ದೇಶ-ವಿದೇಶ

ಕೇರಳದಲ್ಲಿ ಭಾರೀ ಮಳೆ: ಮುನ್ನಾರ್ ರೆಸಾರ್ಟ್‍ನಲ್ಲಿ ಸಿಲುಕಿರುವ 70 ಪ್ರವಾಸಿಗರು
ದೇಶ-ವಿದೇಶ

ಕೇರಳದಲ್ಲಿ ಭಾರೀ ಮಳೆ: ಮುನ್ನಾರ್ ರೆಸಾರ್ಟ್‍ನಲ್ಲಿ ಸಿಲುಕಿರುವ 70 ಪ್ರವಾಸಿಗರು

August 11, 2018

ತಿರುವನಂತಪುರಂ:  ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣ ಭೂಕುಸಿತ ಉಂಟಾ ಗಿದ್ದು, ಪ್ರಸಿದ್ದ ಪ್ರವಾಸಿತಾಣ ಮುನ್ನಾರ್ ರೆಸಾರ್ಟ್‍ನ ಮಾರ್ಗಗಳು ಮುಚ್ಚಿ ಹೋಗಿದೆ. ಸಧ್ಯ ಅಲ್ಲಿ 70 ಪ್ರವಾಸಿಗರು ಸಿಲುಕಿಕೊಂಡಿದ್ದು, ಇದ ರಲ್ಲಿಯೂ 20 ವಿದೇಶಿಯರು ಇದ್ದಾರೆ ಎಂದು ಹೇಳಲಾಗಿದೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನ್ಯವು ಹೆಲಿ ಕಾಪ್ಟರ್ ಬಳಸಿಕೊಂಡು ಹೆಚ್ಚುವರಿ ಪ್ರವಾಸಿಗರನ್ನು ಸ್ಥಳಾಂತರಿಸಿದೆ. ಮಳೆ ಮತ್ತು ಪ್ರವಾಹ ದಿಂದಾಗಿ ಅಪಾರ ಹಾನಿಗೊಳಗಾದ ಕೇರಳಕ್ಕೆ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ಸಾಧ್ಯವಿರುವ ಎಲ್ಲಾ ಸಹಾಯವನ್ನೂ ನೀಡುವುದಾಗಿ…

ಕರುಣಾನಿಧಿ ಅಂತ್ಯಕ್ರಿಯೆ
ದೇಶ-ವಿದೇಶ

ಕರುಣಾನಿಧಿ ಅಂತ್ಯಕ್ರಿಯೆ

August 9, 2018

ಚೆನ್ನೈ: ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ಮರಿನಾ ಬೀಚ್‍ನಲ್ಲಿರುವ ಅವರ ರಾಜಕೀಯ ಗುರು ಅಣ್ಣಾ ದೊರೈ ಅವರ ಸಮಾಧಿಗೆ ಹೊಂದಿ ಕೊಂಡಂತೆ ಸಾಂಪ್ರದಾಯಿಕ ವಿಧಿ-ವಿಧಾನಗಳಿಲ್ಲದೆ ದ್ರಾವಿಡ ವಿಧಿ-ವಿಧಾನದಂತೆ ನಡೆಯಿತು. ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್‍ನಲ್ಲಿ ಜಾಗ ನೀಡಲು ತಮಿಳು ನಾಡು ಸರ್ಕಾರ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಡಿಎಂಕೆ ಮಂಗಳವಾರ ರಾತ್ರಿಯೇ ಹೈಕೋರ್ಟ್ ಮೊರೆ ಹೋಗಿತ್ತು. ಮದರಾಸ್ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲು…

ಕರುಣಾನಿಧಿ ಇನ್ನಿಲ್ಲ
ದೇಶ-ವಿದೇಶ

ಕರುಣಾನಿಧಿ ಇನ್ನಿಲ್ಲ

August 8, 2018

ಚೆನ್ನೈ:  ದ್ರಾವಿಡ ಚಳುವಳಿಯ ಹೋರಾಟಗಾರ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಸಂಜೆ ನಿಧನರಾದರು. 94 ವರ್ಷ ವಯೋಮಾನದ ಅವರು ತೀವ್ರ ಅನಾರೋಗ್ಯದಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. 1924ರ ಜೂನ್ 3 ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುವಾರೂರ್‍ನಲ್ಲಿ ಜನಿಸಿದ ಅವರ ಮೂಲ ಹೆಸರು ದಕ್ಷಿಣಾಮೂರ್ತಿ. ತಮ್ಮ 14ನೇ ವರ್ಷದಲ್ಲೇ ರಾಜಕೀಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ಪೆರಿಯಾರ್ ಅವರ ದ್ರಾವಿಡ ಕಳಗಂನಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಿಂದೂ ವಿರೋಧಿ ಹೋರಾಟಗಳಲ್ಲಿ…

ಹಿರಿಯ ಕಾಂಗ್ರೆಸ್ ಮುಖಂಡ ಆರ್.ಕೆ. ಧವನ್ ನಿಧನ
ದೇಶ-ವಿದೇಶ

ಹಿರಿಯ ಕಾಂಗ್ರೆಸ್ ಮುಖಂಡ ಆರ್.ಕೆ. ಧವನ್ ನಿಧನ

August 7, 2018

ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಆರ್. ಕೆ. ಧವನ್ ನಿಧನ ರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.ಧವನ್ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಪ್ತರಾಗಿದ್ದರು. ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಇಂದಿರಾಗಾಂಧಿ ಹತ್ಯೆಯ ಪ್ರತ್ಯಕ್ಷದರ್ಶಿ ಕೂಡಾ ಆಗಿದ್ದರು. ಇಂದಿರಾಗಾಂಧಿ ಅವರ ಪ್ರಭಾವದಿಂದಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಧವನ್ ಬಲಾಢ್ಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಇಂದಿರಾಗಾಂಧಿ ಹತ್ಯೆ ನಂತರ ಸಿಖ್ ಹತ್ಯಾಕಾಂಡದಲ್ಲಿ ಇವರ ಹೆಸರು ಕೇಳಿಬಂದಿತ್ತು.

ಅತ್ಯಾಚಾರಿಗಳಿಗೆ ಗಲ್ಲು ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ದೇಶ-ವಿದೇಶ

ಅತ್ಯಾಚಾರಿಗಳಿಗೆ ಗಲ್ಲು ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

July 31, 2018

ನವದೆಹಲಿ: 12 ವರ್ಷದೊಳಗಿನ ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆಸುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅಂಕಿತ ಹಾಕಿದ್ದರು. ಇದೇ ವೇಳೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾಯಿದೆಗೆ ಲೋಕಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇನ್ನು ಕಾಯಿದೆಯಲ್ಲಿ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಇದಲ್ಲದೆ 16 ವರ್ಷದೊಳಗಿನ ಯುವತಿಯ ಮೇಲೆ ಅತ್ಯಾಚಾರ ನಡೆಸುವವರಿಗೆ ಕಠಿಣ ಶಿಕ್ಷೆ ನೀಡುವುದರ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ….

ಉತ್ತಮ ಆಡಳಿತದ ಲಾಭ ಪ್ರತಿಯೊಬ್ಬರನ್ನೂ ತಲುಪಬೇಕು
ದೇಶ-ವಿದೇಶ

ಉತ್ತಮ ಆಡಳಿತದ ಲಾಭ ಪ್ರತಿಯೊಬ್ಬರನ್ನೂ ತಲುಪಬೇಕು

July 30, 2018

ನವದೆಹಲಿ: ಉತ್ತಮ ಆಡ ಳಿತ ಹಾಗೂ ಅಭಿವೃದ್ಧಿಯ ಲಾಭಗಳು ಪ್ರತಿಯೊಬ್ಬರನ್ನೂ ತಲುಪಬೇಕು. ಇದು ನವ ಭಾರತದ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಭಾನುವಾರ ಹೇಳಿದ್ದಾರೆ. 46ನೇ ಆವೃತ್ತಿಯ ರೇಡಿಯೋ ಕಾರ್ಯ ಕ್ರಮದ ಮನ್ ಕಿ ಬಾತ್‍ನಲ್ಲಿ ಮಾತನಾಡಿರುವ ಮೋದಿಯವರು, ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು `ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂಬ ಘೋಷಣೆ ಯನ್ನು ಕೂಗಿದ್ದರು. ಜನರಲ್ಲಿ ಆತ್ಮವಿಶ್ವಾಸದ ಬೆಂಕಿಯನ್ನು ಹೊತ್ತಿಸಿದ್ದರು. ಇಂದು ಸೂರಜ್ ನನ್ನ ಜನ್ಮ ಸಿದ್ಧ ಹಕ್ಕು ಎಂದು ಒತ್ತಿ ಹೇಳಬೇಕಿದೆ….

ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಆರೋಗ್ಯ  ಸ್ಥಿತಿ ಗಂಭೀರ
ದೇಶ-ವಿದೇಶ

ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಆರೋಗ್ಯ  ಸ್ಥಿತಿ ಗಂಭೀರ

July 30, 2018

ಚೆನ್ನೈ: ಜ್ವರ ಮತ್ತು ಮೂತ್ರ ಸೋಂಕಿನಿಂದ ಬಳಲುತ್ತಿರುವ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯ ಮಂತ್ರಿ ಎಂ.ಕರುಣಾ ನಿಧಿ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಕೊಯಂಬತ್ತೂರು ಪ್ರವಾಸ ಮೊಟಕುಗೊಳಿಸಿ ಚೆನ್ನೈಗೆ ವಾಪಸ್ ಆಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿ ರುವ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಇಂದು ಸಂಜೆ ಮತ್ತಷ್ಟು ಗಂಭೀರವಾಗಿದ್ದು, ಆತಂಕಗೊಂಡ ಡಿಎಂಕೆ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ….

ಲೋಕಪಾಲ್ ನೇಮಕ ವಿಳಂಬ: ಅ.2ರಿಂದ  ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ
ದೇಶ-ವಿದೇಶ

ಲೋಕಪಾಲ್ ನೇಮಕ ವಿಳಂಬ: ಅ.2ರಿಂದ  ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

July 30, 2018

ರಾಲೇಗನ್ ಸಿದ್ಧಿ: ಲೋಕ ಪಾಲ ನೇಮಕ ವಿಳಂಬ ಮಾಡಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಅಕ್ಟೋಬರ್ 2 ರಿಂದ ಅನಿರ್ದಿಷ್ಟಾ ವಧಿ ಉಪವಾಸ ಸತ್ಯಾಗ್ರಹ ಹಮ್ಮಿ ಕೊಳ್ಳು ವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ತಮ್ಮ ಅಭಿಯಾನದಲ್ಲಿ ಸೇರಬೇಕೆಂದು ಅವರು ಜನರಲ್ಲಿ ಮನವಿ ಮಾಡಿದರು. ಮಹಾರಾಷ್ಟ್ರ ಅಹಮದ್ ನಗರ ಜಿಲ್ಲೆಯ ರಾಲೇ ಗನ್ ಸಿದ್ಧಿಯಲ್ಲಿ ಮಹಾತ್ಮಾ ಗಾಂಧಿ ಜಯಂತಿಯಾದ ಅ.2ರಿಂದ ತಾನು ಉಪವಾಸ ಪ್ರಾರಂಭಿಸು ವುದಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಜಾರೆ…

ಕೇಂದ್ರ ಸರ್ಕಾರಿ ನೌಕರರಿಗೆ ವಿದೇಶ ಪ್ರಯಾಣ ಭಾಗ್ಯ
ದೇಶ-ವಿದೇಶ

ಕೇಂದ್ರ ಸರ್ಕಾರಿ ನೌಕರರಿಗೆ ವಿದೇಶ ಪ್ರಯಾಣ ಭಾಗ್ಯ

July 30, 2018

ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರನ್ನು ವಿದೇಶಕ್ಕೆ ಕಳುಹಿ ಸುವ ಚಿಂತನೆ ನಡೆಸುತ್ತಿದೆ. ಕೇಂದ್ರ ಸರ್ಕಾರಿ ನೌಕರರು ವಿದೇಶಕ್ಕೆ ತೆರಳಲು ಅಧಿಕೃತ ಅವಕಾಶ ನೀಡುವಂತಹ ಲೀವ್ ಟ್ರಾವೆಲ್ ಕನ್ಸೆಷನ್(ಎಲ್‍ಟಿಸಿ) ಪ್ರಸ್ತಾವನೆಯು ಸದ್ಯ ಸಿಬ್ಬಂದಿ ಇಲಾಖೆಯ ಮುಂದಿದೆ. ಸಿಬ್ಬಂದಿ ಇಲಾಖೆ ಇದೀಗ ಗೃಹ, ಪ್ರವಾಸೋದ್ಯಮ, ನಾಗರಿಕ ವಾಯು ಯಾನ ಸಚಿವಾಲಯದ ಪ್ರತಿಕ್ರಿಯೆಯನ್ನು ಕೇಳಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಏಷ್ಯಾದ ರಾಷ್ಟ್ರಗಳಾದ ತಜಕಿಸ್ತಾನ್, ಕಿರ್ಗಿಸ್ತಾನ್, ಉಝ್ಬೆಕಿಸ್ತಾನ್, ತುರ್ಕಿಮೆನಿ ಸ್ತಾನ್ ಮತ್ತು ಕಝಕಿಸ್ತಾನ್‍ಗಳಿಗೆ ಮಾತ್ರ…

ಪಾಕ್ ಚುನಾವಣೆ; ಅತಂತ್ರ ಫಲಿತಾಂಶ
ದೇಶ-ವಿದೇಶ

ಪಾಕ್ ಚುನಾವಣೆ; ಅತಂತ್ರ ಫಲಿತಾಂಶ

July 27, 2018

ಇಸ್ಲಾಮಾಬಾದ್: ಬುಧ ವಾರ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃ ತ್ವದ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯಾಬಲ ಯಾವುದೇ ಪಕ್ಷಕ್ಕೆ ಸಿಕ್ಕಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ. 272 ಸ್ಥಾನಗಳ ಪೈಕಿ ಮಾಹಿತಿ ಪ್ರಕಾರ ಪಿಟಿಐ 112 ಸ್ಥಾನ ಗೆದ್ದಿದ್ದರೆ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಾರ್ಟಿ 63…

1 2 3 4 8
Translate »