ವಸತಿ ಶಾಲೆ ಪ್ರವೇಶಕ್ಕಾಗಿ ಮೇ 25ರವರೆಗೆ ಕೌನ್ಸಿಲಿಂಗ್
ಮೈಸೂರು

ವಸತಿ ಶಾಲೆ ಪ್ರವೇಶಕ್ಕಾಗಿ ಮೇ 25ರವರೆಗೆ ಕೌನ್ಸಿಲಿಂಗ್

May 23, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ ಹಾಗೂ ಅಂಬೇಡ್ಕರ್ ವಸತಿ ಶಾಲೆ ಗಳಿಗೆ 2019-20ನೇ ಸಾಲಿನ 6ನೇ ತರಗತಿ ಪ್ರವೇ ಶಾತಿಗೆ ಮೇ 25ರವರೆಗೆ ಕೌನ್ಸಿಲಿಂಗ್ ನಡೆಯಲಿದ್ದು, ವಿದ್ಯಾರ್ಥಿಗಳು ಸಕಾಲಕ್ಕೆ ಆಗಮಿಸುವಂತೆ ಜಿ.ಪಂ ಯೋಜನಾಧಿಕಾರಿ ಪ್ರಭುಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರಿನ ನಜರ್‍ಬಾದ್‍ನಲ್ಲಿರುವ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ 6ನೇ ತರಗತಿ ಪ್ರವೇಶ ಕೌನ್ಸಿ ಲಿಂಗ್‍ಗೆ ಚಾಲನೆ ನೀಡಿದ ಅವರು, ಜಿಲ್ಲೆಯಲ್ಲಿ 38 ವಸತಿ ಶಾಲೆಗಳಿದ್ದು, 1840 ಸೀಟ್‍ಗಳಿಗೆ ಕೌನ್ಸಿಲಿಂಗ್ ನಡೆಯುತ್ತಿದೆ. ಒಂದು ಸೀಟ್‍ಗೆ ಇಬ್ಬರಂತೆ ಸಂದ ರ್ಶನಕ್ಕೆ ಕರೆಯಲಾಗಿದೆ. ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ನಾಳೆ(ಮೇ 23) ಕೌನ್ಸಿ ಲಿಂಗ್ ಇರುವುದಿಲ್ಲ. ಇನ್ನೆರಡು ದಿನಗಳ ಅವಧಿ ಯಲ್ಲಿ ವಿದ್ಯಾರ್ಥಿಗಳು ಕೌನ್ಸಿಲಿಂಗ್‍ಗೆ ಆಗಮಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಕೋರಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ ಮಾತನಾಡಿ, ನಮ್ಮ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಲ್ಲಾ ವಸತಿ ಶಾಲೆಗಳಲ್ಲಿ ಉತ್ತಮ ಫಲಿ ತಾಂಶ ಬರುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗು ತ್ತಿದೆ. ಪ್ರತಿ ವಸತಿ ಶಾಲೆಗೆ 50 ಮಕ್ಕಳಂತೆ ಆಯ್ಕೆ ಮಾಡಲಾಗುತ್ತದೆ. ಸೀಟು ಸಿಕ್ಕಿರುವ ವಿದ್ಯಾರ್ಥಿಗಳು ತಮ್ಮೂರಿಗೆ ವಿದ್ಯಾರ್ಥಿನಿಲಯ ದೂರವಿದೆ ಎಂಬ ಕಾರಣ ನೀಡಿ ಬಿಟ್ಟು ಹೋಗಬಾರದು. ಚೆನ್ನಾಗಿ ಓದಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು. ಸೀಟು ಕೊಡಿಸುತ್ತೇವೆಂದು ಯಾರಾದರೂ ಹಣ ಕೇಳಿದರೆ ಕೊಡಬೇಡಿ. ಮಧ್ಯ ವರ್ತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಕ್ರೈಸ್ಟ್ ಸಂಸ್ಥೆಯ ಆಡಳಿತ ವಿಭಾಗದ ಉಪ ನಿರ್ದೇಶಕ ಶಿವಕುಮಾರ್ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜನಾಧಿಕಾರಿ ಹೇಮಕುಮಾರ್, ಸಿ.ರಂಗನಾಥ್ ಸೇರಿದಂತೆ 30 ವಸತಿ ಶಾಲೆಗಳ ಪ್ರಾಂಶುಪಾಲರು ಪಾಲ್ಗೊಂಡಿದ್ದರು.

Translate »