ಸಾವಿನಂಚಿನಲ್ಲಿದ್ದ ಸವಿತಾಗೆ `ಹೊಸ ಉಸಿರು’ ತುಂಬಿದ `ಎಕ್ಮೋ’!
ಮೈಸೂರು

ಸಾವಿನಂಚಿನಲ್ಲಿದ್ದ ಸವಿತಾಗೆ `ಹೊಸ ಉಸಿರು’ ತುಂಬಿದ `ಎಕ್ಮೋ’!

May 23, 2019

ಮೈಸೂರು: ಹೆಚ್1ಎನ್1 ಸೋಂಕಿನಿಂದಾಗಿ ತೀವ್ರ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಯಿಂದ ಸಾವಿನ ಅಂಚಿನಲ್ಲಿದ್ದ ಮಹಿಳೆ ಯೊಬ್ಬರನ್ನು ಮೈಸೂರಿನ ಅಪೋಲೋ ಬಿಜಿಎಸ್ ಅಸ್ಪತ್ರೆಯ ವೈದ್ಯರ ತಂಡವು ನವೀನ ತಂತ್ರಜ್ಞಾನದ ಎಕ್ಮೋ (ಇಅಒಔ -ಎಕ್ಸ್‍ಟ್ರಾ ಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಶನ್) ಕಾರ್ಯ ವಿಧಾನದ ಮೂಲಕ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.

ಅಪೋಲೋ ಬಿಜಿಎಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ.ನಾಗೇಂದ್ರ ಪ್ರಕಾಶ್ ಅವರು ಈ ಕುರಿತ ವಿವರಗಳನ್ನು ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಸಿರಾಟದ ತೊಂದರೆಯಿಂದ ಆಸ್ಪತ್ರೆಯ ತುರ್ತುಸ್ಥಿತಿ ವಿಭಾಗಕ್ಕೆ ಬಂದ ಮಳವಳ್ಳಿಯ ಬಳಿಯ ಭುಗತನಹಳ್ಳಿಯ ವೆಂಕಟೇಶ್ ಎಂಬವರ ಪತ್ನಿ ಸವಿತಾ (36) ಅವರ ರೋಗ ಲಕ್ಷಣಗಳು ಗಣನೀಯವಾಗಿ ಹೆಚ್ಚಾ ಗುತ್ತಿತ್ತು. ಅವರನ್ನು ತೀವ್ರ ನಿಗಾ ಘಟಕ ದಲ್ಲಿ ಅಧಿಕ ಹರಿವಿನ ಆಮ್ಲಜನಕ, ಚುಚ್ಚು ಮದ್ದಿನ ಆಂಟಿಬಯಾಟಿಕ್ ವಿಶೇಷ ಔಷಧ ಗಳನ್ನು ನೀಡಿ ವೆಂಟಿಲೇಟರ್‍ನಲ್ಲಿ (ಪ್ರೋನ್ ವೆಂಟಿಲೇಷನ್ ಎಂದು ಕರೆಯಲ್ಪಡುವ ವಿಶೇಷ ರೀತಿಯ ವೆಂಟಿಲೇಷನ್) ಇರಿಸ ಲಾಯಿತು. ಅಂತಹ ಉನ್ನತ ಮಟ್ಟದ ವೈದ್ಯಕೀಯ ಆರೈಕೆಗೂ ಅವರು ಪ್ರತಿಕ್ರಿ ಯಿಸದಿದ್ದಾಗ, ಕೃತಕ ಶ್ವಾಸಕೋಶದಂತೆ ಕಾರ್ಯ ನಿರ್ವಹಿಸುವ ನವೀನ ತಂತ್ರ ಜ್ಞಾನದ `ಎಕ್ಮೋ’ ಕಾರ್ಯವಿಧಾನವನ್ನು ನೆರವೇರಿಸಲಾಯಿತು. ಈ ಆಧುನಿಕ ಸೂಕ್ಷ್ಮಯಂತ್ರವು ಶ್ವಾಸಕೋಶದ ಕೆಲಸ ವನ್ನು ಅಂದರೆ, ರಕ್ತಕ್ಕೆ ತಾಜಾ ಆಮ್ಲಜ ನಕವನ್ನು ಸರಬರಾಜು ಮಾಡಿ, ರಕ್ತದಿಂದ ಇಂಗಾಲದ ಡೈ ಆಕ್ಸೈಡ್ ಅನ್ನು ತೆಗೆದು ಹಾಕುವುದನ್ನು ನಿರ್ವಹಿಸುತ್ತದೆ ಎಂದರು.

ಈ ಯಂತ್ರವು ಕೃತಕ ಶ್ವಾಸಕೋಶದಂತೆ ಕಾರ್ಯನಿರ್ವಹಿಸುವುದರಿಂದ ಅದನ್ನು ಶ್ವಾಸಕೋಶಗಳಿಗಾಗಿ ಇರುವ ಡಯಾ ಲಿಸಿಸ್ ಎಂದು ಪರಿಗಣಿಸಲಾಗುತ್ತದೆ. ಕಾಯಿಲೆಯಿಂದ ಚೇತರಿಸಿಕೊಳ್ಳಲು ಎಕ್ಮೋ ಶ್ವಾಸಕೋಶಗಳಿಗೆ ವಿಶ್ರಾಂತಿ ನೀಡುತ್ತದೆ. ದೇಹದಿಂದ ಹೊರಗೆ ಆಮ್ಲಜನಕವನ್ನು ಒದಗಿಸುತ್ತದೆ. ಆದರೆ ವೆಂಟಿಲೇಟರ್ ದೇಹದ ಒಳಗಿನಿಂದ ಆಮ್ಲೀಕರಣ ಮಾಡುತ್ತದೆ. ಈ ಯಂತ್ರದ ಜೋಡಣೆ ಯನ್ನು ಕಾರ್ಡಿಯಾಲಜಿ (ಹೃದ್ರೋಗ ಚಿಕಿತ್ಸಾ) ತಂಡದ ನೆರವಿನೊಂದಿಗೆ ಸಾಧಿಸ ಲಾಯಿತು ಎಂದು ಹೇಳಿದರು.
ಎಕ್ಮೋ ಯಂತ್ರದೊಳಗೆ ಮತ್ತು ಹೊರಗೆ ರಕ್ತವನ್ನು ಪೂರೈಸಲು ನಾವು ಹಲವಾರು ಕೊಳವೆಗಳನ್ನು ಅಳವಡಿಸಿದ್ದೆವು. 15 ದಿನಗಳ ಬಳಿಕ ಸುಧಾರಿಸಿಕೊಳ್ಳಲಾರಂಭಿ ಸಿದ ಸವಿತಾರಿಗೆ ಈ ಅವಧಿಯಲ್ಲಿ ಅನೇಕ ಏರುಪೇರುಗಳಾಗಿದ್ದವು. ವೈದ್ಯರು, ಇಂಟೆ ನ್ಸಿವಿಸ್ಟ್, ಪ್ಯಾರಾಮೆಡಿಕ್ಸ್, ನರ್ಸ್‍ಗಳ ತಂಡ ರೋಗಿಯ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿ ಅಗತ್ಯ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುತ್ತಿತ್ತು. ಇದರಿಂದ ಅವರನ್ನು ಹೊರ ತಂದ ಬಳಿಕ ಇನ್ನೂ ಕೆಲವು ದಿನಗಳವರೆಗೆ ವೆಂಟಿಲೇಟರ್‍ನಲ್ಲೇ ಮುಂದುವರಿಸಲಾಯಿತು.

ನಮ್ಮ ಆಸ್ಪತ್ರೆಯ ಡಾ.ಮಧು ನೇತೃತ್ವದ ಪಲ್ಮನಾಲಜಿ (ಶ್ವಾಸಕೋಶಶಾಸ್ತ್ರ) ತಂಡ, ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ಸ್ ಡಾ.ಹರೀಶ್ ನಾಯಕ್, ಡಾ.ರಾಮಕೃಷ್ಣ, ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಶಿಲ್ಪಾ ನೇತೃತ್ವದ ತಂಡ ನಡೆಸಿದ ಯಶಸ್ವಿ ಚಿಕಿತ್ಸಾ ಕ್ರಮ ಗಳಿಂದ ಸವಿತಾ ಸಂಪೂರ್ಣ ಚೇತರಿಸಿ ಕೊಂಡಿದ್ದಾರೆ. ಎಲ್ಲರಂತೆ ಆರೋಗ್ಯಕರ ಜೀವನ ನಡೆಸಲು ಸಿದ್ಧರಾಗಿದ್ದಾರೆ ಎಂದರು.

ಈ ವೇಳೆ ಹಾಜರಿದ್ದ ಸವಿತಾ ವೆಂಕ ಟೇಶ್, ತಮ್ಮ ಆರೋಗ್ಯವಂತ ಬದುಕಿಗೆ ಕಾರಣರಾದ ಅಪೋಲೋ ಆಸ್ಪತ್ರೆಯ ವೈದ್ಯರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿ ದರು. ಸುದ್ದಿಗೋಷ್ಠಿಯಲ್ಲಿ ಡಾ.ಮಧು, ಡಾ.ಹರೀಶ್‍ನಾಯಕ್, ಡಾ.ರಾಮಕೃಷ್ಣ, ಶಿಲ್ಪಾ, ಸವಿತಾರ ಸಂಬಂಧಿ ಚಂದ್ರ ಶೇಖರ್ ಉಪಸ್ಥಿತರಿದ್ದರು.

Translate »