ಹುಲ್ಲಹಳ್ಳಿಯಲ್ಲಿ ಬಾರ್ ತೆರೆಯಲು ಗ್ರಾಮಸ್ಥರ ವಿರೋಧ
ಮೈಸೂರು

ಹುಲ್ಲಹಳ್ಳಿಯಲ್ಲಿ ಬಾರ್ ತೆರೆಯಲು ಗ್ರಾಮಸ್ಥರ ವಿರೋಧ

May 23, 2019

ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹುರ ರಸ್ತೆ, ರಾಜಕುಮಾರ್ ರಸ್ತೆಯಲ್ಲಿ ಈಗಾಗಲೇ ಮೂರು ವೈನ್ ಸ್ಟೋರ್‍ಗಳಿದ್ದರೂ ಸಿಎಲ್-07 ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಮುಂದಾಗಿರುವುದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಗ್ರಾಮದ ಯುವ ಮುಖಂ ಡರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ನೇತೃತ್ವದಲ್ಲಿ ಮೈಸೂ ರಿನ ಅಬಕಾರಿ ಇಲಾಖೆ ಉಪ ಆಯು ಕ್ತರು ಮತ್ತು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡದಂತೆ ಒತ್ತಾಯಿ ಸಿದ್ದಾರೆ. ಈ ಹಿಂದೆ ಇದೇ ಕಟ್ಟಡದಲ್ಲಿ ಸರ್ಕಾರದಿಂದ ಎಂಎಸ್‍ಐಎಲ್ ಮಳಿಗೆ ತೆರೆಯಲು ಉದ್ದೇಶಿಸಿದ್ದು, ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಟ್ಟಡದ ಅಕ್ಕ ಪಕ್ಕದಲ್ಲಿ ಕಲ್ಯಾಣ ಮಂಟಪ, ಚಿತ್ರಮಂದಿರ, ಜೆಎಸ್‍ಎಸ್ ಪ್ರೌಢಶಾಲೆ, ಸರ್ಕಾರಿ ಬಾಲಕಿ ಯರ ಪ್ರೌಢಶಾಲೆ, ಸರ್ಕಾರಿ ಕಾಲೇಜು, ಪ್ರೌಢಶಾಲೆ, ಮಾಜಿ ಸಚಿವ ಡಿ.ಟಿ.ಜಯ ಕುಮಾರ್ ಪುತ್ಥಳಿ ಇದೆ. ಅಲ್ಲದೆ ಈ ಸ್ಥಳದಲ್ಲಿ ಎಂಎಸ್‍ಐಎಲ್ ಮಳಿಗೆ ಪ್ರಾರಂ ಭಿಸಿದರೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆಂದು ಈ ಹಿಂದೆ ಅಬಕಾರಿ ಅಧಿಕಾರಿಗಳು ಮೇಲಧಿಕಾರಿ ಗಳಿಗೆ ವರದಿ ಸಲ್ಲಿಸಿದ್ದರು. ಹೀಗಿದ್ದರೂ ಎಂಎಸ್‍ಐಎಲ್‍ಗೇ ಯೋಗ್ಯವಲ್ಲದ ಸ್ಥಳದಲ್ಲಿ ಅಂದರೆ ರಾಜಕುಮಾರ್ ರಸ್ತೆ ಯಲ್ಲಿ 3-4 ಮಂದಿ ಪಾಲುದಾರರು ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಲಾಡ್ಜ್ ಅನ್ನು ತೆರೆಯಲು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ಕಾನೂನು ಬಾಹಿರವಾಗಿ ಎನ್‍ಓಸಿ ಪಡೆದಿದ್ದಾರೆ ಎಂದು ಮನವಿಯಲ್ಲಿ ದೂರಿ ದ್ದಾರೆ. ಎಂಎಸ್‍ಐಎಲ್‍ಗೆ ಯೋಗ್ಯವಲ್ಲದ ಸ್ಥಳದಲ್ಲಿ ಜನರ ವಿರೋಧದ ನಡು ವೆಯೂ ಬಾರ್ ತೆರೆಯಲು ಅನುಮತಿ ನೀಡಿದರೆ ಹುಲ್ಲಹಳ್ಳಿ ಬಂದ್ ಮಾಡಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.ಗ್ರಾಮದ ಮುಖಂಡರ ನಿಯೋಗದಲ್ಲಿ ಪುನೀತ್, ಮಹದೇವಸ್ವಾಮಿ, ಸೋಮ ಶೇಖರ್, ಚಾಮರಾಜು, ಮಂಜು ಇನ್ನಿ ತರರು ಉಪಸ್ಥಿತರಿದ್ದರು.

Translate »