ಬಡವರ ಕಣ್ಣೀರೊರೆಸುವುದೇ ವಕೀಲಿಕೆಯ ಮುಖ್ಯ ಗುರಿಯಾಗಬೇಕು
ಮೈಸೂರು

ಬಡವರ ಕಣ್ಣೀರೊರೆಸುವುದೇ ವಕೀಲಿಕೆಯ ಮುಖ್ಯ ಗುರಿಯಾಗಬೇಕು

June 23, 2019

ಮೈಸೂರು,ಜೂ.22(ವೈಡಿಎಸ್)-ಪುರಾತನ ಕಾಲ ಅಥವಾ ಸ್ವತಂತ್ರ ಭಾರತದಲ್ಲೇ ಗಮನಿಸಿದರೂ ವಕೀಲರ ಪಾತ್ರ ಮುಖ್ಯವಾಗಿದ್ದು, ತಮ್ಮ ಬಳಿ ಬರುವ ಬಡವರ ಕಣ್ಣೀರೊರೆಸುವುದೇ ವಕೀಲಿಕೆಯ ಮುಖ್ಯ ಗುರಿಯಾಗಬೇಕು ಎಂದು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಕ್ರಯ್ಯ ಬಿ.ವಸ್ತ್ರದ್‍ಮಠ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕುವೆಂಪುನಗರದ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 12ನೇ ಪದವೀಧರರ ದಿನಾಚರಣೆಯಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ವಕೀಲರಾದವರು ತಮ್ಮದೇಯಾದ ಇತಿ-ಮಿತಿಯಲ್ಲಿ ಕೆಲಸ ಮಾಡಬೇಕಾಗು ತ್ತದೆ. ವಕೀಲರೆಂದು ಏನನ್ನಾದರೂ ಮಾಡಲು ಹೋದರೆ ಸಮಾಜ ನಿಮ್ಮನ್ನು ಅನುಮಾನ ದಿಂದ ನೋಡುತ್ತದೆ. ಹಾಗಾಗಿ ಸಮಾಜ ಮುಖಿ ಕೆಲಸ ಮಾಡಬೇಕು. ಆ ಮೂಲಕ ಸಮಾಜದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳಗೆ ಸಲಹೆ ನೀಡಿದರು.

ಕಾನೂನು ಪದವಿ ಮುಗಿದವರು ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹೋದರೆ ಶ್ರೀಮಂತರಿಗಿಂತ ಹೆಚ್ಚಾಗಿ ಬಡ ಕಕ್ಷಿದಾ ರರು ಬರುತ್ತಾರೆ. ಅವರ ಸಮಸ್ಯೆಗೆ ಸ್ಪಂದಿಸಿ, ಸುಳ್ಳು ಹೇಳದೆ ನ್ಯಾಯ ಒದಗಿಸಿ ಕೊಟ್ಟು ಕಣ್ಣೀರೊರೆಸಬೇಕು. ಆಗ ಆತ ನಿಮ್ಮ ಮೇಲೆ ನಂಬಿಕೆಯನ್ನಿಟ್ಟು ಊರಿನ ನಾಲ್ಕಾರು ಮಂದಿಗೆ ಹೇಳುತ್ತಾರೆ. ಇವರಿಂದ ನಿಮ್ಮ ವೃತ್ತಿ ಬೆಳವಣಿಗೆಯಾ ಗುವ ಜತೆಗೆ ಸಮಾಜದಲ್ಲಿ ಗುರುತಿಸಿಕೊ ಳ್ಳುತ್ತೀರಿ. ಆ ನಂತರವಷ್ಟೆ ಶ್ರೀಮಂತ ಕಕ್ಷಿ ದಾರರು ನಿಮ್ಮ ಬಳಿಗೆ ಬರುತ್ತಾರೆ. ಹೀಗೆ 5-10ವರ್ಷ ವಕೀಲ ವೃತ್ತಿ ಮಾಡಿ ದೊಡ್ಡ ವಕೀಲರಾದಾಗ ಹಳೆಯ ಬಡ ಕಕ್ಷಿದಾರರನ್ನು ಮರೆಯಬಾರದು ಎಂದು ತಿಳಿ ಹೇಳಿದರು.

ಶೇ.80ರಷ್ಟು ಕಲಿಕೆ ನ್ಯಾಯಾಲಯದಲ್ಲಿ: ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶೇ.20ರಷ್ಟು ಮಾತ್ರ ಕಲಿತರೆ, ಉಳಿದ ಶೇ.80ರಷ್ಟನ್ನು ನ್ಯಾಯಾಲಯದಲ್ಲಿ ಕಲಿಯುತ್ತಾರೆ. ಆದರೆ, ನಾನು ಗಮನಿಸಿದಂತೆ ಕೆಲವು ವಕೀಲರು ನ್ಯಾಯಾಲಯಕ್ಕೆ ಬಂದು ಕೇಸ್‍ಗಳು ಇಲ್ಲದಿದ್ದರೆ ಹೊರಾಂಗಣದಲ್ಲಿ ಸುತ್ತಾಡಿ, ಕ್ಯಾಂಟೀನ್‍ನಲ್ಲಿ ಟೀ ಕುಡಿದು ಮನೆಗಳಿಗೆ ತೆರಳುತ್ತಾರೆ. ಈ ಹವ್ಯಾಸ ಒಳ್ಳೆಯದಲ್ಲ. ಕೇಸ್ ಇರಲಿ-ಇಲ್ಲದಿರಲಿ ಪ್ರತಿ ದಿನ ನ್ಯಾಯಾಲಯಕ್ಕೆ ಹೋಗಿ ಹಿರಿಯ ವಕೀ ಲರು ಹೇಗೆ ವಾದಿಸುತ್ತಾರೆ ಎಂಬುದನ್ನು ನೋಟ್ ಮಾಡಿಕೊಳ್ಳಬೇಕು. ಇದರಿಂದ ಜ್ಞಾನವೂ ವೃದ್ಧಿಯಾಗುತ್ತದೆ. ಜತೆಗೆ ಪರೀಕ್ಷೆ ಮತ್ತು ಸಂದರ್ಶನದ ವೇಳೆಯೂ ಅನುಕೂಲವಾಗಲಿದೆ. ಹಾಗೆ ಮಾಡಿದ್ದರಿಂದ ಇಂದು ನಾನು ಈ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಹೈಕೋರ್ಟ್ ನ್ಯಾಯಾಧೀಶರಾದ ರವಿ ಮಳಿಮಠ್ ಮಾತನಾಡಿ, ಕಾನೂನು ಪದವಿ ಮುಗಿದ ಬಳಿಕ ಅಧ್ಯಯನ ಮುಗಿಯಿ ತೆಂದು ಭಾವಿಸದೆ ತಮ್ಮ ಕೆಲಸವನ್ನು ಘನತೆಯಿಂದ ಮಾಡಿ ಯಶಸ್ಸು ಗಳಿಸ ಬೇಕು. ಯಾವುದೇ ಅಪರಾಧದೊಂದಿಗೆ ರಾಜಿ ಮಾಡಿಕೊಳ್ಳದೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಮನುಷ್ಯನಿಗೆ ಹಣವೇ ಮುಖ್ಯವಲ್ಲ. ಇದರ ಹಿಂದೆ ಬಿದ್ದರೆ ಚಾರಿತ್ರ್ಯ ಹಾಳಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ 104 ವಿದ್ಯಾರ್ಥಿ ಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಲ್‍ಎಲ್‍ಎಂನಲ್ಲಿ ಬಿ.ಆರ್. ಮುರಳೀಧರ್, ಎಲ್‍ಎಲ್‍ಬಿಯಲ್ಲಿ ವೆಂಕಟೇಶ ಸೋಮ ರೆಡ್ಡಿ, ಹೆಚ್.ಎಂ. ಬಿಪಿನ್, ಡಿ.ಉದಯ ಕುಮಾರ್, ಮಿಲಸ್ ಅರೋಲ್ ನರೋಹ್ನ, ಬಿ.ಎ.ಎಲ್.ಎಲ್.ಬಿಯಲ್ಲಿ ಎಂ.ಭಾರ್ಗವಿ, ತಿನ್ಲೆ ಚೋಡನ್ ಭುತಿಯ, ಮಟಟ ಪಿಲಿ ರೆಚೀಯಲ್, ಅಂಕಿತ ಸಿಂಗ್, ಮೀಮಾನ್ಸ ಸಿಂಗ್, ಬಿಬಿಎಎಲ್‍ಎಲ್‍ಬಿ ಯಲ್ಲಿ ಕೆ.ಪಿ.ಶೀತಲ್ ಶೆಟ್ಟಿ, ಫಾತಿಮಾ ಇಬ್ರಾಹಿಂ, ಕ್ರಿಸ್ಟಿನೆ ಸ್ವಯಂಪ್ರಭ ಮತಿ ಯಾಸ್, ಎಸ್.ಮಹಾಲಕ್ಷ್ಮೀ, ಅನುಶ್ರೀ ಮನೋಜ್ ರ್ಯಾಂಕ್ ಪಡೆದಿದ್ದಾರೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯ ದರ್ಶಿ ಡಾ.ಸಿ.ಜಿ.ಬೆಟಸೂರ ಮಠ, ಪ್ರಾಂಶುಪಾಲ ನಟರಾಜ್, ನಿವೃತ್ತ ಪ್ರಾಂಶುಪಾಲ ಡಾ.ಕೆ.ಸುರೇಶ್, ಶಿವಾ ನಂದ ಭಾರತಿ ಉಪಸ್ಥಿತರಿದ್ದರು.

Translate »