ರಂಜಾನ್ ಉಪವಾಸದಿಂದ ಮನಸ್ಸಿಗೆ ಶಾಂತಿ, ಆರೋಗ್ಯ ವೃದ್ಧಿ
ಮೈಸೂರು

ರಂಜಾನ್ ಉಪವಾಸದಿಂದ ಮನಸ್ಸಿಗೆ ಶಾಂತಿ, ಆರೋಗ್ಯ ವೃದ್ಧಿ

June 23, 2019

ಮೈಸೂರು: ಪವಿತ್ರ ರಂಜಾನ್ ಹಬ್ಬದ ಒಂದು ತಿಂಗಳ ಉಪ ವಾಸದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದರ ಜತೆಗೆ ಆರೋಗ್ಯ ವೃದ್ಧಿ ಯಾಗುತ್ತದೆ ಎಂದು ಮೈಸೂರು ವಿವಿ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಅಧ್ಯ ಯನ ವಿಭಾಗದ ನಿರ್ದೇಶಕಿ ಪ್ರೊ.ಅಸ್ನ ಉರೂಜ್ ಹೇಳಿದರು.

ಮಾನಸಗಂಗೋತ್ರಿಯ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಅಧ್ಯಯನ ವಿಭಾ ಗದ ವತಿಯಿಂದ ಆಯೋಜಿಸಿದ್ದ ‘ರಂಜಾನ್ ಸಮಯದಲ್ಲಿ ಉಪವಾಸದ ಸಂಶೋ ಧನಾ ಅಧ್ಯಯನ’ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ದಿನದ 4 ರಿಂದ 14 ಗಂಟೆ ಉಪವಾಸ ಮಾಡುವುದರಿಂದ ಧಾರ್ಮಿಕ ಹಬ್ಬದ ಆಚರಣೆಯ ಜತೆಗೆ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಮೊದಲ ಬಾರಿಗೆ ವಿಭಾಗದ ವತಿಯಿಂದ ರಂಜಾನ್ ಹಬ್ಬದಲ್ಲಿ ಪಾಲ್ಗೊಂಡಿದ್ದ 54 ಜನರ ಮೇಲೆ ಸಂಶೋಧÀನೆ ನಡೆಸ ಲಾಗಿದ್ದು, ಅವರಲ್ಲಿ 28 ಮಂದಿ ಪುರು ಷರು ಹಾಗೂ 26 ಮಹಿಳೆಯರಿದ್ದರು. ಒಂದು ತಿಂಗಳ ಉಪವಾಸದಲ್ಲಿ ಕೆಲವರು ಸುಮಾರು 3 ರಿಂದ 4 ಕೆ.ಜಿ ವರೆಗೆ ದೇಹದ ತೂಕ ಕಡಿಮೆಯಾದರೆ, ಮತ್ತೆ ಕೆಲವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದರು.

ಉಪವಾಸದ ಪ್ರಾರಂಭಕ್ಕೂ ಮುನ್ನ ಹಾಗೂ ಉಪವಾಸದ ನಂತರ ದೇಹವನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ. ಪರೀಕ್ಷೆಯ ವರದಿಯಲ್ಲಿ ಕೊಬ್ಬಿನಾಂಶ ಕಡಿಮೆಯಾಗಿರುವುದು, ದೇಹದ ನೀರಿ ನಾಂಶದ ಯಥಾಸ್ಥಿತಿ, ಮೂತ್ರಕೋಶದ ಕಾರ್ಯ ನಿರ್ವಹಣೆ ಉತ್ತಮವಾಗಿರುವುದು, ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಅಂಶಗಳು ತಿಳಿದುಬಂದಿದೆ ಎಂದು ವಿವರಿಸಿದರು.

ಸಂಶೋಧನೆಯಲ್ಲಿ ಎಲ್ಲಾ ಅನುಪಾತದ ವಯಸ್ಕರು ಭಾಗವಹಿಸಿದ್ದು, 40 ವರ್ಷ ಕ್ಕಿಂತ ಕಡಿಮೆ ಇರುವವರಲ್ಲಿ ಉತ್ತಮ ಫಲಿತಾಂಶ ಬಂದಿದ್ದು, 40ಕ್ಕಿಂತ ಮೇಲ್ಪಟ್ಟ ವರಲ್ಲಿ ಸಾಧಾರಣ ಬದಲಾವಣೆಯಾ ಗಿದೆ. ಅಲ್ಲದೆ ವಾರದಲ್ಲಿ ಕನಿಷ್ಠ 2 ದಿನ ಉಪವಾಸ ಇರುವುದರಿಂದ ದೇಹದ ಉಷ್ಣಾಂಶಕ್ಕೆ ಅನುಗುಣವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಉಪವಾಸದೊಂದಿಗೆ ದಿನನಿತ್ಯದ ಅಭ್ಯಾಸಗಳು ಬದಲಾಗಬೇಕು. ದುಶ್ಚಟ ಗಳಿಂದ ದೂರವಿರಬೇಕು. ದೈಹಿಕ ವ್ಯಾಯಾಮದ ಜತೆಗೆ ಆಹಾರ ಕ್ರಮಗಳು ಬದಲಾಗಬೇಕು. ಪೌಷ್ಟಿಕ ಆಹಾರ ಸೇವನೆ ಅಗತ್ಯವಾಗಿರುತ್ತದೆ. ಏಲಕ್ಕಿ ಪುಡಿಯನ್ನು ಮೊಸರಿನಲ್ಲಿ ಸೇವಿಸುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ರೂಸಾ ಯೋಜನೆ ಯಡಿ ವಿಭಾಗಕ್ಕೆ ತಂದಿರುವ ಹೊಸ ಯಂತ್ರದ ಮೂಲಕ ದೇಹದ ಪರೀಕ್ಷೆ ಮಾಡಲಾಗುತ್ತಿದೆ. ಸಕ್ಕರೆ ಕಾಯಿಲೆ ಇರು ವವರನ್ನು ಸಂಶೋಧನೆಗೆ ಸೇರಿಸಿಕೊಂಡಿಲ್ಲ. ಕಾರಣ ಸಕ್ಕರೆ ಕಾಯಿಲೆ ಇರುವವರಿಗೆ ನಾರಿನಾಂಶದ ಅವಶ್ಯಕತೆ ಹೆಚ್ಚಾಗಿದ್ದು, ಉಪವಾಸದ ಸಮಯದಲ್ಲಿ ತೊಂದರೆ ಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಚ್ಚರಿ ಕೆಯ ಕ್ರಮಗಳೊಂದಿಗೆ ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವವರನ್ನು ಸಂಶೋ ಧನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.

ಸಂಶೋಧನೆಯಲ್ಲಿ ಪುರುಷ ಮತ್ತು ಮಹಿಳೆ ಯಲ್ಲಿ ಸಾಮಾನ್ಯವಾಗಿ ರಕ್ತದ ಪ್ರಮಾಣ ದಲ್ಲಿ ವ್ಯತ್ಯಾಸ ಕಂಡುಬಂದಿದೆ. ಪುರುಷರಿಗೆ ಹಿಮೋಗ್ಲೊಬಿನ್ ಹೆಚ್ಚಾದರೆ, ಮಹಿಳೆಯರಿಗೆ ಕಡಿಮೆಯಾಗಿದೆ. ಮಹಿಳೆಯರಲ್ಲಿ ಹಿಮೋ ಗ್ಲೊಬಿನ್ ಕಡಿಮೆಯಾಗಲು ತಿಂಗಳ ಋತು ಸ್ರಾವ ಕಾರಣ ಎಂದು ವಿಶ್ಲೇಷಿಸಿದರು.

Translate »