ಚರಂಡಿ ಕಾಮಗಾರಿಗಳ ಪರಿಶೀಲಿಸಿದ ವಕ್ರ್ಸ್ ಕಮಿಟಿ
ಮೈಸೂರು

ಚರಂಡಿ ಕಾಮಗಾರಿಗಳ ಪರಿಶೀಲಿಸಿದ ವಕ್ರ್ಸ್ ಕಮಿಟಿ

June 21, 2019

ಮೈಸೂರು,ಜೂ.20- ಮೈಸೂರು ನಗರದಲ್ಲಿ ನಡೆದಿರುವ ಕಾಮಗಾರಿಗಳನ್ನು ನಗರ- ಪಟ್ಟಣ ಯೋಜನಾ ಸ್ಥಾಯಿ ಸಮಿತಿಯು ಪರಿಶೀಲನೆ ನಡೆಸುತ್ತಿದ್ದು, ಮಂಗಳವಾರ ವಾರ್ಡ್ ನಂ.51ಕ್ಕೆ ಭೇಟಿ ನೀಡಿ ಶಂಕರ ಮಠ ಹಿಂದಿನ ರಸ್ತೆಯ ಮಳೆ ನೀರು ಚರಂಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮೋರಿಯ ಮಧ್ಯಭಾಗದಲ್ಲಿ ಒಳ ಚರಂಡಿಗಳು ಇರುವುದು ಕಂಡು ಬಂದಿದೆ. ಮೋರಿಯ ಒಳಗಡೆ ಯುಜಿಡಿ ಲೈನ್ ಕಾಮಗಾರಿ ಮಾಡುವುದರಿಂದ ಮೋರಿಯಲ್ಲಿ ಬರುವ ಕಸ-ಕಡ್ಡಿಗಳು ಅಲ್ಲಲ್ಲಿ ಶೇಖರಣೆ ಆಗುತ್ತವೆ. ಇದರಿಂದ ನೀರು ಅಲ್ಲೇ ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗುತ್ತದೆ. ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಪೂರ್ಣ ಗೊಳಿಸಬೇಕು. ಜತೆಗೆ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಮೋರಿಯನ್ನು ನಿರ್ಮಿಸಲಾಗುತ್ತದೆ. ಹಾಗಾಗಿ ಮೋರಿ ಕಾಮಗಾರಿ ನಡೆಸುವಾಗಲೂ ಅಡ್ಡವಾಗಿರುವ ಪೈಪ್‍ಲೈನ್‍ಗಳನ್ನು ಕೆಳಭಾಗಕ್ಕೆ ಅಥವಾ ಮೇಲ್ಭಾಗಕ್ಕೆ ಅಳವಡಿಸಬೇಕು ಎಂದು ಇಂಜಿನಿಯರುಗಳಿಗೆ ಸಲಹೆ ನೀಡಿದರು. ವಕ್ರ್ಸ್ ಕಮಿಟಿ ಅಧ್ಯಕ್ಷೆ ಲಕ್ಷ್ಮಿಶಿವಣ್ಣ, ಸದಸ್ಯರಾದ ಕೆ.ವಿ.ಶ್ರೀಧರ್, ನಾಗರಾಜು, ಅಶ್ವಿನಿ, ರಂಗ ಸ್ವಾಮಿ, ಸೈಯದ್ ಹಸ್ರತ್ ಸೇರಿದಂತೆ ಇಂಜಿನಿಯರು, ಅಧಿಕಾರಿಗಳು ಹಾಜರಿದ್ದರು.

Translate »