ಪಕ್ಷವೊಂದರ ಮುಖಂಡನೆಂದು ಹೇಳಿಕೊಂಡು ಮಹಿಳೆಯ ಸುಲಿಗೆ ಮಾಡಿದ್ದವನ ಬಂಧನ
ಮೈಸೂರು

ಪಕ್ಷವೊಂದರ ಮುಖಂಡನೆಂದು ಹೇಳಿಕೊಂಡು ಮಹಿಳೆಯ ಸುಲಿಗೆ ಮಾಡಿದ್ದವನ ಬಂಧನ

June 23, 2019

ಮೈಸೂರು, ಜೂ.22(ಎಸ್‍ಬಿಡಿ)-ಪರಿ ಚಯಸ್ಥ ಮಹಿಳೆಯನ್ನು ಲಾಡ್ಜ್‍ಗೆ ಕರೆಸಿ ಕೊಂಡು ಚಿನ್ನಾಭರಣ ಕಿತ್ತುಕೊಂಡಿದ್ದ ಆರೋಪದಡಿ ಪೊಲೀಸರು ಬಂಧಿಸಿ ರುವ ಶಿರಸಿ ಮೂಲದ ಕೀರ್ತಿ ಹೆಗಡೆ ಪಕ್ಷ ವೊಂದರ ಮುಖಂಡನೆಂದು ಹೇಳಿಕೊಂಡು ವಂಚಿಸಿದ್ದಾನೆಂದು ಹೇಳಲಾಗುತ್ತಿದೆ.

ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಮಹಿಳೆಯೊಬ್ಬರನ್ನು ಮೈಸೂರಿನ ಕೆ.ಟಿ.ಸ್ಟ್ರೀಟ್‍ನಲ್ಲಿರುವ ಲಾಡ್ಜ್‍ಗೆ ಕರೆಸಿಕೊಂಡಿದ್ದ ಕೀರ್ತಿ ಹೆಗಡೆ, ಸುಮಾರು 1.30 ಲಕ್ಷ ಮೌಲ್ಯದ ಚಿನ್ನಾ ಭರಣವನ್ನು ಹೆದರಿಸಿ ಸುಲಿಗೆ ಮಾಡಿದ್ದ. ಈ ಸಂಬಂಧ ವಂಚನೆಗೊಳಗಾದ ಮಹಿಳೆ ದೂರು ನೀಡಿದ 24 ಗಂಟೆಯಲ್ಲೇ ಲಷ್ಕರ್ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಕ್ಷವೊಂದರ ಮಹಿಳಾ ಮುಖಂಡರನ್ನು ಪರಿಚಯ ಮಾಡಿಕೊಡುವುದಾಗಿ ನಂಬಿಸಿ, ಲಾಡ್ಜ್‍ಗೆ ಕರೆಸಿಕೊಂಡು ಹೀಗೆ ವಂಚಿಸಿ ದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಶಿರಸಿ ತಾಲೂಕು, ಹುಲಿಕಲ್ ಗ್ರಾಮದ ಅಮಜಿ ಮನೆ ಕೀರ್ತಿ ಹೆಗಡೆ, ಮೈಸೂರಿಗೆ ಸಮೀಪದ ಊರೊಂದರಲ್ಲಿ ನೆಲೆಸಿರುವ ಶಿರಸಿ ಮೂಲದ ಮಹಿಳೆ ಯನ್ನು ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ. ತಮ್ಮ ಊರಿನ ಕಡೆಯ ವರೆಂಬ ಅಭಿಮಾನದಿಂದ ಆ ಮಹಿಳೆ ಮೊಬೈಲ್ ಸಂಖ್ಯೆ ನೀಡಿದ್ದರು. ಆಗಾಗ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಪಕ್ಷ ವೊಂದರ ಮುಖಂಡ ಎಂದು ಹೇಳಿ ಕೊಂಡಿದ್ದ ಕೀರ್ತಿ ಹೆಗಡೆ, ಸಭೆ-ಸಮಾ ರಂಭಗಳ ಫೋಟೋ, ಸಿಎಂ ಕುಮಾರ ಸ್ವಾಮಿ ಅವರೊಂದಿಗೆ ತಾನಿದ್ದ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇತ್ತ ಮಹಿಳೆಗೂ ರಾಜ ಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳ ಬೇಕೆಂದು ಆಸೆಯಿದ್ದ ಕಾರಣ, ಕೀರ್ತಿ ಹೆಗಡೆ ಹೇಳಿದ ಮಾತುಗಳನ್ನು ನಂಬಿದ್ದರು.

ಅದರಂತೆ ಮಹಿಳೆಗೆ ಕರೆ ಮಾಡಿದ ಕೀರ್ತಿ, ನಾನು ಮೈಸೂರಿಗೆ ಬರುತ್ತಿದ್ದೇನೆ. ಕೆ.ಟಿ.ಸ್ಟ್ರೀಟ್‍ನಲ್ಲಿರುವ ಲಾಡ್ಜ್‍ಗೆ ಬಾ. ಪಕ್ಷವೊಂದರ ಮಹಿಳಾ ಕಾರ್ಯಕರ್ತರೂ ಅಲ್ಲಿಗೆ ಬರುತ್ತಾರೆ. ಅವರನ್ನು ಪರಿಚಯಿ ಸಿಕೊಂಡರೆ ನಿನಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ಮಹಿಳೆ ಆತ ತಿಳಿಸಿದಂತೆ ಜೂ.18ರಂದು ಲಾಡ್ಜ್‍ಗೆ ಹೋಗಿದ್ದಾರೆ. ಆದರೆ ಅಲ್ಲಿ ಕೀರ್ತಿ ಹೆಗಡೆ ಹೊರತು ಮತ್ಯಾರೂ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಎಲ್ಲರೂ ಇಲ್ಲೇ ಹೊರಗೆ ಹೋಗಿದ್ದಾರೆ ಎಂದು ಸಬೂಬು ಹೇಳಿದ್ದಾನೆ. ಕೆಲ ಸಮಯದ ಬಳಿಕ ನಿನ್ನ ಬಳಿ ಇರುವ ಚಿನ್ನಾಭರಣ ಕೊಡು. ಇಲ್ಲವಾದರೆ ನೀನು ಇಲ್ಲಿಗೆ ಬಂದಿರುವ ವಿಷಯದ ಜೊತೆಗೆ ಇಲ್ಲಸ ಲ್ಲದ ವಿಚಾರಗಳನ್ನು ನಿನ್ನ ಗಂಡನಿಗೆ ತಿಳಿಸಿ, ಮಾನ ಕಳೆಯುತ್ತೇನೆಂದು ಬೆದರಿ ಸಿದ್ದಾನೆ. ಸಂಸಾರ ಹಾಳಾಗುತ್ತದೆ ಎಂಬ ಭಯದಲ್ಲಿದ್ದ ಆ ಮಹಿಳೆಯಿಂದ ಬಲವಂತ ವಾಗಿ ಸುಮಾರು 1.30 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಹಾಗೂ ಉಂಗುರವನ್ನು ಪಡೆದು, ಈ ವಿಷಯವನ್ನು ಯಾರಿಗೂ ತಿಳಿಸ ದಂತೆ ಜೀವ ಬೆದರಿಕೆ ಹಾಕಿ, ಕಳುಹಿಸಿದ್ದ.

ಇಷ್ಟಕ್ಕೆ ಬಿಡದ ಕೀರ್ತಿ ಹೆಗಡೆ ಇನ್ನೂ 50 ಸಾವಿರ ರೂ. ನೀಡಬೇಕೆಂದು ಮಹಿಳೆ ಯನ್ನು ಪೀಡಿಸುತ್ತಿದ್ದ. ಪದೇ ಪದೆ ಕರೆ ಮಾಡಿ, ಹಣ ನೀಡದಿದ್ದರೆ ಲಾಡ್ಜ್‍ಗೆ ಬಂದಿದ್ದ ವಿಷಯವನ್ನು ನಿನ್ನ ಗಂಡನಿಗೆ ತಿಳಿಸುತ್ತೇ ನೆಂದು ಬ್ಲಾಕ್‍ಮೇಲ್ ಮಾಡುತ್ತಿದ್ದ. ಇವನ ಕಿರುಕುಳ ತಾಳಲಾಗದೆ ಆ ಮಹಿಳೆ ಜೂ.19ರಂದು ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಜೂ.20ರಂದು ಶ್ರೀರಂಗ ಪಟ್ಟಣದಲ್ಲಿ ಆರೋಪಿ ಕೀರ್ತಿ ಹೆಗಡೆ ಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೀಗೆ ರಾಜಕೀಯವಾಗಿ ಬೆಳೆಸುವ ಆಮಿಷವೊಡ್ಡಿ ಅನೇಕ ಮಹಿಳೆ ಯರನ್ನು ತಾನಿದ್ದ ಸ್ಥಳಕ್ಕೆ ಕರೆಸಿಕೊಂಡು, ಬಳಿಕ ಇಲ್ಲಿಗೆ ಬಂದ ವಿಚಾರವನ್ನು ನಿಮ್ಮ ಮನೆಯವರಿಗೆ ತಿಳಿಸಿ ಮಾನ ಕಳೆಯುತ್ತೇ ನೆಂದು ಬ್ಲಾಕ್‍ಮೇಲ್ ಮಾಡಿ, ವಂಚಿದ್ದಾ ನೆಂದು ಹೇಳಲಾಗುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿಯಬೇಕಿದೆ.

Translate »