ಮೈಸೂರು,ಜೂ.20- ಮೈಸೂರು ನಗರದಲ್ಲಿ ನಡೆದಿರುವ ಕಾಮಗಾರಿಗಳನ್ನು ನಗರ- ಪಟ್ಟಣ ಯೋಜನಾ ಸ್ಥಾಯಿ ಸಮಿತಿಯು ಪರಿಶೀಲನೆ ನಡೆಸುತ್ತಿದ್ದು, ಮಂಗಳವಾರ ವಾರ್ಡ್ ನಂ.51ಕ್ಕೆ ಭೇಟಿ ನೀಡಿ ಶಂಕರ ಮಠ ಹಿಂದಿನ ರಸ್ತೆಯ ಮಳೆ ನೀರು ಚರಂಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮೋರಿಯ ಮಧ್ಯಭಾಗದಲ್ಲಿ ಒಳ ಚರಂಡಿಗಳು ಇರುವುದು ಕಂಡು ಬಂದಿದೆ. ಮೋರಿಯ ಒಳಗಡೆ ಯುಜಿಡಿ ಲೈನ್ ಕಾಮಗಾರಿ ಮಾಡುವುದರಿಂದ ಮೋರಿಯಲ್ಲಿ ಬರುವ ಕಸ-ಕಡ್ಡಿಗಳು ಅಲ್ಲಲ್ಲಿ ಶೇಖರಣೆ ಆಗುತ್ತವೆ. ಇದರಿಂದ ನೀರು ಅಲ್ಲೇ ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ…
ಸಕಲೇಶಪುರ ಬಳಿ ಮಂಡ್ಯ ದಿಬ್ಬಣದ ಬಸ್ ಪಲ್ಟಿ: 33 ಮಂದಿಗೆ ಗಾಯ
June 21, 2019ಸಕಲೇಶಪುರ: ಮಂಡ್ಯ ಜಿಲ್ಲೆಯಿಂದ ಮದುವೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದ ಖಾಸಗಿ ಬಸ್ ಸಕಲೇಶಪುರದ ಹೊರವಲಯದಲ್ಲಿ ಆನೆ ಮಹಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಅಪ ಘಾತಕ್ಕೀಡಾ ಗಿದ್ದು, 33 ಮಂದಿ ಗಾಯ ಗೊಂಡಿದ್ದಾರೆ. ಅವರಲ್ಲಿ 6 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ರಾಚಯ್ಯ(70), ಚನ್ನಯ್ಯ (65), ಸಿದ್ದರಾಜು(40), ಮಲ್ಲಮ್ಮ (51), ಬಸವರಾಜು(72), ಮರಿಸಿದ್ದಮ್ಮ (70) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಸಕಲೇಶಪುರದ…
ಈ ಬಾರಿ ದಸರಾ ವಸ್ತು ಪ್ರದರ್ಶನದಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕ ಟೆಂಡರ್
June 20, 2019ಮೈಸೂರು: ಈ ಬಾರಿಯ ದಸರಾ ವಸ್ತು ಪ್ರದರ್ಶನ ಸಂಬಂಧ ಗ್ಲೋಬಲ್ ಟೆಂಡರ್ ಕೈ ಬಿಡಲು ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ) ತಿಳಿಸಿದರು. ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನ ದಲ್ಲಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ರುವ ತಮ್ಮ ಕೊಠಡಿಯಲ್ಲಿ ಸಭೆ ನಡೆಸಿ ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮುಖ್ಯ ದ್ವಾರ, ವಾಣಿಜ್ಯ ಮಳಿಗೆಗಳು, ವಾಹನ ನಿಲುಗಡೆ, ಫುಡ್ ಕೋರ್ಟ್,…
ಮೈಸೂರು ನಗರಪಾಲಿಕೆ ಸದಸ್ಯರ ಯೋಗಾಭ್ಯಾಸ: ನೀರಸ ಪ್ರತಿಕ್ರಿಯೆ
June 20, 2019ಮೈಸೂರು: ಮೈಸೂರಿನ ರೇಸ್‍ಕೋರ್ಸ್‍ನಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನೋತ್ಸವ ದಂದು 1 ಲಕ್ಷಕ್ಕೂ ಹೆಚ್ಚು ಯೋಗಪಟುಗಳು ಸಾಮೂಹಿಕ ಯೋಗ ಪ್ರದರ್ಶಿಸಲು ಸಿದ್ಧತೆ ನಡೆದಿದ್ದು, ಇದರ ಅಂಗವಾಗಿ ಮೈಸೂರು ಮಹಾನಗರಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗಾಗಿ ಬುಧವಾರ ಮೈಸೂರು ಅರಮನೆಯಲ್ಲಿ ಯೋಗಾ ಭ್ಯಾಸ ಏರ್ಪಡಿಸಲಾಗಿತ್ತು. ಯೋಗ ಫೆಡರೇಷನ್ ಆಫ್ ಮೈಸೂರು ಮತ್ತು ಮಹಾನಗರಪಾಲಿಕೆ ಜಂಟಿಯಾಗಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯ ಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗ ನ್ನಾಥ್, ಉಪಮೇಯರ್ ಶಫೀ ಅಹಮದ್, ಹಾಗೂ ಬಿ.ವಿ.ಮಂಜುನಾಥ್, ಶಿವ ಕುಮಾರ್, ರಮೇಶ್ ರಮಣಿ ಸೇರಿದಂತೆ…
ಕುಂತಿ ಬೆಟ್ಟದಲ್ಲಿ ಕೌಟಿಲ್ಯ ವಿದ್ಯಾರ್ಥಿಗಳ ಮೈನವಿರೇಳಿಸುವ ಸಾಹಸ
June 20, 2019ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗ ದಲ್ಲಿ ಮಕ್ಕಳು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಧೈರ್ಯ ಮತ್ತು ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿ ಕೊಳ್ಳ ಬೇಕಾಗಿರುವುದು ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇ ಜಿಸಲು ಕೌಟಿಲ್ಯ ವಿದ್ಯಾಲಯದ ವತಿಯಿಂದ ಈ ವರ್ಷವೂ ಕುಂತಿಬೆಟ್ಟದಲ್ಲಿ ಸಾಹಸ ಕ್ರೀಡೆಗಳ ಶಿಬಿರ ವನ್ನು ಅಯೋಜಿಸಲಾಗಿತ್ತು. ಪರಿಸರದೊಡನೆ ಬೆರೆತು ನಿಸರ್ಗದ ರೋಚಕ ಕೌತುಕಗಳನ್ನು ಅನು ಭವಿಸಿ, ಸಸ್ಯರಾಶಿ ಮತ್ತು ವಿವಿಧ ಜೀವ ಸಂಕುಲವನ್ನು ಹತ್ತಿರದಿಂದ ನೋಡಿ ಅನುಭವ ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಳ್ಳುವ ಸದವಕಾಶವನ್ನು ಕೌಟಿಲ್ಯ ವಿದ್ಯಾಲಯದ…
ಹೆಚ್ಚಿನ ಜನರ ಸೆಳೆಯಲು ಕರಪತ್ರ ವಿತರಣೆ
June 20, 2019ಮೈಸೂರು: ಮೈಸೂರು ರೇಸ್ ಕೋರ್ಸ್‍ನಲ್ಲಿ ಶುಕ್ರ ವಾರ (ಜೂ.21) ನಡೆಯುವ ಅಂತಾ ರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ ಪಾಲ್ಗೊಳ್ಳುವಂತೆ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ನೇತೃತ್ವದಲ್ಲಿ ಕಾರ್ಯ ಕರ್ತರ ತಂಡ ಬುಧವಾರ ಮೈಸೂರಿನ ಹಲವೆಡೆ ಪಾದಯಾತ್ರೆ ನಡೆಸಿ ಯೋಗ ದಿನಾಚರಣೆಯ ಕರಪತ್ರ ವಿತರಿಸಿದರು. ಯೋಗಕ್ಕೆ ಅತ್ಯಂತ ಮಹತ್ವ ನೀಡಿರುವ ಮೈಸೂರಿನಲ್ಲಿ ಯೋಗ ದಿನೋತ್ಸವವನ್ನು ಯಶಸ್ವಿಗೊಳಿಸಬೇಕಾಗಿರುವ ಹಿನ್ನೆಲೆ ಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಬೇಕೆನ್ನುವುದು ಇದರ ಉದ್ದೇಶ. ಹೀಗಾಗಿ ಮೈಸೂರಿನ ಎಲ್ಲಾ ಸಂಘ- ಸಂಸ್ಥೆಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳೂ, ಸಾರ್ವಜನಿಕರು…
ಕಂದಾಯ ಸಚಿವರ ಜಿಲ್ಲಾ ಪ್ರವಾಸ
June 20, 2019ಮೈಸೂರು: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜೂನ್ 19 ಹಾಗೂ ಜೂ.20ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜೂ.19ರಂದು ರಾತ್ರಿ 8.30 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಜೂ.20ರಂದು ಬೆಳಿಗ್ಗೆ 7 ಗಂಟೆಗೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕ್ರಮಗಳ ವೀಕ್ಷಣೆ ಮಾಡಲಿದ್ದಾರೆ. ಬೆಳಿಗ್ಗೆ 9:30ಕ್ಕೆ ಸಾರ್ವ ಜನಿಕ ಭೇಟಿ ಮಾಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಡಿಸಿ ಕಚೇರಿ ಯಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪ ಪರಿಹಾರ ಕ್ರಮ ಹಾಗೂ ಕಂದಾಯ ಇಲಾಖಾ…
ನಾಳೆ ಮೈಸೂರಲ್ಲಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನ
June 20, 2019ಮೈಸೂರು: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಎಂಆರ್‍ಸಿ ಆವ ರಣದಲ್ಲಿ ಮೆಗಾ ಸಾಮೂಹಿಕ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಗಿನ್ನಿಸ್ ದಾಖಲೆಗೆ ನೋಂದಣಿ ಮಾಡಿಲ್ಲ ವಾದರೂ, ಆರೋಗ್ಯಕ್ಕಾಗಿ ಯೋಗ ಪರಿಕ ಲ್ಪನೆಯೊಂದಿಗೆ `ಕೋಮು ಸೌಹಾರ್ದತೆ’ ಘೋಷದಲ್ಲಿ ಸಾಮೂಹಿಕ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಸುಮಾರು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಮೈಸೂರಿನ ಡಿಸಿ ಕಚೇರಿ ಸಭಾಂಗಣ ದಲ್ಲಿ ಯೋಗ…
ಮೈಸೂರು ಮಂಜುನಾಥ್ ರಾಗ ಸಂಯೋಜನೆಯಲ್ಲಿ ಸಿದ್ಧವಾಗಿದೆ `ರಾಷ್ಟ್ರೀಯ ಯೋಗ ಗೀತೆ’
June 20, 2019ಮೈಸೂರು: ವಿಶ್ವ ಯೋಗ ದಿನಾಚರಣೆಗೆ ಮೈಸೂರು ದೊಡ್ಡ ಉಡುಗೊರೆ ನೀಡಲು ಮುಂದಾ ಗಿದೆ. ಅದಕ್ಕಾಗಿ ಮೈಸೂರಿನ ಖ್ಯಾತ ವಯೋಲಿನ್ ವಿದ್ವಾಂಸರಾದ ಮೈಸೂರು ಮಂಜುನಾಥ್ ಅವರು ಹೊಸರಾಗದಲ್ಲಿ `ರಾಷ್ಟ್ರೀಯ ಯೋಗ ಗೀತೆ’ ಸಂಯೋಜನೆ ಮಾಡಿದ್ದು, ವಿಶ್ವಯೋಗ ದಿನಾಚರಣೆ ಯಂದು ವಿಶ್ವದಾದ್ಯಂತ ಲೋಕಾರ್ಪಣೆಗೊಳ್ಳಲಿದೆ. ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಗೀತೆಗಳಿಲ್ಲ. ಹೊಸ ರಾಗದಲ್ಲಿ ಗೀತೆ ರಚನೆ ಮಾಡಬೇಕೆಂದು ಸೆಂಟರ್ ಫಾರ್ ಸಾಫ್ಟ್ ಪವರ್, ಇಂಡಿಯಾ ಫೌಂಡೇಷನ್ ಮತ್ತು ಬೆಂಗಳೂರಿನ ವ್ಯಾಸ ವಿವಿ ಸಿಬ್ಬಂದಿ ಮೈಸೂರು ಮಂಜುನಾಥ್ ರೊಂದಿಗೆ ಚರ್ಚಿಸಿದ್ದಾರೆ. ನಂತರದಲ್ಲಿ ಮಂಜುನಾಥ್…
ಮೈಸೂರು ವಿವಿಯಲ್ಲಿ ಆನ್‍ಲೈನ್ ಕೋರ್ಸ್ ಕಾರ್ಯಾಗಾರ
June 20, 2019ಮೈಸೂರು: 103 ವರ್ಷಗಳಷ್ಟು ಹಳೆಯದಾದ ಮೈಸೂರು ವಿಶ್ವ ವಿದ್ಯಾನಿಲಯವು ಮೂಕ್ಸ್ ಸ್ವಯಂ (UGC-MOOKs SWAYAM) ಅಳ ವಡಿಸಿಕೊಳ್ಳುವ ಮೂಲಕ ಬೃಹತ್ ಮುಕ್ತ ಆನ್‍ಲೈನ್ ಕೋರ್ಸ್‍ಗಳನ್ನು ನೀಡುವ ಕರ್ನಾಟಕದ ಮೊದಲ ವಿಶ್ವವಿದ್ಯಾ ನಿಲಯವಾಗಿ ಹೊರ ಹೊಮ್ಮಲಿದೆ. ಯುಜಿಸಿ ನೀಡಿದ ಈ ಕ್ರಾಂತಿಕಾರಕ ವೇದಿಕೆಯ ಪ್ರಮುಖ ಅಂಶವೆಂದರೆ ದೇಶದ ವಿವಿಧ ಭಾಗಗಳಲ್ಲಿನ ತಜ್ಞರಿಂದ ಬೋಧನೆ ಮತ್ತು ಪಾಠಗಳನ್ನು ಪಡೆಯ ಬಹುದಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ `ಯುಜಿಸಿ-ಮೂಕ್ಸ್…










