ಜುಲೈ ಮೊದಲ ವಾರ ರಾಜಭವನ್ ಚಲೋ ನಡೆಸಲು ರೈತರ ನಿರ್ಧಾರ
ಮೈಸೂರು

ಜುಲೈ ಮೊದಲ ವಾರ ರಾಜಭವನ್ ಚಲೋ ನಡೆಸಲು ರೈತರ ನಿರ್ಧಾರ

June 21, 2019

ಜೂ.24ರಂದು ಮೈಸೂರಲ್ಲಿ ಪ್ರತಿಭಟನಾ ಮೆರವಣಿಗೆ
ಮೈಸೂರು, ಜೂ.20(ಆರ್‍ಕೆಬಿ)- ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು ವಿಫಲ ರಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘದಿಂದ ಜುಲೈ ತಿಂಗಳ ಮೊದಲ ವಾರ ರಾಜಭವನ್ ಚಲೋ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡ ಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅದಕ್ಕೆ ಮೊದಲು ಜೂ.24ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಭೀಕರ ಬರ ಆವ ರಿಸಿದೆ. ಇದರಿಂದಾಗಿ ರೈತರು, ಕಾರ್ಮಿಕರು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಇಂತಹ ಸ್ಥಿತಿಯಲ್ಲೂ ಬ್ಯಾಂಕ್‍ನವರು ಸಾಲ ವಸೂಲಿಗೆ ಬಲಾತ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೂಲಿಗಾಗಿ ಜನ ಊರು ಬಿಟ್ಟು ದೂರದ ಊರುಗಳಿಗೆ ಗುಳೇ ಹೋಗು ತ್ತಿದ್ದಾರೆ. ಮಧ್ಯ ಕರ್ನಾಟಕ, ಹಳೆ ಮೈಸೂರು, ಮಲೆನಾಡು, ಕರಾವಳಿಯಲ್ಲು ಬರ ಪರಿ ಸ್ಥಿತಿ ತೀವ್ರವಾಗಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಮಂತ್ರಿ, ಶಾಸಕರು ಕುರ್ಚಿಗಾಗಿ ಕಿತ್ತಾಡುತ್ತಿ ದ್ದಾರೆ. ವಿರೋಧ ಪಕ್ಷ ಕೋಮಾ ಸ್ಥಿತಿಯ ಲ್ಲಿದೆ. ಹೀಗಾಗಿ ರೈತರ ನೆರವಿಗೆ ಧಾವಿಸು ವಂತೆ ರಾಜ್ಯಪಾಲರನ್ನು ಆಗ್ರಹಿಸಲು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕಬ್ಬಿನ ಬಾಕಿ ಪಾವತಿಗೂ ಒತ್ತಾಯಿಸಿ, ಸರ್ಕಾರ ಬಾಕಿ ಉಳಿಸಿಕೊಂಡಿರುವ ಕೋಟ್ಯಾಂತರ ರೂ. ಹಣವನ್ನು ಕೂಡಲೇ ಪಾವತಿಸಬೇಕು. ಮಂಡ್ಯ, ಪಾಂಡವಪುರ, ಚುಂಚನಕಟ್ಟೆ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು, ಗುತ್ತಿಗೆ ಕಾಯ್ದೆಗೆ ತಿದ್ದು ಪಡಿ ತರಬಾರದು ಎಂದು ಎಚ್ಚರಿಸಿದರು.

ಸಾಲ ಮನ್ನಾ ಬಗ್ಗೆ ಶ್ವೇತಪತ್ರ ಹೊರ ಡಿಸಬೇಕು. ಭತ್ತ ಖರೀದಿ ಕೇಂದ್ರ ತೆರೆಯ ಬೇಕು. ಪವರ್‍ಗ್ರಿಡ್ ವಿದ್ಯುತ್ ಮಾರ್ಗ ಬದಲಿಸಿ ರೈತರ ಭೂಮಿ ಉಳಿಸಬೇಕು. ಸರ್ಕಾರಿ ಭೂ ಒತ್ತುವರಿ ತೆರವು ಮಾಡ ಬೇಕು ಸೇರಿದಂತೆ ಇತರೆ ಸಮಸ್ಯೆಗಳ ಪರಿ ಹಾರಕ್ಕೆ ಒತ್ತಾಯಿಸಿ ಜೂ.24ರಂದು ಮೈಸೂ ರಿನ ಗನ್‍ಹೌಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.

ಅಲ್ಲದೆ ಕಾಫಿ ಹಾಗೂ ಮೆಣಸು ಬೆಳೆ ಗಾರರ ಸಮಸ್ಯೆ ಕುರಿತು ಚರ್ಚಿಸಲು ಜೂ. 23ರಂದು ಬೆಳಿಗ್ಗೆ 11 ಗಂಟೆಗೆ ಗೋಣಿಕೊಪ್ಪ ದಲ್ಲಿ ಸಭೆ ಕರೆಯಲಾಗಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಹೆಚ್.ಸಿ.ಲೋಕೇಶ್ ರಾಜ್ ಅರಸ್, ಬಸವೇಗೌಡ ಉಪಸ್ಥಿತರಿದ್ದರು

Translate »