ಪ್ರಾಥಮಿಕ ಶಿಕ್ಷಕರ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರು

ಪ್ರಾಥಮಿಕ ಶಿಕ್ಷಕರ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

May 23, 2019

ಮೈಸೂರು: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018- 19ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ಹುದ್ದೆಗಳಿಗೆ ನೇರ ನೇಮ ಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಮೇ 25 ಮತ್ತು 26ರಂದು ಜಿಲ್ಲೆಯ 15 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3437 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿ ದ್ದಾರೆ. ಮೇ 25ರಂದು ಬೆಳಿಗ್ಗೆ 10-30ರಿಂದ 1 ಗಂಟೆವರೆಗೆ ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2-30ರಿಂದ 5-30ರವರೆಗೆ ಆಂಗ್ಲ ಭಾಷೆ ಪತ್ರಿಕೆ ಮತ್ತು ಮೇ 26 ರಂದು ಬೆಳಗ್ಗೆ 10-30ರಿಂದ 1 ಗಂಟೆವರೆಗೆ ಗಣಿತ, ವಿಜ್ಞಾನ, ಸಮಾಜ ಪತ್ರಿಕೆಗಳು ಹಾಗೂ ಮಧ್ಯಾಹ್ನ 2-30ರಿಂದ 4-30ರವರೆಗೆ ಭಾಷಾ ಸಾಮಥ್ರ್ಯ ಪತ್ರಿಕೆ ಪರೀಕ್ಷೆಗಳು ನಡೆಯುತ್ತವೆ. ಅಭ್ಯರ್ಥಿಗಳು ಪರೀಕ್ಷೆಗೆ ಅರ್ಧಗಂಟೆ ಮುಂಚೆ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಲು ಹಾಗೂ ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ಬಳಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »