84 ಸಿಎ ನಿವೇಶನ ಹಂಚಿಕೆಗೆ ಉಪ ಸಮಿತಿ ರಚಿಸಲು ನಿರ್ಧಾರ
ಮೈಸೂರು

84 ಸಿಎ ನಿವೇಶನ ಹಂಚಿಕೆಗೆ ಉಪ ಸಮಿತಿ ರಚಿಸಲು ನಿರ್ಧಾರ

May 21, 2019

ಮೈಸೂರು: ಸಿದ್ಧವಿರುವ 84 ನಾಗರಿಕ ಸೌಲಭ್ಯ ನಿವೇಶನ(ಅಂ siಣes)ಗಳ ಹಂಚಿಕೆಗೆ ಸಂಬಂಧಿಸಿದಂತೆ ಉಪ ಸಮಿತಿ ರಚಿಸಲು ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ) ನಿರ್ಧರಿಸಿದೆ.

ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಹೆಚ್‍ಎಸ್ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದ ನಂತರ ಉಪ ಸಮಿತಿ ರಚಿಸಲು ತೀರ್ಮಾನಿಸಲಾಯಿತು.

ಸಮಿತಿಯಲ್ಲಿ ಯಾವ ಯಾವ ಸದಸ್ಯರಿ ರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಮುಡಾ ಅಧ್ಯಕ್ಷರಿಗೇ ನೀಡಲಾಗಿದ್ದು, ಆದಷ್ಟು ಬೇಗ ಉಪ ಸಮಿತಿ ರಚಿಸಿ ಸಭೆಗಳನ್ನು ಕರೆದು ಎಷ್ಟು ಸಿಎ ನಿವೇಶನಗಳನ್ನು ಹಂಚಬೇಕು, ಅಧಿ ಸೂಚನೆ ಹೊರಡಿಸಬೇಕೆಂಬುದರ ಬಗ್ಗೆ ನಿರ್ಧಾರ ಕೈಗೊಂಡು ಅನುಷ್ಠಾನಗೊಳಿಸು ವಂತೆಯೂ ಮುಡಾ ಸಭೆ ನಿರ್ಧರಿಸಿತು.

ಈ ಹಿಂದೆ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 84 ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆಗೆ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿತ್ತಾದರೂ, ಚುನಾವಣಾ ನೀತಿ ಸಂಹಿತೆ ಅಡ್ಡಿಬಂದ ಹಿನ್ನೆಲೆ ಯಲ್ಲಿ ಅರ್ಜಿಗಳನ್ನು ವಿತರಿಸಿರಲಿಲ್ಲ.

ನಂಜನಗೂಡು ಮೂಲದ ಶಿಕ್ಷಣ ಸಂಸ್ಥೆಯೊಂದು ತಮಗೆ ನಂಜನಗೂಡಿ ನಲ್ಲಿ ನೀಡಿರುವ ಸಿ.ಎ ನಿವೇಶನದ ಬದ ಲಾಗಿ ಮೈಸೂರು ನಗರದ ವಿಜಯನಗರ 4ನೇ ಹಂತದಲ್ಲಿ ಬದಲಿ ನಿವೇಶನ ಕೋರಿ ಸಲ್ಲಿಸಿದ್ದ ಅರ್ಜಿ ಮೇಲೆ ಚರ್ಚೆ ನಡೆಯಿತಾದರೂ, ನಂಜನಗೂಡಿಗೆ ಬದ ಲಿಯಾಗಿ ಅದಕ್ಕೆ ಸಮೀಪದ ಬಡಾ ವಣೆಗಳಲ್ಲಿ ಸಿ.ಎ ನಿವೇಶನ ನೀಡಬ ಹುದೇ ಹೊರತು, ಸುಮಾರು 25 ಕಿ.ಮೀ. ದೂರದ ಮೈಸೂರು ನಗರದಲ್ಲಿ ಕೊಡಲು ಬರು ವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಯಲ್ಲಿ ಅರ್ಜಿದಾರ ಶಿಕ್ಷಣ ಸಂಸ್ಥೆಗೆ ಹಿಂಬ ರಹ ನೀಡುವಂತೆ ಸೂಚಿಸಲಾಯಿತು.

ಸರ್ಕಾರದ ಆದೇಶ ಪಾಲನೆ: ಡಿ-ನೋಟಿಫೈ ಆಗಿರುವ ಮೈಸೂರು ತಾಲೂಕು, ಹಾಲಾಳು, ಯಡಹಳ್ಳಿ, ಕೇರ್ಗಳ್ಳಿ, ಚಿಕ್ಕಳ್ಳಿ ಮತ್ತು ಯಾಂದಳ್ಳಿ ಗ್ರಾಮಗಳ 140 ಎಕರೆ ಭೂಮಿಯಲ್ಲಿ ವಸತಿ ಬಡಾವಣೆ ನಿರ್ಮಿಸಲು 7 ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ನಿರಾಕ್ಷೇಪಣಾ ಪತ್ರ(ಓಔಅ) ನೀಡುವ ಮೂಲಕ ಸರ್ಕಾರದ ಸ್ಪಷ್ಟ ಆದೇಶ ಪಾಲನೆ ಮಾಡಲು ಸಭೆಯು ನಿರ್ಧರಿಸಿತು.

ಈ ವಿಷಯದ ಸಂಬಂಧ ಮೇ 10ರಂದು ನಡೆದ ಸಭೆಯಲ್ಲಿ ಸದಸ್ಯರಾದ ಸಂದೇಶ್ ನಾಗರಾಜ್ ಮತ್ತು ಮರಿ ತಿಬ್ಬೇಗೌಡರ ನಡುವೆ ವಾಕ್‍ಸಮರ ನಡೆದು, ಗದ್ದಲ ಏರ್ಪಟ್ಟ ಕಾರಣ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶೇಷ ಸಭೆ: ಪ್ರಾಧಿಕಾರಕ್ಕೆ ಆರ್ಥಿಕ ಸಂಕಷ್ಟದ ಸ್ಥಿತಿ ಇದ್ದರೂ 2018-19ನೇ ಸಾಲಿನಲ್ಲಿ ಸುಮಾರು 95 ಕೋಟಿ ರೂ.ಗಿಂತ ಹೆಚ್ಚು ಕಾಮಗಾರಿ ಕೈಗೊಂಡಿರುವುದನ್ನು ತಡೆ ಹಿಡಿಯಬೇಕೆಂಬ ಮುಡಾ ನೌಕರರ ಸಂಘದ ಅಧ್ಯಕ್ಷ ಪಿ.ಎಸ್.ಕಾಂತರಾಜು ಸಲ್ಲಿಸಿದ್ದ ದೂರಿನ ಸಂಬಂಧ ಗಂಭೀರ ಚರ್ಚೆ ನಡೆಸಿದ ಸದಸ್ಯರು, ಈ ಕುರಿತು ಪ್ರತ್ಯೇಕ ಸಮಿತಿ ರಚಿಸಿ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು.

ಇಂದಿನ ಸಭೆಯಲ್ಲಿ 200ಕ್ಕೂ ಹೆಚ್ಚು ವಿಷಯಗಳನ್ನು ಮಂಡಿಸಲಾಗಿತ್ತಾದರೂ, ಕೆಲವು ತಿರಸ್ಕøತಗೊಂಡು ಮತ್ತೆ ಕೆಲವು ಮುಂದೂಡಲ್ಪಟ್ಟು, ಉಳಿದವುಗಳನ್ನು ಅನುಮೋದಿಸಲಾಯಿತು. ಸಭೆಯಲ್ಲಿ ಸದಸ್ಯರಾದ ಸಂದೇಶ್ ನಾಗರಾಜ್, ಮರಿತಿಬ್ಬೇ ಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಟ್, ಬಿ.ಹರ್ಷವರ್ಧನ್, ರವೀಂದ್ರ ಶ್ರೀಕಂಠಯ್ಯ, ಕೆ.ಟಿ.ಶ್ರೀಕಂಠೇಗೌಡ, ನಾರಾಯಣ ಸ್ವಾಮಿ, ಆರ್.ಧರ್ಮ ಸೇನಾ, ಎಸ್‍ಬಿಎಂ ಮಂಜು, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್‍ಬಾಬು, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಟಿ.ಕೆ.ರವಿ ಹಾಗೂ ಇತರರು ಹಾಜರಿದ್ದರು.

Translate »