ಮೈಸೂರು

ಮತ ಎಣಿಕೆಗೆ ಭಾರೀ ಭದ್ರತೆ
ಮೈಸೂರು

ಮತ ಎಣಿಕೆಗೆ ಭಾರೀ ಭದ್ರತೆ

May 23, 2019

ಮೈಸೂರು: ನಾಳೆ (ಗುರುವಾರ) ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿರುವ ಮತ ಎಣಿಕಾ ಕಾರ್ಯಕ್ಕೆ ಇನ್ನಿಲ್ಲದ ಭಾರೀ ಬಂದೋಬಸ್ತ್ ಮಾಡಲಾಗಿದೆ. ಬಂದೋಬಸ್ತ್ ಯೋಜನೆ ಕುರಿತು ಡಿಸಿಪಿ ಎಂ.ಮುತ್ತುರಾಜ್, ಇಂದು ಸಂಜೆ ಮತ ಎಣಿಕಾ ಕೇಂದ್ರದ ಬಳಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸುವ ಬಗ್ಗೆ ಹಾಗೂ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತಂತೆ ಬ್ರೀಫ್ ಮಾಡಿದರು. 6 ಮಂದಿ ಎಸಿಪಿ ಮಟ್ಟದ ಅಧಿಕಾರಿ ಗಳು, 22 ಪೊಲೀಸ್ ಇನ್ಸ್‍ಪೆಕ್ಟರ್, 23 ಸಬ್ ಇನ್ಸ್‍ಪೆಕ್ಟರ್, 103…

ಲೋಕಸಭಾ ಚುನಾವಣೆ: ಮತ ಎಣಿಕೆಗೆ ಮುಂಚೆ ವಿವಿ ಪ್ಯಾಟ್ ಸ್ಲಿಪ್ ಎಣಿಕೆಗೆ ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಯೋಗ
ಮೈಸೂರು

ಲೋಕಸಭಾ ಚುನಾವಣೆ: ಮತ ಎಣಿಕೆಗೆ ಮುಂಚೆ ವಿವಿ ಪ್ಯಾಟ್ ಸ್ಲಿಪ್ ಎಣಿಕೆಗೆ ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಯೋಗ

May 23, 2019

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಒಂದೇ ದಿನ ಬಾಕಿ ಇರುವಾಗಲೇ ವಿಪಕ್ಷಗಳು ಫಲಿತಾಂಶಕ್ಕೆ ಮುನ್ನ ವಿವಿ ಪ್ಯಾಟ್ ಕಾಗದಗಳನ್ನು ಸಂಪೂರ್ಣವಾಗಿ ಲೆಕ್ಕ ಹಾಕಬೇಕೆಂದು ಬೇಡಿಕೆ ಇಟ್ಟಿದ್ದವು. ಆದರೆ ಚುನಾವಣಾ ಆಯೋಗವು ಬೇಡಿಕೆಯನ್ನು ತಿರಸ್ಕರಿಸಿದ್ದು, ಮತ ಎಣಿಕೆಯ ಕಡೇ ಕ್ಷಣದ ತಯಾರಿ ನಡೆದಿರುವಾಗ ಕಾರ್ಯವಿಧಾನದಲ್ಲಿ ಯಾವ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದಿದೆ. 22 ರಾಜಕೀಯ ಪಕ್ಷಗಳ ನಾಯಕರು ಫಲಿತಾಂಶಕ್ಕೆ ಮುನ್ನ ವಿವಿ ಪ್ಯಾಟ್ ಸ್ಲಿಪ್‍ಗಳನ್ನು ಎಣಿಕೆ ಮಾಡಿ ಖಚಿತಪಡಿಸಿಕೊಳ್ಳಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಒಂದೊಮ್ಮೆ ಏನಾದರೂ ವ್ಯತ್ಯಾಸಗಳು ಕಂಡು…

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ನನ್ನ ವಿರೋಧವಿದೆ
ಮೈಸೂರು

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ನನ್ನ ವಿರೋಧವಿದೆ

May 23, 2019

ಮೈಸೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಸರ್ಕಾರದ ಪ್ರಸ್ತಾಪಕ್ಕೆ ತಮ್ಮ ವಿರೋಧವಿದೆ ಎಂದು ತಿಳಿಸಿದ ಮಾಜಿ ಮುಖ್ಯಮಂತ್ರಿಗಳೂ ಆದ ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಈ ಪ್ರಸ್ತಾಪದ ವಿರುದ್ಧ ಈ ಹಿಂದೆಯೇ ದನಿ ಎತ್ತಿದ್ದೆ. ಈಗಲೂ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಮಾತ ನಾಡುವುದಾಗಿ ತಿಳಿಸಿದರು. ಮೈಸೂರಿನ ರಾಮಕೃಷ್ಣನಗರದಲ್ಲಿ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಸ್ಥಾಪನೆಗೊಂಡಿರುವ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಕಟ್ಟಡವನ್ನು…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಕ್ತರ ಮೋಡಿ ಮಾಡಿದ ಸಂಗೀತನಾದ
ಮೈಸೂರು

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಕ್ತರ ಮೋಡಿ ಮಾಡಿದ ಸಂಗೀತನಾದ

May 23, 2019

ಮೈಸೂರು: ಮೈಸೂರಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಆಂಗ್ ಕ್ಲುಂಗ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಜನೆ ಭಕ್ತರ ಮನತಣಿಸಿತು. ಡಾ.ಅನುಸೂಯ ಕುಲಕರ್ಣಿ ಅವರ ನೇತೃತ್ವದಲ್ಲಿ ಮೊದಲಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರಚಿತ ‘ಪಾಹಿ ಪಾಹಿ ಗಜಾನನ’ ಹಾಡನ್ನು ಆದಿತಾಳ ದೊಂದಿಗೆ ಸಿಂದೂ ಬೈರವಿ ರಾಗದಲ್ಲಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ತೆಲುಗಿನ…

ಮುಂಗಾರು ಪ್ರವೇಶ ವಿಳಂಬ: ರೈತರಲ್ಲಿ ಆತಂಕ ಬೇಡ
ಮೈಸೂರು

ಮುಂಗಾರು ಪ್ರವೇಶ ವಿಳಂಬ: ರೈತರಲ್ಲಿ ಆತಂಕ ಬೇಡ

May 23, 2019

ಮೈಸೂರು: ಪ್ರಸಕ್ತ ಮುಂಗಾರು ಮಾರುತದ ಪ್ರವೇಶ ವಿಳಂಬವಾಗಿದ್ದು, ಕೇರಳಕ್ಕೆ ಜೂ.6ರಂದು ಮುಂಗಾರು ಪ್ರವೇಶಿಸಲಿದೆ. ವಾಡಿಕೆ ಮಳೆ ಶೇ.96ರಷ್ಟು ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ನೀಡಿದ್ದು, ರೈತರು ಆತಂ ಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಮೈಸೂರು ನಾಗನಹಳ್ಳಿ ಕೃಷಿ ಹವಾಮಾನ ವಿಭಾಗದ ಪ್ರಕಟಣೆ ತಿಳಿಸಿದೆ. ಮೇ 26ರವರೆಗೆ ಸಾಧಾರಣ ಮಳೆ ಸಾಧ್ಯತೆ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಮೇ 26 ರವರೆಗೆ ಮೋಡ ಕವಿದ ವಾತಾವರಣ ವಿದ್ದು, ಸಾಧಾರಣ…

ಸಾವಿನಂಚಿನಲ್ಲಿದ್ದ ಸವಿತಾಗೆ `ಹೊಸ ಉಸಿರು’ ತುಂಬಿದ `ಎಕ್ಮೋ’!
ಮೈಸೂರು

ಸಾವಿನಂಚಿನಲ್ಲಿದ್ದ ಸವಿತಾಗೆ `ಹೊಸ ಉಸಿರು’ ತುಂಬಿದ `ಎಕ್ಮೋ’!

May 23, 2019

ಮೈಸೂರು: ಹೆಚ್1ಎನ್1 ಸೋಂಕಿನಿಂದಾಗಿ ತೀವ್ರ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಯಿಂದ ಸಾವಿನ ಅಂಚಿನಲ್ಲಿದ್ದ ಮಹಿಳೆ ಯೊಬ್ಬರನ್ನು ಮೈಸೂರಿನ ಅಪೋಲೋ ಬಿಜಿಎಸ್ ಅಸ್ಪತ್ರೆಯ ವೈದ್ಯರ ತಂಡವು ನವೀನ ತಂತ್ರಜ್ಞಾನದ ಎಕ್ಮೋ (ಇಅಒಔ -ಎಕ್ಸ್‍ಟ್ರಾ ಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಶನ್) ಕಾರ್ಯ ವಿಧಾನದ ಮೂಲಕ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಅಪೋಲೋ ಬಿಜಿಎಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ.ನಾಗೇಂದ್ರ ಪ್ರಕಾಶ್ ಅವರು ಈ ಕುರಿತ ವಿವರಗಳನ್ನು ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉಸಿರಾಟದ ತೊಂದರೆಯಿಂದ ಆಸ್ಪತ್ರೆಯ…

ವಸತಿ ಶಾಲೆ ಪ್ರವೇಶಕ್ಕಾಗಿ ಮೇ 25ರವರೆಗೆ ಕೌನ್ಸಿಲಿಂಗ್
ಮೈಸೂರು

ವಸತಿ ಶಾಲೆ ಪ್ರವೇಶಕ್ಕಾಗಿ ಮೇ 25ರವರೆಗೆ ಕೌನ್ಸಿಲಿಂಗ್

May 23, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ ಹಾಗೂ ಅಂಬೇಡ್ಕರ್ ವಸತಿ ಶಾಲೆ ಗಳಿಗೆ 2019-20ನೇ ಸಾಲಿನ 6ನೇ ತರಗತಿ ಪ್ರವೇ ಶಾತಿಗೆ ಮೇ 25ರವರೆಗೆ ಕೌನ್ಸಿಲಿಂಗ್ ನಡೆಯಲಿದ್ದು, ವಿದ್ಯಾರ್ಥಿಗಳು ಸಕಾಲಕ್ಕೆ ಆಗಮಿಸುವಂತೆ ಜಿ.ಪಂ ಯೋಜನಾಧಿಕಾರಿ ಪ್ರಭುಸ್ವಾಮಿ ಮನವಿ ಮಾಡಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ 6ನೇ ತರಗತಿ ಪ್ರವೇಶ ಕೌನ್ಸಿ ಲಿಂಗ್‍ಗೆ ಚಾಲನೆ ನೀಡಿದ ಅವರು, ಜಿಲ್ಲೆಯಲ್ಲಿ 38 ವಸತಿ…

ಹುಲ್ಲಹಳ್ಳಿಯಲ್ಲಿ ಬಾರ್ ತೆರೆಯಲು ಗ್ರಾಮಸ್ಥರ ವಿರೋಧ
ಮೈಸೂರು

ಹುಲ್ಲಹಳ್ಳಿಯಲ್ಲಿ ಬಾರ್ ತೆರೆಯಲು ಗ್ರಾಮಸ್ಥರ ವಿರೋಧ

May 23, 2019

ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹುರ ರಸ್ತೆ, ರಾಜಕುಮಾರ್ ರಸ್ತೆಯಲ್ಲಿ ಈಗಾಗಲೇ ಮೂರು ವೈನ್ ಸ್ಟೋರ್‍ಗಳಿದ್ದರೂ ಸಿಎಲ್-07 ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಮುಂದಾಗಿರುವುದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗ್ರಾಮದ ಯುವ ಮುಖಂ ಡರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ನೇತೃತ್ವದಲ್ಲಿ ಮೈಸೂ ರಿನ ಅಬಕಾರಿ ಇಲಾಖೆ ಉಪ ಆಯು ಕ್ತರು ಮತ್ತು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು…

ಜಿತೋ ವತಿಯಿಂದ ಪುಲ್ವಾಮಾ ದಾಳಿಯ ಹುತಾತ್ಮರ ಕುಟುಂಬಕ್ಕೆ ಪರಿಹಾರ ಧನ
ಮೈಸೂರು

ಜಿತೋ ವತಿಯಿಂದ ಪುಲ್ವಾಮಾ ದಾಳಿಯ ಹುತಾತ್ಮರ ಕುಟುಂಬಕ್ಕೆ ಪರಿಹಾರ ಧನ

May 23, 2019

ಮೈಸೂರು: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ (ಜಿತೋ)ನ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಕಾರ್ಯಕ್ರಮ ಇತ್ತೀಚೆಗೆ ಮೈಸೂರು ವೈದ್ಯಕೀಯ ಕಾಲೇಜು ಸಭಾಂ ಗಣದಲ್ಲಿ ನಡೆಯಿತು. ಪ್ರವೀಣ್ ದಂತೇ ವಾಡಿಯಾ ಜೈನ್ ಅಧ್ಯಕ್ಷರಾಗಿ, ಬಿ.ಕೆ. ದೀಪಕ್ ಕುಮಾರ್ ಜೈನ್ ಪ್ರಧಾನ ಕಾರ್ಯದರ್ಶಿ, ಪ್ರಕಾಶ್ ದಕ್ ಮತ್ತು ಕಾಂತಿಲಾಲ್ ಜೈನ್ ಉಪಾಧ್ಯಕ್ಷರು, ಗೌತಮ್ ಸಾಲೇಚಾ ಕಾರ್ಯ ದರ್ಶಿ, ರಾಜನ್ ಬಾಗ್‍ಮಾರ್ ಖಜಾಂಚಿ ಹಾಗೂ ಗೌತಮ್ ಲುಂಕರ್ ಸಹ ಖಜಾಂಚಿ, ಭಾಗ್ಯವಂತಿ ಚೌಹಾನ್-ಮಹಿಳಾಧ್ಯಕ್ಷೆ, ಕುಮಾರ್‍ಪಾಲ್ ಎಂ.ಜೈನ್-ಯುವಾ ಧ್ಯಕ್ಷರಾಗಿ ಪ್ರಮಾಣ ವಚನ…

ಪ್ರಾಥಮಿಕ ಶಿಕ್ಷಕರ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರು

ಪ್ರಾಥಮಿಕ ಶಿಕ್ಷಕರ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

May 23, 2019

ಮೈಸೂರು: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018- 19ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ಹುದ್ದೆಗಳಿಗೆ ನೇರ ನೇಮ ಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಮೇ 25 ಮತ್ತು 26ರಂದು ಜಿಲ್ಲೆಯ 15 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3437 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿ ದ್ದಾರೆ. ಮೇ 25ರಂದು ಬೆಳಿಗ್ಗೆ 10-30ರಿಂದ 1 ಗಂಟೆವರೆಗೆ ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2-30ರಿಂದ 5-30ರವರೆಗೆ…

1 979 980 981 982 983 1,611
Translate »