ಜಯ ಚಾಮರಾಜ ಒಡೆಯರ್ ಜನ್ಮ ಶತಾಬ್ಧಿಗೆ ರಾಷ್ಟ್ರಪತಿಗಳ ಆಹ್ವಾನಿಸಿದ ರಾಜಮಾತೆ ಪ್ರಮೋದಾದೇವಿ
ಮೈಸೂರು

ಜಯ ಚಾಮರಾಜ ಒಡೆಯರ್ ಜನ್ಮ ಶತಾಬ್ಧಿಗೆ ರಾಷ್ಟ್ರಪತಿಗಳ ಆಹ್ವಾನಿಸಿದ ರಾಜಮಾತೆ ಪ್ರಮೋದಾದೇವಿ

June 21, 2019

ಮೈಸೂರು, ಜೂ.20- ರಾಜರ್ಷಿ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲು ಮೈಸೂರು ರಾಜವಂಶಸ್ಥರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ದೆಹಲಿಯ ರಾಷ್ಟ್ರಪತಿ ಭವನಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಗಮಿ ಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಹ್ವಾನ ನೀಡಿದರು.

ರಾಜರ್ಷಿ ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯ ಕ್ರಮ ಜುಲೈ 18ರಂದು ನಡೆಯಲಿದ್ದು, ತಾವು ಜೂ.14ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ `ಮೈಸೂರು ಮಿತ್ರ’ ನಿಗೆ ತಿಳಿಸಿದರು. ತಮ್ಮ ಜೊತೆ ಸುಮಾರು 20 ನಿಮಿಷ ಕಾಲ ಮಾತನಾಡಿದ ರಾಷ್ಟ್ರಪತಿಗಳು, ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಹೇಳಿದರು.

Translate »