ಕುಂತಿ ಬೆಟ್ಟದಲ್ಲಿ ಕೌಟಿಲ್ಯ ವಿದ್ಯಾರ್ಥಿಗಳ ಮೈನವಿರೇಳಿಸುವ ಸಾಹಸ
ಮೈಸೂರು

ಕುಂತಿ ಬೆಟ್ಟದಲ್ಲಿ ಕೌಟಿಲ್ಯ ವಿದ್ಯಾರ್ಥಿಗಳ ಮೈನವಿರೇಳಿಸುವ ಸಾಹಸ

June 20, 2019

ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗ ದಲ್ಲಿ ಮಕ್ಕಳು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಧೈರ್ಯ ಮತ್ತು ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿ ಕೊಳ್ಳ ಬೇಕಾಗಿರುವುದು ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇ ಜಿಸಲು ಕೌಟಿಲ್ಯ ವಿದ್ಯಾಲಯದ ವತಿಯಿಂದ ಈ ವರ್ಷವೂ ಕುಂತಿಬೆಟ್ಟದಲ್ಲಿ ಸಾಹಸ ಕ್ರೀಡೆಗಳ ಶಿಬಿರ ವನ್ನು ಅಯೋಜಿಸಲಾಗಿತ್ತು.

ಪರಿಸರದೊಡನೆ ಬೆರೆತು ನಿಸರ್ಗದ ರೋಚಕ ಕೌತುಕಗಳನ್ನು ಅನು ಭವಿಸಿ, ಸಸ್ಯರಾಶಿ ಮತ್ತು ವಿವಿಧ ಜೀವ ಸಂಕುಲವನ್ನು ಹತ್ತಿರದಿಂದ ನೋಡಿ ಅನುಭವ ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಳ್ಳುವ ಸದವಕಾಶವನ್ನು ಕೌಟಿಲ್ಯ ವಿದ್ಯಾಲಯದ ವಿದ್ಯಾರ್ಥಿ ಗಳಿಗಾಗಿ ಈ ಸಾಹಸ ಕ್ರೀಡೆಗಳ ಶಿಬಿರದ ಮೂಲಕ ಕಲ್ಪಿಸಲಾಗಿತ್ತು. ಶಿಬಿರದಲ್ಲಿ ಮಕ್ಕಳು ಟ್ರೆಕ್ಕಿಂಗ್ ಮೂಲಕ ಕಾಡುಮೇಡು ಸುತ್ತಾಡಿ ಪ್ರಕೃತಿಯೊಡನೆ ಒಂದಾಗಿ ಪರಿಸರದ ಪಾಠವನ್ನು ಕಲಿತರು.

ನದಿಯ ದಡದಿಂದ ದಡಕ್ಕೆ ಸಾಗುವ ರಿವರ್ ಕ್ರಾಸಿಂಗ್, ರಭಸದಿಂದ ಹರಿಯುವ ನೀರಿನಲ್ಲಿ ಸಾಗುವ ರ್ಯಾಫ್ಟಿಂಗ್, ಕಯಾಕಿಂಗ್, ರ್ಯಾಪೆಲ್ಲಿಂಗ್ ಮುಂತಾದ ಸಾಹಸಮಯ ಕ್ರೀಡೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿ ಗಳು ತಮಗೆ ಲಭಿಸಿದ ವಿಶೇಷ ಅನುಭವದಿಂದ ಪುಳಕಿತರಾದರು. ಕರಾಟೆ, ಟೆನ್ನಿಸ್, ಸ್ಕೇಟಿಂಗ್ ಮುಂತಾದ ಚಟುವಟಿಕೆ ಗಳನ್ನು ಶಿಕ್ಷಣದ ಒಂದು ಭಾಗವಾಗಿ ಕೌಟಿಲ್ಯ ವಿದ್ಯಾ ಲಯದಲ್ಲಿ ಕಲಿಸಲಾಗು ತ್ತಿದ್ದು ವಿದ್ಯಾರ್ಥಿಗಳು ಸಾಹಸ ಪ್ರವೃತ್ತಿಯ ಜೊತೆಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ತನ್ನ ಅಡ್ವೆಂ ಚರ್ ಕ್ಲಬ್ ಹಾಗೂ ನ್ಯಾಷ ನಲ್ ಅಡ್ವೆಂಚರ್ ಫೌಂಡೇ ಷನ್‍ನ ಸಂಯುಕ್ತ ಆಶ್ರಯ ದಲ್ಲಿ ಸಾಹಸ ಕ್ರೀಡೆಗಳನ್ನು ಆಯೋ ಜಿಸಿಕೊಂಡು ಬರುತ್ತಿದೆ. ಸಾಹಸ ಕ್ರೀಡೆಗಳ ಶಿಬಿರದಲ್ಲಿ 7ರಿಂದ 10ನೇ ತರಗತಿಯವರೆಗಿನ ಆಯ್ದ ವಿದ್ಯಾರ್ಥಿಗಳು ನುರಿತ ತರಬೇತುದಾರರು ಹಾಗೂ ಶಿಕ್ಷಕ ವೃಂದ ದವರ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದರು.

Translate »