ಜಿತೋ ವತಿಯಿಂದ ಪುಲ್ವಾಮಾ ದಾಳಿಯ ಹುತಾತ್ಮರ ಕುಟುಂಬಕ್ಕೆ ಪರಿಹಾರ ಧನ
ಮೈಸೂರು

ಜಿತೋ ವತಿಯಿಂದ ಪುಲ್ವಾಮಾ ದಾಳಿಯ ಹುತಾತ್ಮರ ಕುಟುಂಬಕ್ಕೆ ಪರಿಹಾರ ಧನ

May 23, 2019

ಮೈಸೂರು: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ (ಜಿತೋ)ನ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಕಾರ್ಯಕ್ರಮ ಇತ್ತೀಚೆಗೆ ಮೈಸೂರು ವೈದ್ಯಕೀಯ ಕಾಲೇಜು ಸಭಾಂ ಗಣದಲ್ಲಿ ನಡೆಯಿತು. ಪ್ರವೀಣ್ ದಂತೇ ವಾಡಿಯಾ ಜೈನ್ ಅಧ್ಯಕ್ಷರಾಗಿ, ಬಿ.ಕೆ. ದೀಪಕ್ ಕುಮಾರ್ ಜೈನ್ ಪ್ರಧಾನ ಕಾರ್ಯದರ್ಶಿ, ಪ್ರಕಾಶ್ ದಕ್ ಮತ್ತು ಕಾಂತಿಲಾಲ್ ಜೈನ್ ಉಪಾಧ್ಯಕ್ಷರು, ಗೌತಮ್ ಸಾಲೇಚಾ ಕಾರ್ಯ ದರ್ಶಿ, ರಾಜನ್ ಬಾಗ್‍ಮಾರ್ ಖಜಾಂಚಿ ಹಾಗೂ ಗೌತಮ್ ಲುಂಕರ್ ಸಹ ಖಜಾಂಚಿ, ಭಾಗ್ಯವಂತಿ ಚೌಹಾನ್-ಮಹಿಳಾಧ್ಯಕ್ಷೆ, ಕುಮಾರ್‍ಪಾಲ್ ಎಂ.ಜೈನ್-ಯುವಾ ಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪರಿಹಾರ ಧನ: ಇದೇ ವೇಳೆ ಪುಲ್ವಾಮಾ ದಾಳಿಯ ಹುತಾತ್ಮರ ಕುಟುಂಬಕ್ಕೆ ಜೈನ್ ಇಂಟರ್‍ನ್ಯಾಷನಲ್ ಟ್ರೇಡ್ ಆರ್ಗನೈಜೇ ಷನ್ (ಜಿತೋ) ವತಿಯಿಂದ ದೇಶಾದ್ಯಂತ ಸಂಗ್ರಹಿಸಿದ್ದ 3,80,000 ರೂ. ಪರಿಹಾರ ಧನವನ್ನು ಪ್ರತಿ ಕುಟುಂಬಕ್ಕೆ ನೀಡ ಲಾಗುತ್ತಿದೆ. ಮೈಸೂರು ವಿಭಾಗದಲ್ಲಿ ಮಂಡ್ಯ ಜಿಲ್ಲೆಯ ಗುರು ಅವರ ಧರ್ಮ ಪತ್ನಿ ಶ್ರೀಮತಿ ಕಲಾವತಿ ಮತ್ತು ಹಾಸನ ಜಿಲ್ಲೆಯ ಚಂದ್ರ ಅವರ ಧರ್ಮಪತ್ನಿ ಶ್ರೀಮತಿ ಪೃಥ್ವಿ ಅವರಿಗೆ ತಲಾ 3,80,000 ರೂಪಾಯಿಗಳ ಚೆಕ್ ಅನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.
ಮಹಾಶಯ ಸಮೂಹ ಸಂಸ್ಥೆಗಳ ಗುಲಾಬ್‍ಚಂದ್ ಸಾಲೇಚಾ ದೀಪ ಬೆಳ ಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಅಧ್ಯಕ್ಷ ಟಿಕಮ್‍ಚಂದ್ ಜೈನ್ ಸ್ವಾಗತಿಸಿದರೆ, ರಾಷ್ಟ್ರೀಯ ನಿರ್ದೇಶಕರು ಹಾಗೂ ಕರ್ನಾಟಕ ಕೇರಳಾ ಗೋವಾ ಕ್ಷೇತ್ರದ ಅಧ್ಯಕ್ಷರಾದ ಓಂಪ್ರಕಾಶ್ ಜೈನ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ರಾಷ್ಟ್ರೀಯ ನಿರ್ದೇಶಕರು ಹಾಗೂ ಮೈಸೂರು ಘಟ ಕದ ಉಸ್ತುವಾರಿಗಳಾದ ಜೀತ್‍ಮಲ್ ಜೈನ್ ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧನೆ ಮಾಡಿದರೆ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ದೀಪಕ್ ಕುಮಾರ್ ಜೈನ್ ಕಾರ್ಯಕ್ರಮ ನಿರೂ ಪಣೆ ಮಾಡಿದರು. ಜಯಕುಮಾರ್ ಸಾಲೇಚಾ, ಮಹಾವೀರ ಗಾದಿಯಾ, ಪ್ರಕಾಶ್ ದಕ್ ಅವರು ನೂತನ ಪದಾಧಿಕಾರಿಗಳ, ಸದ ಸ್ಯರು ಹಾಗೂ ಹುತಾತ್ಮರ ಕುಟುಂಬದವರ ಪರಿಚಯ ಮಾಡಿಕೊಟ್ಟರು. ಕ್ಷೇತ್ರದ ಕಾರ್ಯ ದರ್ಶಿ ರಮೇಶ್ ಓಸ್ವಾಲ್, ಮಾಜಿ ನಿರ್ದೇ ಶಕ ಗೌತಮ್ ದೇಸರಲಾ ಉಪಸ್ಥಿತರಿ ದ್ದರು. ನಂತರ ನಡೆದ ಹಾಸ್ಯ ಕವಿ ಸಮ್ಮೇ ಳನದಲ್ಲಿ ಜಗದೀಪ್ ಹರ್ಶದರ್ಶಿ, ಕೈಲಾಶ್ ಜೈನ್ ತರಲ್, ಜಾನಿ ಬೈರಾಗಿ, ನವೀನ್ ಪಾರ್ಥ, ಬ್ರಿಜರಾಜ್ ಸಿಂಗ್ ಬ್ರಜ್, ಡಾ. ಲೋಕೇಶ್ ಜಾಡಿಯಾ, ವ್ಯಂಜನಾ ಶುಕ್ಲಾ ರವರು ಹಾಸ್ಯ ಹಾಗೂ ವೀರ ರಸ ಕಾವ್ಯ ಗಳನ್ನು ಮಂಡಿಸಿದರು.

Translate »