗಳ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಖಾಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಅಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡು ವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈಗಾಗಲೇ 200 ಮನೆಗಳನ್ನು ನಿರ್ಮಿಸ ಲಾಗಿದ್ದು, ಕೆಲವೇ ದಿನಗಳಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವುದು. ಹೆಂಚಿನ ಅಥವಾ ಶೀಟ್ ಮನೆಗಳ ನಿವಾಸಿಗಳಿಗೆ ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಡಿ ಸಹಾಯಧನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು…
ಮೈಸೂರಲ್ಲಿ ಯೋಗ ವೈಭೋಗ
June 22, 2019ಮೈಸೂರು ಜಿಲ್ಲಾಡಳಿತ, ಜಿ.ಪಂ, ನಗರಪಾಲಿಕೆ, ಪ್ರವಾ ಸೋದ್ಯಮ ಇಲಾಖೆ, ಆಯುಷ್ ಇಲಾಖೆ ಹಾಗೂ ಯೋಗ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿರುವ ಬೃಹತ್ ಯೋಗ ಪ್ರದರ್ಶನದಲ್ಲಿ ಮಕ್ಕ ಳಿಂದ ಹಿರಿಯ ನಾಗರಿಕರವರೆಗೂ ಸಾವಿರಾರು ಮಂದಿ ಯೋಗ ಪಟುಗಳು ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿ ಸುವ ಮೂಲಕ ಐದನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು. 2 ವರ್ಷದ ಹಿಂದೆ 53 ಸಾವಿರ ಮಂದಿ ಯೋಗ ಪ್ರದ ರ್ಶನದಲ್ಲಿ ಪಾಲ್ಗೊಂಡು ಗಿನ್ನಿಸ್ ದಾಖಲೆ ಬರೆದಿದ್ದ ಮೈಸೂರಿನ ಯೋಗಪಟುಗಳು ಇಂದು…
ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ…
June 22, 2019ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ವಿಧಾನಸಭೆಗೆ ಮಧ್ಯಂತರ ಚುನಾವಣೆ ನಿಶ್ಚಿತ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ. ಮಧ್ಯಂತರ ಚುನಾವಣೆ ಕುರಿತು ನಿನ್ನೆಯಷ್ಟೇ ಸ್ಪಷ್ಟೀ ಕರಣ ನೀಡಿದ್ದ ಗೌಡರು, ಇಂದು ಬೆಳ್ಳಂಬೆಳಿಗ್ಗೆ ಸುದ್ದಿ ಗಾರರಿಗೆ ಈ ವಿಷಯ ತಿಳಿಸಿರುವುದಲ್ಲದೆ, ಪರೋಕ್ಷ ವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ದೇವೇಗೌಡರ ಹೇಳಿಕೆ…










