ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಕ್ತರ ಮೋಡಿ ಮಾಡಿದ ಸಂಗೀತನಾದ
ಮೈಸೂರು

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಕ್ತರ ಮೋಡಿ ಮಾಡಿದ ಸಂಗೀತನಾದ

May 23, 2019

ಮೈಸೂರು: ಮೈಸೂರಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಆಂಗ್ ಕ್ಲುಂಗ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಜನೆ ಭಕ್ತರ ಮನತಣಿಸಿತು.

ಡಾ.ಅನುಸೂಯ ಕುಲಕರ್ಣಿ ಅವರ ನೇತೃತ್ವದಲ್ಲಿ ಮೊದಲಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರಚಿತ ‘ಪಾಹಿ ಪಾಹಿ ಗಜಾನನ’ ಹಾಡನ್ನು ಆದಿತಾಳ ದೊಂದಿಗೆ ಸಿಂದೂ ಬೈರವಿ ರಾಗದಲ್ಲಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ತೆಲುಗಿನ ‘ಜ್ಯೋತಿ ವೆಲೀಂ ಗಿದೆ’, ಸಂಸ್ಕøತದ ‘ಭಜ ಭಜ ದತ್ತಂ’, ‘ಕಲ್ಲಿಕಾಂ’, ಹಾಗೂ ‘ಪಾಲಯ ಮಾಹಿಮಾ’, ‘ರಾಗ ರಾಗಿಣಿ’, ಹಾಡು ಗಳನ್ನು ವಿಶೇಷ ಆಂಗ್‍ಕ್ಲುಂಗ್ ವಾದನ ದೊಂದಿಗೆ ಹಾಡಿ ಕೇಳುಗರನ್ನು ರಂಜಿಸಿದರು.

ತ್ಯಾಜರಾಜರ ‘ಶಾರ ಶಾರ’, ಮುಥಯ್ಯ ಭಾಗವತರ ‘ಸುಧಾಮಯಿ’, ಇಂಡೋ ನೆಷಿಯನ್ ಗೀತೆಯಾದ ‘ಹಾಲೋ ಹಾಲೋ ಬ್ಯಾಂಡಂಗ್’, ಜಾನಪದ ‘ಹಾಕಿಯ ಹರಿ ಗೋಲು’, ಧಯಾನಂದ ಸರಸ್ವತಿ ರಚಿತ ‘ಭೋ ಷೊಂಬೋ’, ಪುರಂದರದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ಹಾಗೂ ಬಾಲ ಮುರಳಿ ಕೃಷ್ಣನ ‘ತಿಲ್ಲಾನ’, ಭಜನೆಯನ್ನು ಹಾಡಿ ಕಲಾಭಿಮಾನಿಗಳ ಮನಗೆದ್ದರು.

ವಾದ್ಯಗೋಷ್ಠಿಯಲ್ಲಿ ಮೃದಂಗ ಬಿ.ಎನ್. ರಮೇಶ್, ವಯೋಲಿನ್ ಅಮೋಘ್, ಘಟಂನಲ್ಲಿ ರಘುನಂದನ್ ಹಾಗೂ ಹರಿಚರಣ್ ಸಹಕರಿಸಿದರು. ವೇಳೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Translate »