ಮುಂಗಾರು ಪ್ರವೇಶ ವಿಳಂಬ: ರೈತರಲ್ಲಿ ಆತಂಕ ಬೇಡ
ಮೈಸೂರು

ಮುಂಗಾರು ಪ್ರವೇಶ ವಿಳಂಬ: ರೈತರಲ್ಲಿ ಆತಂಕ ಬೇಡ

May 23, 2019

ಮೈಸೂರು: ಪ್ರಸಕ್ತ ಮುಂಗಾರು ಮಾರುತದ ಪ್ರವೇಶ ವಿಳಂಬವಾಗಿದ್ದು, ಕೇರಳಕ್ಕೆ ಜೂ.6ರಂದು ಮುಂಗಾರು ಪ್ರವೇಶಿಸಲಿದೆ. ವಾಡಿಕೆ ಮಳೆ ಶೇ.96ರಷ್ಟು ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ನೀಡಿದ್ದು, ರೈತರು ಆತಂ ಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಮೈಸೂರು ನಾಗನಹಳ್ಳಿ ಕೃಷಿ ಹವಾಮಾನ ವಿಭಾಗದ ಪ್ರಕಟಣೆ ತಿಳಿಸಿದೆ.

ಮೇ 26ರವರೆಗೆ ಸಾಧಾರಣ ಮಳೆ ಸಾಧ್ಯತೆ

ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಮೇ 26 ರವರೆಗೆ ಮೋಡ ಕವಿದ ವಾತಾವರಣ ವಿದ್ದು, ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಮೇ 23ರಿಂದ 26 ರವರೆಗೆ ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 30ರಿಂದ 35 ಡಿಗ್ರಿ ಸೆಲ್ಸಿ ಯಸ್, ಕನಿಷ್ಟ ತಾಪಮಾನ 19ರಿಂದ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ.80ರಿಂದ 91ರವರೆಗೆ, ಮಧ್ಯಾಹ್ನದ ತೇವಾಂಶ ಶೇ.40ರಿಂದ 52ರವರೆಗೆ ಇರ ಲಿದೆ. ಗಾಳಿಯು ಗಂಟೆಗೆ ಸರಾಸರಿ 5-6 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 31-36 ಡಿಗ್ರಿ ಸೆಲ್ಸಿಯಸ್, ಕನಿಷ್ಟ 19.21 ಡಿಗ್ರಿ ಸೆಲ್ಸಿಯಸ್, ಬೆಳಗಿನ ಗಾಳಿಯ ತೇವಾಂಶ ಶೇ.76ರಿಂದ 89, ಮಧ್ಯಾಹ್ನದ ತೇವಾಂಶ ಶೇ.50-55, ಗಾಳಿಯ ವೇಗ 4-5 ಕಿ.ಮೀ. ಬೀಸುತ್ತದೆ.

ಕೊಡಗು ಜಿಲ್ಲೆಯಲ್ಲಿ ಗರಿಷ್ಟ ತಾಪ ಮಾನ 29-30 ಡಿಗ್ರಿ ಸೆಲ್ಸಿಯಸ್, ಕನಿಷ್ಟ ತಾಪಮಾನ 21-22 ಡಿಗ್ರಿ ಸೆಲ್ಸಿಯಸ್, ಬೆಳಗಿನ ಗಾಳಿಯ ತೇವಾಂಶ ಶೇ.75, ಮಧ್ಯಾಹ್ನದ ಗಾಳಿಯ ತೇವಾಂಶ ಶೇ. 70ರಿಂದ 76, ಗಾಳಿಯ ವೇಗ ಗಂಟೆಗೆ 5ರಿಂದ 7 ಕಿ.ಮೀ. ಇರಲಿದೆ. ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 32ರಿಂದ 37 ಡಿಗ್ರಿ ಸೆಲ್ಸಿಯಸ್, ಕನಿಷ್ಟ ತಾಪಮಾನ 21ರಿಂದ 24 ಡಿಗ್ರಿ ಸೆಲ್ಸಿಯಸ್, ಬೆಳಗಿನ ಗಾಳಿಯ ತೇವಾಂಶ ಶೇ.75ರಿಂದ 89, ಮಧ್ಯಾಹ್ನದ ಗಾಳಿಯ ತೇವಾಂಶ ಶೆ.40ರಿಂದ 45, ಗಾಳಿಯ ವೇಗ ಗಂಟೆಗೆ 4-5 ಕಿ.ಮೀ. ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ವಿಭಾಗ ತಿಳಿಸಿದೆ.

Translate »