ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ ಅಂಬೇಡ್ಕರ್ ವಸತಿ ಶಾಲೆಗಳಿಗೆ 2019-20ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಕೌನ್ಸಿಲಿಂಗ್ ಪ್ರಾರಂಭವಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಸಿಪಿಓ ಪ್ರಭುಸ್ವಾಮಿ ತಿಳಿಸಿದರು. ನಜರ್‍ಬಾದ್‍ನಲ್ಲಿರುವ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ 6ನೇ ತರಗತಿ ಕೌನ್ಸಿಲಿಂಗ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 38 ವಸತಿ ಶಾಲೆಗಳಿದ್ದು 1840 ಸೀಟ್‍ಗಳಿಗೆ ಕೌನ್ಸಿಲಿಂಗ್ ನಡೆಯುತ್ತಿದೆ. ಒಂದು ಸೀಟ್‍ಗೆ ಇಬ್ಬರಂತೆ ಸಂದರ್ಶನಕ್ಕೆ…
ಬಿರುಗಾಳಿ-ಮಳೆ: ಇಬ್ಬರಿಗೆ ಗಾಯ, ಅಂಗಡಿಗಳಿಗೆ ಹಾನಿ
May 22, 2019ಮೈಸೂರು: ಮೈಸೂರಿನ ಕೆಲವೆಡೆ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಐದಾರು ಅಂಗಡಿಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ ಮೈಸೂರಿನ ಕೆಲ ಬಡಾವಣೆಗಳು ಹಾಗೂ ಹೊರ ವಲಯದಲ್ಲಿ ಮಳೆ ಸುರಿದಿದೆ. ಹೊಸ ಹುಂಡಿ ರಿಂಗ್‍ರೋಡ್‍ನಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ಐದಾರು ಅಂಗಡಿಗಳ ಮೇಲ್ಛಾವಣಿ ಶೀಟ್‍ಗಳು ಹಾರಿ ಹೋಗಿವೆ. ಒಂದೆರಡು ಅಂಗ ಡಿಯ ಗೋಡೆಗೂ ಹಾನಿಯಾಗಿದೆ. ಅಂಗಡಿಗಳ ಒಳಗಿದ್ದ ವಸ್ತುಗಳೆಲ್ಲಾ ಮಳೆಯಲ್ಲಿ ತೋಯ್ದು, ನಷ್ಟವಾಗಿದೆ. ಅಲ್ಲದೆ ಅಂಗಡಿಯೊಂದರ ಬಳಿ ನಿಂತಿದ್ದ ಇಬ್ಬರಿಗೆ ಶೀಟ್ ಬಡಿದು ಗಾಯ ಗೊಂಡಿದ್ದಾರೆಂದು…
ರಾಜ್ಯದಲ್ಲಿ ಬಿಜೆಪಿ ಮೇಲುಗೈ
May 21, 2019ಬೆಂಗಳೂರು: ಕರ್ನಾಟಕ ರಾಜ್ಯದ 28 ಕ್ಷೇತ್ರಗಳಿಗೆ ನಡೆದ ಲೋಕಸಭಾ ಚುನಾವಣೆಯ ಸಿ-ವೋಟರ್ ಸಮೀಕ್ಷೆ ಹೊರ ಬಿದ್ದಿದ್ದು, ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ 7 ಸ್ಥಾನಗಳನ್ನು ಪಡೆಯಲಿದೆ. ದೇಶದ ಗಮನ ಸೆಳೆದಿದ್ದ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿನ ನಗೆ ಬೀರಲಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪುನರಾಯ್ಕೆ ಆಗಲಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ಆರ್.ಧ್ರುವ ನಾರಾಯಣ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ…
ಕಾಂಗ್ರೆಸ್-ಜೆಡಿಎಸ್‍ನ ಪ್ರಮುಖ ನಾಯಕರ ಸೋಲು: ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ
May 21, 2019ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ದೋಸ್ತಿ ಪಕ್ಷಗಳ ಘಟಾನುಘಟಿ ನಾಯಕರು ಸೋತು ಮನೆಗೆ ಹೋಗ ಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿವೆ. ದೇಶದ ಜನರು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಲು ಕಾತುರರಾಗಿದ್ದಾರೆ ಎಂದರು. 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ…
84 ಸಿಎ ನಿವೇಶನ ಹಂಚಿಕೆಗೆ ಉಪ ಸಮಿತಿ ರಚಿಸಲು ನಿರ್ಧಾರ
May 21, 2019ಮೈಸೂರು: ಸಿದ್ಧವಿರುವ 84 ನಾಗರಿಕ ಸೌಲಭ್ಯ ನಿವೇಶನ(ಅಂ siಣes)ಗಳ ಹಂಚಿಕೆಗೆ ಸಂಬಂಧಿಸಿದಂತೆ ಉಪ ಸಮಿತಿ ರಚಿಸಲು ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ) ನಿರ್ಧರಿಸಿದೆ. ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಹೆಚ್‍ಎಸ್ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದ ನಂತರ ಉಪ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಸಮಿತಿಯಲ್ಲಿ ಯಾವ ಯಾವ ಸದಸ್ಯರಿ ರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಮುಡಾ ಅಧ್ಯಕ್ಷರಿಗೇ ನೀಡಲಾಗಿದ್ದು, ಆದಷ್ಟು ಬೇಗ ಉಪ…
ಚಾಮರಾಜನಗರ ಬಳಿ ಗಾಯಗೊಂಡಿದ್ದ ಚಿರತೆ ಸೆರೆ
May 21, 2019ಚಾ.ನಗರ: ಗಾಯಗೊಂಡಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿರುವ ಘಟನೆ ತಾಲೂಕಿನ ಹೊನ್ನಹಳ್ಳಿ ಗ್ರಾಮದ ಜಮೀನಿನಲ್ಲಿ ಸೋಮವಾರ ನಡೆದಿದೆ. ಹೊನ್ನಹಳ್ಳಿ ಗ್ರಾಮದ ಮಹದೇವಶೆಟ್ಟಿ ಎಂಬುವರ ಪಂಪ್‍ಸೆಟ್ ಜಮೀನಿನ ಮನೆ ಮುಂದೆ ಚಿರತೆ ಮಲಗಿರುವುದನ್ನು ಮಹದೇವಶೆಟ್ಟಿ ಪುತ್ರ ನಾಗರಾಜು ಗಮನಿ ಸಿದ್ದಾರೆ. ಇದರಿಂದ ಗಾಬರಿಗೊಂಡ ನಾಗ ರಾಜು ಈ ವಿಷಯವನ್ನು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವುದಕ್ಕಿಂತ ಮುನ್ನವೇ ಚಿರತೆ ಮನೆ ಮುಂದಿನ ಜಾಗ ದಿಂದ ಜಮೀನಿನ ಪಕ್ಕದಲ್ಲಿದ್ದ ಕಾಲುವೆಗೆ…
ತಾಲೂಕು ಕೇಂದ್ರ ಬಸ್ ನಿಲ್ದಾಣಗಳಲ್ಲಿ ಸರ್ಕಾರಿ ಕಚೇರಿಗಳ ಸ್ಥಾಪನೆಗೆ ನಿರ್ಧಾರ
May 21, 2019ಬೆಂಗಳೂರು: ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ದೂರದಿಂದ ಬಂದ ರೈತರು ಮತ್ತು ಸಾರ್ವಜನಿಕರು ಬಸ್ ಇಳಿದ ನಂತರ ಕಚೇರಿಯಿಂದ ಕಚೇರಿಗೆ ಅಲೆಯುವು ದನ್ನು ತಪ್ಪಿಸಲು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಹೊಂದಿ ರುವ ಬಹುಮಹಡಿ ಕಟ್ಟಡಗಳನ್ನು ಪ್ರಾರಂಭಿಸಲಿದೆ. ಬಹುತೇಕ ತಾಲೂಕುಗಳಲ್ಲಿ ಕೆಲವು ಇಲಾಖೆಗಳಿಗೆ ಕಚೇರಿಗಳೇ ಇರುವುದಿಲ್ಲ. ಅಂತಹ ಅಧಿಕಾರಿಗಳು ಎಲ್ಲಿಯೂ ಕುಳಿತು ಕೆಲಸ ಮಾಡಬೇಕು. ಅವರನ್ನು ಹುಡುಕಲು…
ಧರ್ಮಸ್ಥಳದಲ್ಲಿ ತೀರಿಲ್ಲ ನೀರಿನ ಬವಣೆ: ಬಾಳೆಎಲೆ ಮೊರೆ ಹೋದ ಹೋಟೆಲ್ ಮಾಲೀಕರು!
May 21, 2019ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಅಭಾವವಿದ್ದು, ನೇತ್ರಾವತಿಯಲ್ಲೂ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಹೋಟೆಲ್ ಮಾಲೀಕರು ಬಾಳೆಎಲೆ ಮೊರೆ ಹೋಗಿದ್ದಾರೆ. ಮಂಗಳೂರಿನಿಂದ 75 ಕಿಮೀ ದೂರದಲ್ಲಿರುವ ಧರ್ಮಸ್ಥಳಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ, ಆದರೆ ಇಂತಹ ಪವಿತ್ರ ಸ್ಥಳದಲ್ಲಿ ನೀರಿನ ಅಭಾವ ತಲೆದೋರಿದೆ. ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಇತ್ತೀಚೆಗೆ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳು ಕೆಲವು ದಿನ ಬಿಟ್ಟು ಬರುವಂತೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮನವಿ…
ರಾಹುಲ್ ಕರೆ ಮೇರೆಗೆ ದೆಹಲಿಗೆ ತೆರಳಿದ ಸಿಎಂ ಕುಮಾರಸ್ವಾಮಿ
May 21, 2019ಬೆಂಗಳೂರು: ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಹೊರ ಬೀಳುತ್ತಿದ್ದಂತೆಯೇ ಯುಪಿಎ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾ ಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರೆಯ ಮೇರೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದರು. ನಿನ್ನೆಯಿಂದಲೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಚರ್ಚೆ ನಡೆಸಿದ ಬಳಿಕ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಯುಪಿಎ ಜೊತೆಗಿರುವ ಬಿಜೆಪಿಯೇತರ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಪಕ್ಷಗಳ…
ನೀರಿನ ಅಭಾವ: ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸ್ಥಗಿತ
May 21, 2019ತುಮಕೂರು: ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಿದ್ಧ ಗಂಗಾ ಮಠದ ವಸತಿ ಶಾಲೆಗೆ ವಿದ್ಯಾರ್ಥಿ ಗಳ ದಾಖಲಾತಿ ಸ್ಥಗಿತಗೊಳಿಸಲಾಗಿದೆ ಈಗಾಗಲೇ ನೀರಿನ ಸಮಸ್ಯೆ ಗಂಭೀರ ವಾಗಿದೆ. ಹೊಸದಾಗಿ ದಾಖಲಾಗಲು 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮತ್ತಷ್ಟು ಅರ್ಜಿಗಳು ಬಂದರೆ ಅವರನ್ನು ದಾಖಲಿಸಿಕೊಳ್ಳಬೇಕಾಗು ತ್ತದೆ. ನೀರಿನ ಸಮಸ್ಯೆ ಕಾರಣಕ್ಕೆ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಸಾಧ್ಯವಾ ಗುತ್ತಿಲ್ಲ. ಆದ್ದರಿಂದ 15 ದಿನ ಮುಂಚೆಯೇ ಅರ್ಜಿ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಎಸ್.ವಿಶ್ವ ನಾಥಯ್ಯ ತಿಳಿಸಿದರು.










